ಬಹು ಅಂಗಾಂಗ ವೈಫಲ್ಯ – ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಘರ್ಜನೆ ನಿಲ್ಲಿಸಿದ ರಾಮ

By
1 Min Read

ಆನೇಕಲ್: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ʻರಾಮʼ ಹೆಸರಿನ ಸಿಂಹವೊಂದು ಬಹು ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ (Bannerghatta National Park) ನಡೆದಿದೆ.

- Advertisement -

14 ವರ್ಷ ವಯಸ್ಸಿನ ರಾಮ ಎಂಬ ಹೆಸರಿನ ಸಿಂಹ (Lion) ಕೊನೆಯುಸಿರೆಳೆದಿದೆ. 2010ರಲ್ಲಿ ಸಿಂಹ ಗಣೇಶ ಮತ್ತು ಸಿಂಹಿಣಿ ಅನುಗೆ ಜನಿಸಿದ ಸಿಂಹವಾಗಿದ್ದು, ಅಂದಿನಿಂದ ಬನ್ನೇರುಘಟ್ಟದ ಜೈವಿಕ ಉದ್ಯಾನದಲ್ಲಿತ್ತು. ಇದನ್ನೂ ಓದಿ: ಈ ಸಂದರ್ಭದಲ್ಲಿ ನಾವು ಮೌನವಾಗಿರುತ್ತೇವೆ; ಭಕ್ತರಿಗೆ ಮೌನವೇ ದೊಡ್ಡ ಸಂದೇಶ: ಜೈಲಿಂದ ಬಂದ ಮುರುಘಾ ಶ್ರೀ

- Advertisement -

- Advertisement -

ಬುಧವಾರ ಬೆಳಗ್ಗೆ ಸಿಂಹಕ್ಕೆ ಇದ್ದಕ್ಕಿದ್ದಂತೆ ವಾಂತಿಯ ಲಕ್ಷಣಗಳು ಕಾಣಿಸಿಕೊಂಡು ನಿಶ್ಯಕ್ತಿಯಿಂದ ಬಳಲುತ್ತಿತ್ತು. ಕೂಡಲೇ ಬನ್ನೇರುಘಟ್ಟ ಪಶುವೈದ್ಯರ ತಂಡ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತಿತ್ತು. ಆದ್ರೆ ಅಂತಿಮವಾಗಿ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ (ನ.16) ಸಾವನ್ನಪ್ಪಿದೆ. ಇದನ್ನೂ ಓದಿ: ನನ್ನ ಪಕ್ಷಾಂತರದ ಎಫೆಕ್ಟ್ ಪಂಚ ರಾಜ್ಯಗಳ ಚುನಾವಣೆಯ ಮೇಲೂ ಬೀರಿದೆ – BJP ವ್ಯವಸ್ಥೆ ಹದಗೆಟ್ಟಿದೆ: ಜಗದೀಶ್ ಶೆಟ್ಟರ್

- Advertisement -

ಸಿಂಹ ಸಾವನ್ನಪ್ಪಿದ ಬಳಿಕ ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಬಹು ಅಂಗಾಂಗ ವೈಫಲ್ಯವಾಗಿರುವುದು ಕಂಡುಬಂದಿದೆ. ಪ್ರಾಣಿಯ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ IAH & VB ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

Share This Article