ರಷ್ಯಾ, ಉಕ್ರೇನ್ ಯುದ್ಧಕ್ಕೆ 100 ದಿನ ಪೂರ್ಣ- ಮತ್ತೆ ನಗರವನ್ನು ವಶಪಡಿಸಿಕೊಂಡ ಉಕ್ರೇನ್

Public TV
1 Min Read

ಕೀವ್: ವಿಶ್ವವನ್ನೇ ಬೆಚ್ಚಿ ಬಿಳಿಸುವಂತೆ ಮಾಡಿರುವ ರಷ್ಯಾ ಹಾಗೂ ಉಕ್ರೇನ್ ಯುದ್ಧ ಪ್ರಾರಂಭವಾಗಿ 100 ದಿನಗಳು ಕಳೆದಿವೆ. ಈ ವೇಳೆ ಸಿವಿರೋಡೋನೆಟ್ಸ್ಕ್‌ಗಾಗಿ ನಡೆದ ಯುದ್ಧದಲ್ಲಿ ದೊಡ್ಡ ಪ್ರಮಾಣದ ಭೂಪ್ರದೇಶವನ್ನು ಉಕ್ರೇನ್ ಪುನಃ ವಶಪಡಿಸಿಕೊಂಡಿದೆ. ಈ ಮೂಲಕ ರಷ್ಯಾ ಸೈನ್ಯದ ಪ್ರಯತ್ನವನ್ನು ಉಕ್ರೇನ್ ವಿಫಲಗೊಳಿಸಿದೆ.

ಸಾಕಷ್ಟು ಸಾವು ನೋವಿಗೆ ಕಾರಣವಾಗಿರುವ ಹಾಗೂ ಇಡೀ ವಿಶ್ವದ ಮೇಲೆಯೇ ಆರ್ಥಿಕ ಮತ್ತು ಇತರೆ ದುಷ್ಪರಿಣಾಮ ಬೀರಿರುವ ಉಕ್ರೇನ್‍ನ ಮೇಲಿನ ರಷ್ಯಾ ಆಕ್ರಮಣಕ್ಕೆ ಶುಕ್ರವಾರ 100 ದಿನ ಪೂರ್ಣಗೊಂಡಿತ್ತು. ಇದರ ಬೆನ್ನಲ್ಲೇ ಉಕ್ರೇನ್ ರಷ್ಯಾವನ್ನು ಕೀವ್‍ನಿಂದ ಹಿಂದಕ್ಕೆ ಓಡಿಸಿದೆ. ಅಷ್ಟೇ ಅಲ್ಲದೇ ಉಕ್ರೇನಿಯನ್ ಪಡೆಗಳು ಸಿವಿರೋಡೋನೆಟ್ಸ್ಕ್‌ನಲ್ಲಿ ರಷ್ಯಾದ ಪಡೆಗಳಿಂದ ಕಳೆದುಕೊಂಡಿದ್ದ ಸುಮಾರು 20% ಪ್ರದೇಶವನ್ನು ಪುನಃ ವಶಪಡಿಸಿಕೊಂಡಿವೆ.

ಅಮೆರಿಕ ಮತ್ತು ಬ್ರಿಟನ್ ಈ ವಾರ ಹೇಳಿದಂತೆ ಸುಧಾರಿತ ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸಲು ಉಕ್ರೇನ್‍ನ ಸೈನಿಕರು ಯುರೋಪ್‍ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಪುಟ್ಟ ರಾಷ್ಟ್ರ ಉಕ್ರೇನ್‍ನನ್ನು ಕೆಲವೇ ದಿನದಲ್ಲಿ ಗೆಲ್ಲಲು ಯೋಜಿಸಿದ್ದ ರಷ್ಯಾ ಮೂರು ತಿಂಗಳಿಗಿಂತಲೂ ಹೆಚ್ಚು ಕಾಲ ಸಾವಿರಾರು ಸೈನಿಕರನ್ನು ಕಳೆದುಕೊಂಡು ಕಷ್ಟ ಪಡುತ್ತಿದೆ.

ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಜಾಗತಿಕವಾಗಿ ಆಹಾರ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ ಹಾಗೂ ಇದರಿಂದಾಗಿ ಬಡ ರಾಷ್ಟ್ರಗಳಿಗೆ ಹಾನಿಯಾಗುತ್ತದೆ ಎಂಬ ವಿದೇಶಗಳ ಟೀಕೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಗಾಗಲೇ ತೀರಸ್ಕರಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಅಶ್ಲೀಲ ಚಿತ್ರಗಳು, ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ – ತಪ್ಪೊಪ್ಪಿಕೊಂಡ ಚರ್ಚ್ ಲೀಡರ್

ರಷ್ಯಾ ವಿರೋಧಿ ಕೂಟವಾದ ಪಾಶ್ಚಾತ್ಯ ದೇಶಗಳ ನೇತೃತ್ವದ ನ್ಯಾಟೋ ಒಕ್ಕೂಟ ಸೇರಲು ಉಕ್ರೇನ್ ನಿಂತಿತ್ತು. ಇದೇ ವೇಳೆ ಉಕ್ರೇನ್‍ನ ಡಾನ್ ಬಾಸ್ ಸೇರಿದಂತೆ ರಷ್ಯಾದ ಗಡಿಯಂಚಿನಲ್ಲಿರುವ 2 ಪ್ರಾಂತ್ಯಗಳ ಮೇಲೆ ರಷ್ಯಾಗೆ ಮೊದಲಿನಿಂದಲೂ ಕಣ್ಣಿತ್ತು. ಈ ಹಿನ್ನೆಲೆಯಲ್ಲಿ ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿತ್ತು. ಇದನ್ನೂ ಓದಿ: ಕಾರಿನಲ್ಲೇ ಅಪ್ರಾಪ್ತೆಯ ಮೇಲೆ ಗ್ಯಾಂಗ್‍ರೇಪ್ – ಓರ್ವ ಅರೆಸ್ಟ್, ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು

Share This Article
Leave a Comment

Leave a Reply

Your email address will not be published. Required fields are marked *