ಪಬ್ಲಿಕ್ ಟಿವಿಯ ವಿದ್ಯಾಪೀಠ 5ನೇ ಆವೃತ್ತಿ – 2ನೇ ದಿನವೂ ಸಕ್ಸಸ್

Public TV
1 Min Read

ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತಪಡಿಸಿರುವ ವಿದ್ಯಾಪೀಠ 5ನೇ ಆವೃತ್ತಿ ಎಜುಕೇಶನ್ ಎಕ್ಸ್‌ಪೋಗೆ 2ನೇ ದಿನವಾದ ಶನಿವಾರವೂ ಉತ್ತಮ ಸ್ಪಂದನೆ ದೊರೆಯಿತು.

2ನೇ ದಿನವೂ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ಶೈಕ್ಷಣಿಕ ಮಾಹಿತಿ ಪಡೆದುಕೊಂಡಿದ್ದಾರೆ. 500-600 ಕಿ.ಮೀ. ದೂರದಲ್ಲಿರುವ ಬೆಳಗಾವಿ, ವಿಜಯಪುರ ಜಿಲ್ಲೆಗಳಿಂದಲೂ ಬಂದು ವಿದ್ಯಾರ್ಥಿಗಳು, ಪೋಷಕರು ಮಾಹಿತಿ ಪಡೆದುಕೊಂಡಿದ್ದು ವಿಶೇಷ.  ಇದನ್ನೂ ಓದಿ: ಭಾರತದ ಆಟಗಾರರಿಗೆ ಸಿಗುವ ಪ್ರೋತ್ಸಾಹ ಪಾಕಿಸ್ತಾನದಲ್ಲಿ ಸಿಗಲ್ಲ: ಪಾಕ್ ಕ್ರಿಕೆಟಿಗ ಶೆಹ್‌ಝಾದ್

ಏನೇನು ವಿಶೇಷತೆ?
ಎಕ್ಸೋನಲ್ಲಿ ಮೊದಲ ದಿನದಂತೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಇದಾದ ಬಳಿಕ ಸಿಇಟಿ ಹಾಗೂ ಕಾಮೆಡ್-ಕೆ ಕುರಿತು ಕುಮಾರ್ ಹಾಗೂ ರವಿ ಮಾಹಿತಿ ತಿಳಿಸಿಕೊಟ್ಟರು. ಮಧ್ಯಾಹ್ನ ಚಿಂತಕ ಹಾಗೂ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪ್ಯಾನಲ್ ಚರ್ಚೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಇದೇ ವೇಳೆ ಭಾರತದ ಸ್ಟಾರ್ಟ್ಅಪ್ ಉದ್ಯಮದ ಬಗ್ಗೆ ತಿಳಿಸಿಕೊಟ್ಟರು. ಬಳಿಕ ಯುವ ಸಾಧಕರನ್ನ ಪರಿಚಯಿಸಿದರು. ಸಂಗೀತ ನಿರ್ದೇಶಕ ಮತ್ತು ಎರಡು ಬಾರಿ ಗ್ರ್ಯಾಮಿ ಅವಾರ್ಡ್ ವಿನ್ನರ್ ರಿಕ್ಕಿ ಕೇಜ್ ಕೂಡ ವಿದ್ಯಾಪೀಠದ ಹೈಲೈಟ್ ಆಗಿದ್ದರು.

ಲಕ್ಕಿ ಡಿಪ್ ವಿದ್ಯಾರ್ಥಿಗಳ ಆಕರ್ಷಣೆ: ವಿದ್ಯಾರ್ಥಿಗಳ ಕಲರವದಿಂದ ಕೂಡಿದ್ದ ಎಕ್ಸ್‌ಪೋನಲ್ಲಿ ಸ್ಲೋ ಸೈಕ್ಲಿಂಗ್, ರಸಪ್ರಶ್ನೆ ಕಾರ್ಯಕ್ರಮಗಳನ್ನೂ ನಡೆಸಿಕೊಡಲಾಯಿತು. ಫನ್ ಗೇಮ್ಸ್ನಲ್ಲಿ ಉತ್ಸಾಹದಿಂದಲೇ ಭಾಗವಹಿಸಿದ್ದ ವಿದ್ಯಾರ್ಥಿಗಳು ಬಹುಮಾನ ಗೆದ್ದು ಬೀಗಿದರು. ಮುಖ್ಯವಾಗಿ ಪ್ರತಿ ಅರ್ಧ ಗಂಟೆಗೊಮ್ಮೆ ಲಕ್ಕಿ ಡಿಪ್ ಮೂಲಕ ಬಹುಮಾನ ನೀಡುತ್ತಿದ್ದ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರಮುಖ ಆಕರ್ಷಣೆಯಾಗಿತ್ತು.

ಕೊನೆ ದಿನವಾದ ಭಾನುವಾರ 10:30ರಿಂದ 12 ಗಂಟೆ ವರೆಗೆ ಡಾ.ರಫೀವುಲ್ಲಾ ಬೇಗ್ ಹ್ಯಾಂಡ್ ರೈಟಿಂಗ್ ಅಂಡ್ ಮೆಮೊರಿ ಮಾಹಿತಿ, ಡಾ. ಸುಜಾತ ರಾಥೋಡ್ ರಿಂದ ನೀಟ್ ಕುರಿತು ಸೆಮಿನಾರ್ ಇರಲಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *