Nelamangala | ಮನೆಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಹರಿದ ಕಾರು

1 Min Read

ನೆಲಮಂಗಲ: ಮನೆಯ ಬಳಿ ಆಟವಾಡುತ್ತಿದ್ದ ಬಾಲಕನ (Boy) ಮೇಲೆ ಕಾರು (Car) ಹರಿದ ಪರಿಣಾಮ ಬಾಲಕ ತೀವ್ರ ಗಾಯಗೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ನೆಲಮಂಗಲ (Nelamangala) ನಗರದಲ್ಲಿ ನಡೆದಿದೆ.

- Advertisement -

ಎರ್ಟಿಗಾ ಕಾರು ಚಾಲಕನ ಬೇಜವಾಬ್ದಾರಿತನದ ರೀತಿಯಲ್ಲಿ ಕಾರು ಚಾಲನೆ ಮಾಡಿ ಬಾಲಕನ ಮೇಲೆ ಕಾರನ್ನು ಚಲಾಯಿಸಿದ್ದಾನೆ. ಇನ್ನೂ ಅದೃಷ್ಟವಶಾತ್ ಬಾಲಕ ಪವಾಡ ಸದೃಶ್ಯದಂತೆ ಪಾರಾಗಿದ್ದಾನೆ. ಇನ್ನೂ ಆಟವಾಡುತ್ತಿದ್ದ ಬಾಲಕನ ಮೇಲೆ ಕಾರು ಹರಿಯುತ್ತಿದ್ದಂತೆ ಬಾಲಕನ ಚೀರಾಟ ಕಂಡು ಮನೆಯಿಂದ ಜನರು ಓಡಿ ಬಂದಿದ್ದಾರೆ. ಬಾಲಕನ ಮೇಲೆ ಕಾರು ಹರಿಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಣ್ಣಾವ್ರು, ಡಾ.ವಿಷ್ಣುವರ್ಧನ್‌ರೊಂದಿಗೆ ಮರೆಯಲಾಗದ ಅಭಿನಯ – ಉಮೇಶ್‌ ಇನ್ನು ನೆನಪು ಮಾತ್ರ

- Advertisement -

- Advertisement -

ಘಟನೆ ಸಂಬಂಧ ಮೂರು ವರ್ಷದ ದಕ್ಷಿತ್ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನ ತಲೆ, ಮುಖ, ಬೆನ್ನಿನ ಮೇಲೆ ಕಾರು ಹರಿದಿದೆ. ಮಾರುತಿ ಎರ್ಟಿಗಾ ಕಾರು ತಿರುವಿನಲ್ಲಿ ವೇಗವಾಗಿ ಬಂದು ಮಗುವಿನ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕನನ್ನ ನೆಲಮಂಗಲ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಸಂಬಂದ ಕಾರು ಚಾಲಕನ ಮೇಲೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕನ್ನಡ ಚಿತ್ರರಂಗದ ಹಾಸ್ಯ ನಟ‌ ಎಂ.ಎಸ್‌ ಉಮೇಶ್ ಇನ್ನಿಲ್ಲ

- Advertisement -

Share This Article