ಹೃದಯಾಘಾತ – ಬಿಎಂಟಿಸಿ ಬಸ್‌ನಲ್ಲೇ ವ್ಯಕ್ತಿ ಸಾವು

Public TV
1 Min Read

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 60ರ ವೃದ್ಧರೊಬ್ಬರು ಹೃದಯಾಘಾತದಿಂದ (Heart Attack)ಸಾವನ್ನಪ್ಪಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕೃಷ್ಣ (60) ಎಂದು ಗುರುತಿಸಲಾಗಿದೆ. ವ್ಯಕ್ತಿ ಬಸ್‌ನಲ್ಲಿ (BMTC Bus) ಟಿಕೆಟ್ ಪಡೆದು ಕುಳಿತಿದ್ದ 15 ನಿಮಿಷಗಳಲ್ಲೇ ಹೃದಯಾಘಾತ ಸಂಭವಿಸಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಘಟನೆಯನ್ನು ಕಣ್ಣಾರೆ ಕಂಡ ಇತರೇ ಪ್ರಯಾಣಿಕರು ಬಸ್ಸಿನಲ್ಲೇ ಕಿರುಚಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್‌ನಲ್ಲಿ ಉಳಿದಿರೋ ನಿಷ್ಠಾವಂತರು ‘ಇಂಡಿಯಾ’ ಕೂಟಕ್ಕೆ ಬೆಂಬಲ ಕೊಡ್ತೀವಿ: ಸಿಎಂ ಇಬ್ರಾಹಿಂ

ಮೆಜೆಸ್ಟಿಕ್‌ನಲ್ಲಿ ಬಸ್ ಹತ್ತಿದ್ದ ಮೃತ ವ್ಯಕ್ತಿ, ರಾಜಾಜೀನಗರದ ನವರಂಗ್ ವೃತ್ತದ ಬಳಿ ಬರುತ್ತಿದ್ದ ವೇಳೆ ಸಾವು ಸಂಭವಿಸಿದೆ. ಕೂಡಲೇ ಆತನನ್ನ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಕೊಡಿಸುವಷ್ಟರಲ್ಲಿ ವ್ಯಕ್ತಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಧಾನಿಯಲ್ಲಿ ಹೆಚ್ಚಾಯ್ತು ಬಿಸಿಲಿನ ಝಳ – ತಾಪಮಾನ ಏರಿಕೆ ಬೆನ್ನಲ್ಲೇ ಮಾರ್ಗಸೂಚಿ ಬಿಡುಗಡೆ

Share This Article