– ಮೊದಲ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳದ ವ್ಯಕ್ತಿಗೆ ಮದುವೆಗೆ ಅವಕಾಶವಿಲ್ಲ
– ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟ
ಲಕ್ನೋ: ತನ್ನ ಹೆಂಡತಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದ ಮುಸ್ಲಿಂ ಸಮುದಾಯದ (Muslim Community) ಪುರುಷ ಕುರಾನ್ ಪ್ರಕಾರವೇ 2ನೇ ಮದುವೆಯಾಗಲು (Marriage) ಅವಕಾಶವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad HighCourt) ಮಹತ್ವದ ತೀರ್ಪು ನೀಡಿದೆ.
ವೈವಾಹಿಕ ಹಕ್ಕುಗಳ ಮರುಸ್ಥಾಪನೆಗಾಗಿ ಕೌಟುಂಬಿಕ ನ್ಯಾಯಾಲಯ (Family Court) ನೀಡಿದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರವಾಣಿ ಹಾಗೂ ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠವು ಈ ಆದೇಶ ಪ್ರಕಟಿಸಿದೆ. ಇದನ್ನೂ ಓದಿ: ನೌಕಾಪಡೆಯ MiG-29K ಪತನ – ಪೈಲಟ್ ಅಪಾಯದಿಂದ ಪಾರು
ಇದರೊಂದಿಗೆ ಮೊದಲ ಪತ್ನಿಯ ಇಚ್ಛೆಯನ್ನು ವಿರೋಧಿಸಿ, 2ನೇ ಮದುವೆಯಾದ ವ್ಯಕ್ತಿ ಮೊದಲ ಪತ್ನಿಯೂ ತನ್ನೊಂದಿಗೆ ಇರಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದೆ.
ಮುಸ್ಲಿಂ ಪುರುಷನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಪೋಷಿಸುವ ಸಾಮರ್ಥ್ಯ ಹೊಂದಿಲ್ಲದಿದ್ದರೆ, ಆತನಿಗೆ ಇತರ ಮಹಿಳೆಯರನ್ನು ಮದುವೆಯಾಗುವ ಅರ್ಹತೆ ಇಲ್ಲವೆಂದು ಕುರಾನ್ (Quran) ಹೇಳುತ್ತದೆ. ಈ ವಿಚಾರದಲ್ಲಿ ನ್ಯಾಯಾಲಯದ ನಿರ್ಣಯವೂ ಅದೇ ಆಗಿರುತ್ತದೆ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ
ನ್ಯಾಯಾಲಯವು (Court) ಮದುವೆಯ ಪಾವಿತ್ರ‍್ಯತೆ ಗೌರವಿಸುತ್ತದೆ. ಆದರೆ ಮೊದಲ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ, ಮತ್ತೊಬ್ಬರನ್ನು ಮದುವೆಯಾದ ಮುಸ್ಲಿಂ ಪುರುಷನು ಮತ್ತೆ ಮೊದಲ ಪತ್ನಿ ತನ್ನೊಂದಿಗೆ ವಾಸಿಸುವಂತೆ ಒತ್ತಾಯಿಸುವಂತಿಲ್ಲ. ಹಾಗೆ ಮಾಡಿದರೆ ಅದು ಅಸಮಾನತೆ ಎಂದು ಹೇಳಿದೆ.
ಏನಿದು ಪ್ರಕರಣ?
ಅಝೀಝುರ್ರಹ್ಮಾನ್, ಹಮೀದುನ್ನಿಶಾ ದಂಪತಿ ವಿವಾಹವಾಗಿ ನಾಲ್ಕು ಮಕ್ಕಳನ್ನ ಹೊಂದಿದ್ದಾರೆ. ಹೀಗಿದ್ದೂ ಪತಿ ಅಝೀಝುರ್ರಹ್ಮಾನ್ 2ನೇ ವಿವಾಹವಾಗಿ, ಆಕೆಯೊಂದಿಗೂ ಮಕ್ಕಳನ್ನು ಹೊಂದಿದ್ದನು. ಈ ವಿಷಯ ಮೊದಲ ಪತ್ನಿಯಿಂದ ಮರೆ ಮಾಚಿದ್ದ. ಹೇಗೋ ಹಂಮೀದುನ್ನಿಶಾಗೆ ವಿಷಯ ತಿಳಿದು ಆಕೆ ತನ್ನ ತವರು ಮನೆಯಲ್ಲಿ ವಾಸಿಸುತ್ತಿದ್ದಳು. ನಂತರ ಅಝೀಝುರ್ರಹ್ಮಾನ್ ಕೌಟುಂಬಿಕ ನ್ಯಾಯಾಲಯ ಸಂಪರ್ಕಿಸಿ ಮೊದಲ ಪತ್ನಿ ತನ್ನೊಂದಿಗೆ ವಾಸಿಸುವಂತೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಿದ್ದ. ಕಳೆದ ಆಗಸ್ಟ್ನಲ್ಲಿ ಮನವಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ಮಹಿಳೆಯರ ಹಕ್ಕುಗಳನ್ನೂ ಗೌರವಿಸುವಂತೆ ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೊರೆ ಹೋಗಿದ್ದ.