ಮದುವೆಯಾಗುವಂತೆ ಒತ್ತಾಯಿಸಿದ ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿದ ಗೆಳೆಯ

Public TV
2 Min Read

ನವದೆಹಲಿ: ಮದುವೆಯಾಗುವಂತೆ ಒತ್ತಾಯಿಸಿದ ಹಿನ್ನೆಲೆ ಹತ್ತೊಂಬತ್ತು ವರ್ಷದ ಗರ್ಭಿಣಿ ಪ್ರೇಯಸಿಯನ್ನು ಗೆಳೆಯ ಹತ್ಯೆ ಮಾಡಿ ಹೂತು ಹಾಕಿರುವ ಘಟನೆ ಹರಿಯಾಣದ (Haryana) ರೊಹ್ಟಕ್‌ನಲ್ಲಿ ನಡೆದಿದೆ.

ಮೃತ ಯುವತಿ ಹಾಗೂ ಗೆಳೆಯ ಸಂಜು ಆಕಾ ಸಲೀಮ್ ಪರಸ್ಪರ ಸಂಬಂಧ ಹೊಂದಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ಯುವತಿ ಆರು ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ತನ್ನ ಗೆಳೆಯನೊಂದಿಗಿನ ಚಿತ್ರಗಳು ಮತ್ತು ವೀಡಿಯೊಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಳು. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನ ಭೇಟಿಯಾದ ಉಪರಾಷ್ಟ್ರಪತಿ

ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧದಲ್ಲಿದ್ದ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದಳು. ತನ್ನ ಗೆಳೆಯನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ ಇದಕ್ಕೆ ಸಿದ್ಧನಿಲ್ಲದ ಸಂಜು ಆಕಾ ಸಲೀಮ್ ಅವಳನ್ನು ಗರ್ಭಪಾತ ಮಾಡಬೇಕೆಂದು ಬಯಸಿದ್ದು, ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ| ರೈಲು ಹಳಿಗಳ ಮೇಲೆ 6 ಕೆಜಿ ಮರದ ತುಂಡು ಇರಿಸಿ ಹಳಿ ತಪ್ಪಿಸಲು ಯತ್ನ

ಸೋಮವಾರ ಯುವತಿ ದೆಹಲಿಯ ತನ್ನ ಮನೆಯಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಆರೋಪಿಯನ್ನು ಭೇಟಿಯಾಗಲು ರೊಹ್ಟಕ್‌ಗೆ ತೆರಳಿದ್ದಳು. ಆದರೆ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆ ಆಕೆಯ ಪೊಷಕರು ಅ.23 ರಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಳಿಕ ಯುವತಿಯ ಗೆಳೆಯನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮಹಾರಾಷ್ಟ್ರ ಚುನಾವಣಾ ಅಖಾಡಕ್ಕೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್?

ಆರೋಪಿಯು ಕೊಲೆಗೆ ಪೂರ್ವಯೋಜಿತವಾಗಿ ತನ್ನ ಸ್ನೇಹಿತರಾದ ರಿತಿಕ್ ಮತ್ತು ಪಂಕಜ್ ಅವರನ್ನು ಅಪರಾಧದಲ್ಲಿ ತೊಡಗಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಕೃತ್ಯಕ್ಕಾಗಿ ಕರ್ವಾ ಚೌತ್ ದಿನವನ್ನು ಆಯ್ಕೆ ಮಾಡಿದ್ದರು. ಕಾರನ್ನು ಬಾಡಿಗೆಗೆ ಪಡೆದು ನಂಗ್ಲೋಯ್‌ನಿಂದ ಯುವತಿಯನ್ನು ರೋಹ್ಟಕ್‌ಗೆ ಕರೆದೊಯ್ದು, ಅಲ್ಲಿ ಅವಳನ್ನು ಕತ್ತು ಹಿಸುಕಿ ಹತ್ಯೆ ಮಾಡಿ, ಅದೇ ರಾತ್ರಿ ರೋಹ್ಟಕ್‌ನ ಕಾಡುಗಳಲ್ಲಿ ಅವಳ ದೇಹವನ್ನು ಹೂತುಹಾಕಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸರು ಸಲೀಂ ಮತ್ತು ಆತನ ಸಹಚರರಲ್ಲಿ ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: 100 ಕ್ಕೂ ಹೆಚ್ಚು ಯುದ್ಧ ವಿಮಾನಗಳ ಮೂಲಕ ಇರಾನ್‌ನ ಮಿಲಿಟರಿ ಸ್ಥಳಗಳ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್‌

Share This Article