ಬ್ರಹ್ಮಪುತ್ರ ನದಿ ದಂಡೆ ಬಳಿಯ 330 ಎಕರೆಯಲ್ಲಿರುವ ಅಕ್ರಮ ಮನೆ ತೆರವು!

Public TV
1 Min Read

ಗುವಾಹಟಿ: ಬ್ರಹ್ಮಪುತ್ರ ನದಿ ದಂಡೆ ಮೇಲಿರುವ 330 ಎಕರೆ ಭೂಮಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿದ್ದ ತೆರವು ಕಾರ್ಯಾಚರಣೆಯು ಒಂದು ಹಂತದಲ್ಲಿ ಮುಗಿದೆ.

ಅಸ್ಸಾಂನ ಸೋನಿತ್‍ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿರುವ ಬರ್ಚಲ್ಲಾದ 3ನೇ ಚಿಟಲ್ಮರಿ ಪ್ರದೇಶದಲ್ಲಿ ಇರುವ ಮನೆಗಳನ್ನು ಕೆಡವಲು 50 ಜೆಸಿಬಿ, ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು, ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಅಕ್ರಮ ನಿವಾಸಿಗಳಿಗೆ ತೆರವು ನೋಟಿಸ್‍ನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿರುವ ಜನರೆಲ್ಲರೂ ಆ ಪ್ರದೇಶವನ್ನು ತೊರೆದಿದ್ದಾರೆ.  ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೇ ಮುಕ್ತವಾಗಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಮುಂಜಾನೆ 5 ಗಂಟೆಯ ಸುಮಾರಿಗೆ ಈ ತೆರವು ಕಾರ್ಯಾಚರಣೆ ಪ್ರಾರಂಭವಾಗಿತ್ತು. ತೆರವುಗೊಳಿಸಬೇಕಾದ ಪ್ರದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಒಂದು ಭಾಗವು ಬೆಳಗ್ಗೆ 9 ಗಂಟೆಗೆ ಮುಗಿದಿದೆ ಎಂದರು.

ಮುನ್ನೆಚ್ಚರಿಕೆ ಕ್ರಮವಾಗಿ ಅಸ್ಸಾಂ ಪೊಲೀಸರು ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಸೇರಿದಂತೆ ಸುಮಾರು 1,200 ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸರ್ಕಾರಿ ದಾಖಲೆಗಳ ಪ್ರಕಾರ, 299 ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದವು. ಆದರೆ ಅವರಲ್ಲಿ ಶೇಕಡಾ 90 ಕ್ಕೂ ಹೆಚ್ಚು ಕುಟುಂಬಗಳು ಸುಮಾರು 8 ತಿಂಗಳ ಹಿಂದೆ ನೋಟಿಸ್ ಸ್ವೀಕರಿಸಿದ್ದು, ಆಗಲೇ ಈ ಪ್ರದೇಶದಿಂದ ತೊರೆದಿದ್ದಾರೆ. ಇದನ್ನೂ ಓದಿ: ಪ್ರಶ್ನೆಗೆ ಉತ್ತರಿಸಲು ತಡಪಡಿಸಿದ ಜಿಲ್ಲಾಧಿಕಾರಿಗೆ ಸೀತಾರಾಮನ್ ಕ್ಲಾಸ್ – ಕೆಟಿಆರ್ ಆಘಾತ

ಈ ಬಗ್ಗೆ ಅಲ್ಲಿನ ಕೆಲವು ನಿವಾಸಿಗಳು ಮಾತನಾಡಿ, ನಾವು ದಶಕಗಳಿಂದ ಇಲ್ಲೇ ವಾಸಿಸುತ್ತಿದ್ದೆವು. ನಾವು ಹೊಲಗಳಲ್ಲಿ ಕೆಲಸ ಮಾಡುತ್ತಿದ್ದೆವು ಇದರಿಂದಾಗಿ ನಮಗೆ ಬೇರೆ ಯಾವ ಉದ್ಯೋಗವು ಇಲ್ಲ. ಸರ್ಕಾರದಿಂದ ಯಾವುದೇ ಪುನರ್ವಸತಿ ಕಲ್ಪಿಸಿಲ್ಲ ಅಳಲು ತೋಡಿಕೊಂಡರು. ಇದನ್ನೂ ಓದಿ: ಕೇಳುವಷ್ಟು ಶಾಂತಿ, ಸಹನೆ ಇಲ್ಲವೆಂದ್ರೆ ಕ್ಷೇತ್ರದ ಶಾಸಕರಾಗಿ ಇರುವುದಕ್ಕೆ ಯೋಗ್ಯರಲ್ಲ: ಡಿಕೆಶಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *