ಮೋದಿ ಹೆಬ್ಬುಲಿ, ಅಮಿತ್ ಶಾ ಹುಲಿ, ಇವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ: ಜಗ್ಗೇಶ್

Public TV
1 Min Read

ಹುಬ್ಬಳ್ಳಿ: ಮೋದಿ (Narendra Modi) ಹೆಬ್ಬುಲಿ, ಅಮಿತ್ ಶಾ (Amit Shah)  ಹುಲಿ, ಅವರೊಂದಿಗೆ ಹೆಜ್ಜೆ ಹಾಕೋ ಮತ್ತೊಂದು ಹುಲಿ ಪ್ರಹ್ಲಾದ್ ಜೋಶಿ (Pralhad Joshi). ಮನೆಗೆ ಒಬ್ಬ ಯಜಮಾನ ಇರಬೇಕು. ಪ್ರಹ್ಲಾದ್ ಜೋಶಿ ಇಂದು ಅದ್ಭುತ ಯಜಮಾನಿಕೆ ಮಾಡುತ್ತಿದ್ದಾರೆ. ಉಳಿದ ಸಂಸದರು ಅವರು ಹೇಳಿದ ಕೆಲಸ ಮಾಡ್ತಾರೆ ಎಂದು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಹಾಡಿ ಹೊಗಳಿದ್ದಾರೆ.

ಕುಂದಗೋಳದಲ್ಲಿ ನಡೆದ ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆ ಸರ್ಕಾರದ್ದಲ್ಲ, ನಮ್ಮೂರಿನದ್ದು ಎಂದು ಬಣ್ಣ ಹಚ್ಚಿ. ಯಾವತ್ತೂ ನಮ್ಮ ಕೆಲಸ ನಾವೇ ಮಾಡಬೇಕು. ಎಲ್ಲವನ್ನೂ ಸರ್ಕಾರದ ಮೇಲೆ ಹಾಕಬಾರದು ಮಕ್ಕಳಿಗೆ ಆರರಿಂದ 8 ವರ್ಷದಲ್ಲಿ ಏನ್ ಕಲಿಸುತ್ತಾರೋ ಸಾಯೋವರೆಗೂ ಅದನ್ನೆ ಪಾಲಿಸುತ್ತಾರೆ. 60 ವರ್ಷ ಆಳಿದವರು ಕನ್ನಡ ಶಾಲೆಗಳನ್ನು ಕಟ್ಟಬೇಕಿತ್ತು ಎಂದು ಕಾಂಗ್ರೆಸ್‍ನ್ನು ಕುಟುಕಿದ್ದಾರೆ. ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ `ಮೋದಿ-ಮೋದಿ’, `AAP ನಾಯಕರು ಚೋರ್-ಚೋರ್’ ಘೋಷಣೆ

Amith

ಇವಾಗಲೇ ರಾಜಕೀಯ ಡ್ರಾಮಾ ನಡೀತಿದೆ. ಚುನಾವಣೆ ಬಂದಾಗ ಇಂತಹ ಆಸೆ ಸಹಜ. ರಾಷ್ಟ್ರ ಮುನ್ನಡೆಸೋ ವ್ಯಕ್ತಿ ಸಾಮಾನ್ಯದವರಲ್ಲ. ಅಮೆರಿಕ ಹೆದರೋದು ಕೇವಲ ರಷ್ಯಾಗೆ ಮಾತ್ರ. ರಷ್ಯಾದ ಪುಟಿನ್, ಮೋದಿಯನ್ನೇ ಸ್ವಾಭಿಮಾನ ನಾಯಕ ಎಂದು ಹೇಳಿದ್ದಾರೆ. ಮೋದಿ ಅವರನ್ನು ಹೃದಯದಿಂದ ಪ್ರೀತಿಸಬೇಕು. ಮೋದಿಯ ಜೊತೆ ನೀವು ನಿಲ್ಲಬೇಕು. ಮತ್ತೆ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕು. 25 ವಿರೋಧ ಪಕ್ಷದವರು ಬಾಯಿ ಬಡಿದುಕೊಂಡರೂ ಮೋದಿನೇ ಪ್ರಧಾನಿ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ತೆಲಂಗಾಣದಲ್ಲಿ ಆಪರೇಷನ್ ಕಮಲಕ್ಕೆ ಯತ್ನ – ಅಮಿತ್ ಶಾರನ್ನು ಬಂಧಿಸಿ: ಮನೀಶ್ ಸಿಸೋಡಿಯಾ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *