ಅನುಷ್ಕಾ ಶರ್ಮಾ ಐರನ್ ಲೇಡಿ, ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್: ಶೋಯೆಬ್ ಅಕ್ತರ್

Public TV
1 Min Read

ದುಬೈ: ಟೀಂ ಇಂಡಿಯಾದ ರನ್ ಮಿಷಿನ್ ವಿರಾಟ್ ಕೊಹ್ಲಿ (Virat Kohli) 1,021 ದಿನಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಶತಕದ ಬರ ನೀಗಿಸಿದ್ದಾರೆ. ಈ ಸಾಧನೆಯ ಹಿಂದೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾರ (Anushka Sharma) ಬೆಂಬಲಕ್ಕೆ ಪಾಕಿಸ್ತಾನ ಮಾಜಿ ಆಟಗಾರ ಶೋಯೆಬ್‌ ಅಕ್ತರ್ (Shoaib Akhtar) ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಿನ್ನೆ ನಡೆದ ಏಷ್ಯಾಕಪ್‍ನ (Asia Cup 2022) ಸೂಪರ್ ಫೋರ್‌ ಹಂತದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಟಿ20 ಕ್ರಿಕೆಟ್‍ನ ಚೊಚ್ಚಲ ಶತಕ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‍ನ 71 ಶತಕ ಪೂರೈಸಿದರು. ಬಳಿಕ ಈ ಶತಕವನ್ನು ಈವರೆಗೆ ನನ್ನ ಬೆಂಬಲಕ್ಕೆ ನಿಂತ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾಗೆ ಸಮರ್ಪಿಸುವುದಾಗಿ ಕೊಹ್ಲಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಈ ಶತಕವನ್ನ ಪತ್ನಿ ಅನುಷ್ಕಾಗೆ ಅರ್ಪಿಸುವೆ – ಕಿಂಗ್ ಕೊಹ್ಲಿ ಭಾವುಕ

ಈ ಬಗ್ಗೆ ಸ್ಥಳೀಯ ಮಾಧ್ಯಮವೊಂದರಲ್ಲಿ ಮಾತನಾಡಿದ ಅಕ್ತರ್ ವಿರಾಟ್ ಕೊಹ್ಲಿಯ ಈ ಕಂಬ್ಯಾಕ್ ಹಿಂದೆ ನಿಂತಿರುವ ಅನುಷ್ಕಾ ಶರ್ಮಾರನ್ನು ನಾನು ಐರನ್ ಲೇಡಿ ಎನ್ನಲು ಬಯಸುತ್ತೇನೆ. ನನ್ನ ಪ್ರಕಾರ ವಿರಾಟ್ ಕೊಹ್ಲಿ ಮ್ಯಾನ್ ಆಫ್ ಸ್ಟೀಲ್ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: 2 ವರ್ಷ 9 ತಿಂಗಳು 16 ದಿನಗಳ ಬಳಿಕ ಕೊಹ್ಲಿ ಶತಕ – ಟಿ20ಯಲ್ಲಿ ಚೊಚ್ಚಲ 100

ವಿರಾಟ್ ಕೊಹ್ಲಿ ವಿಶ್ವಕಂಡ ಶ್ರೇಷ್ಠ ಆಟಗಾರ ಅವರ ಈ ಶಾಧನೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೊಹ್ಲಿ ವಿಶ್ವಕ್ರಿಕೆಟ್‍ನ ಸಾಧಕರ ಪಟ್ಟಿಯಲ್ಲಿ ಯಾವತ್ತು ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಅಘ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಅಜೇಯ 122 ರನ್ (61 ಎಸೆತ, 12 ಬೌಂಡರಿ, 6 ಸಿಕ್ಸ್) ಚಚ್ಚಿ ಟಿ20 ಕ್ರಿಕೆಟ್ ಚೊಚ್ಚಲ ಶತಕದ ಸಂಭ್ರಮ ಪಟ್ಟರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *