ಕೊಹ್ಲಿಯ ಈ ಸಾಧನೆಗೂ ಮುನ್ನವೇ ವಿಶ್ ಮಾಡಿದ ದೋಸ್ತಿ ABD

Public TV
2 Min Read

ದುಬೈ: ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ತಂಡ ಶುರುವಾದಾಗಿನಿಂದಲೂ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಅವರಿಬ್ಬರ ಸ್ನೇಹ ಗೊತ್ತಿರದ ವಿಷಯವೇನಲ್ಲ. ಕೆಲ ವರ್ಷಗಳಲ್ಲಿ ಈ ಇಬ್ಬರ ಜೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮೆಚ್ಚುವಂತೆ ಮಾಡಿದೆ. ಇಬ್ಬರು ಕ್ರೀಸ್‌ಗಿಳಿದು ಅಬ್ಬರಿಸಿದ ಅವಿಸ್ಮರಣೀಯ ಕ್ಷಣಗಳನ್ನು ಅಭಿಮಾನಿಗಳು ಇನ್ನೂ ಮರೆತಿಲ್ಲ.

ಆದರೆ ಎಬಿಡಿ ಅವರು ನಿವೃತ್ತಿ ಘೋಷಿಸಿದ ನಂತರ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. 2022ರ 15ನೇ ಆವೃತ್ತಿ ಐಪಿಎಲ್ ಹಾಗೂ ಆ ನಂತರದಲ್ಲಿ ನಡೆದ ಏಕದಿನ ಪಂದ್ಯಗಳಲ್ಲೂ ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಆದರೆ ದೀರ್ಘ ವಿರಾಮದ ಬಳಿಕ ಏಷ್ಯಾಕಪ್-2022 ಟಿ20 ಮೂಲಕ ಮತ್ತೆ ತಂಡಕ್ಕೆ ಮರಳಿದ್ದಾರೆ. 

Virat Kohli, AB De Villiers RCB

ಅವರಿಂದು ತಮ್ಮ 100ನೇ ಪಂದ್ಯವನ್ನಾಡುವುದಕ್ಕೂ ಮುನ್ನವೇ ಕೊಹ್ಲಿ ಅವರ ಪಕ್ಕಾ ದೋಸ್ತಿ ಎಬಿಡಿ ಖ್ಯಾತಿಯ ಎಬಿ ಡಿವಿಲಿಯರ್ಸ್ ಶುಭ ಕೋರಿದ್ದಾರೆ. ಇದನ್ನೂ ಓದಿ: RCB ಫ್ಯಾನ್ಸ್‌ಗಳಿಗೆ ಭರ್ಜರಿ ಗುಡ್‌ನ್ಯೂಸ್ – ಎಬಿಡಿ ಮತ್ತೆ ಎಂಟ್ರಿ

ವಿರಾಟ್ ಕೊಹ್ಲಿ ಇಂದು T20 ಆವೃತ್ತಿಯ ತಮ್ಮ 100ನೇ ಪಂದ್ಯವನ್ನಾಡಲಿದ್ದು, ಏಕದಿನ, ಟೆಸ್ಟ್ ಹಾಗೂ ಟಿ20 ಆವೃತ್ತಿಗಳಲ್ಲಿ 100 ಪಂದ್ಯಗಳನ್ನು ಪೂರೈಸಿದ ಮೊದಲ ಭಾರತೀಯನಾಗಲಿದ್ದಾರೆ. ಕೊಹ್ಲಿ ಇಲ್ಲಿಯವರೆಗೆ 102 ಟೆಸ್ಟ್ ಮತ್ತು 262 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. T20 ನಲ್ಲಿ 99 ಪಂದ್ಯಗಳನ್ನಾಡಿರುವ ಅವರು ಇಂದು ಇಂಡೋ-ಪಾಕ್ ಕದನದಲ್ಲಿ 100ನೇ ಪಂದ್ಯವನ್ನಾಡಲಿದ್ದಾರೆ. ಈ ವಿಶೇಷ ಸಾಧನೆಗೆ ಸಾಕ್ಷಿಯಾಗುವಂತೆ ಎಬಿಡಿ ಶುಭ ಕೋರಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಕಂಗೊಳಿಸಲಿದೆ ಆರ್‌ಸಿಬಿ

ಈ ಕುರಿತು ಟ್ವೀಟ್‌ನಲ್ಲಿ ವೀಡಿಯೋ ಸಂದೇಶ ಹಂಚಿಕೊಂಡಿರುವ ಎಬಿಡಿ `ಎಲ್ಲಾ ಮೂರು ಮಾದರಿಗಳಲ್ಲೂ 100 ಪಂದ್ಯಗಳನ್ನಾಡಿದ ಮೊದಲ ಭಾರತೀಯನಾಗುತ್ತಿರುವ ನನ್ನ ಉತ್ತಮ ಸ್ನೇಹಿತ ವಿರಾಟ್ ಕೊಹ್ಲಿ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಎಂತಹ ಅದ್ಭುತ ಸಾಧನೆ ವಿರಾಟ್ ನಿಮ್ಮದು. ನಿಮ್ಮ ಬಗ್ಗೆ ನಮಗೆಲ್ಲರಿಗೂ ತುಂಬಾ ಹೆಮ್ಮೆ ಇದೆ. ನಿಮ್ಮ 100ನೇ ಟಿ20 ಅಂತರಾಷ್ಟ್ರೀಯ ಆಟ ಎಲ್ಲರಿಗೂ ಅತ್ಯುತ್ತಮವಾಗಿರಲಿ. ನಾವು ನಿಮ್ಮನ್ನು ಗಮನಿಸುತ್ತಿರುತ್ತೇವೆ’ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *