ಜ್ಞಾನವಾಪಿ ಮಸೀದಿ ಹಿಂಭಾಗದಲ್ಲಿ ಹಿಂದೂ ದೇವಾಲಯ ಇರಬಹುದು: ಶ್ರೀಶೈಲ ಶ್ರೀ

Public TV
2 Min Read

ಗದಗ: ಜ್ಞಾನವಾಪಿ ಮಸೀದಿ ಹಿಂಭಾಗ ನೋಡಿದಾಗ ಹಿಂದೂ ದೇವಾಲಯ ಇರಬಹುದು ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಅನುಮಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಅಯೋಧ್ಯೆ ವಿವಾದದಷ್ಟೇ ಜ್ಞಾನವಾಪಿ ಮಸೀದಿ ವಿವಾದ ಎಲ್ಲಕಡೆ ಭಾರೀ ಸುದ್ದಿಯಾಗಿದೆ. ಈ ಕುರಿತು ಶ್ರೀಶೈಲ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಾಶಿ ವಿಶ್ವನಾಥನ ದರ್ಶನಕ್ಕೆ ಹೋದಾಗ ಜ್ಞಾನವಾಪಿ 4ನೇ ದ್ವಾರದ ಮೂಲಕ ಹೋಗಿದ್ದೆ. ಪ್ರತ್ಯಕ್ಷವಾಗಿ ನೋಡಿದಾಗ ದೇವಸ್ಥಾನದ ಶಿಲಾ ಕೆತ್ತನೆಗಳೇ ಅಲ್ಲಿ ಕಂಡುಬರುತ್ತೆ. ಒಳಗಡೆ ಹೋಗಲಿಕ್ಕೆ ಅವಕಾಶ ಇಲ್ಲ, ಒಳಗೆ ಏನಿದೆ ಅಂತ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮತ್ತೆ ಸಕ್ರಿಯವಾಯ್ತ ದರೋಡೆ ಪ್ರಕರಣಗಳು?

ಹಿಂದೂ ದೇವಾಲಯ ಕೆತ್ತನೆ ಶೈಲಿ ಬೇರೆ, ಮುಸ್ಲಿಂ ಮಸೀದಿ ಕೆತ್ತನೆಗಳು ಬೇರೆ. ಆದರೆ ಜ್ಞಾನವಾಪಿ ಮಸೀದಿ ಹಿಂಭಾಗ ಹಿಂದೂ ದೇವಾಲಯ ಮಾದರಿಯಲ್ಲಿ ಕಾಣುತ್ತೆ. ಜ್ಞಾನವಾಪಿ ಮಸೀದಿ ಹಿಂಭಾಗ ನೋಡಿದಾಗ ಹಿಂದೂ ದೇವಾಲಯ ಇರಬಹುದು ಅನಿಸುತ್ತೆ. ಸರ್ವೇ ಮಾಡಿದ ನಂತರ ಏನಿದೆ ಅನ್ನೋದು ಗೋಚರ ಆಗುತ್ತೆ ಎಂದು ತಿಳಿಸಿದರು.

ಭಾರತ ಹಲವಾರು ಧರ್ಮ ಸಂಪ್ರದಾಯ ಹೊಂದಿದ ದೇಶ. ಧರ್ಮ ಆಚರಣೆಗೆ ಸಂವಿಧಾನ ಬದ್ಧವಾದ ಅಧಿಕಾರ, ಹಕ್ಕು ಇದೆ. ಒಂದು ಧರ್ಮವನ್ನ ತುಳಿದು ಮತ್ತೊಂದು ಧರ್ಮ ಮೇಲೆ ಬರುವ ದಾಷ್ಟ್ಯ ಸೂಕ್ತವಲ್ಲ. ಅಂಥ ಘಟನೆಗಳು ಕಾಲ ಗರ್ಭದಲ್ಲಿ ನಡೆದಿದ್ದರೆ ಸರಿಪಡೆಸಬೇಕಾಗಿದ್ದು ಪ್ರಸ್ತುತ ಕಾಲದ ಕರೆ ಎಂದು ಸಲಹೆ ಕೊಟ್ಟರು. ಇದನ್ನೂ ಓದಿ: ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಸ್ಟಡಿಗೆ ಮರಾಠಿ ನಟಿ 

ತನಿಖೆ ಮಾಡುವಾಗ ವಿರೋಧ ವ್ಯಕ್ತಪಡಿಸುವುದು ತಡೆ ಒಡ್ಡುವುದು ಸೂಕ್ತವಲ್ಲ. ನ್ಯಾಯಾಲಯದ ಆದೇಶ ಸ್ವಾಗತಿಸುತ್ತೇವೆ. ಪ್ರಾಮಾಣಿಕವಾಗಿ ಸರ್ವೇಯಾಗಲಿ. ಸಂಬಂಧಪಟ್ಟ ಅಧಿಕಾರಿಗಳು ಸರ್ವೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ತಿಳಿಸಿದರು.

ಏನಿದು ಪ್ರಕರಣ?
ಜ್ಞಾನವಾಪಿ ಮಸೀದಿ ಹೊರ ಗೋಡೆಗೆ ತಾಗಿಕೊಂಡೇ ಇರುವ ಶೃಂಗಾರ ಗೌರಿ, ಗಣೇಶ, ಹನುಮಾನ್ ಮತ್ತು ನಂದಿ ವಿಗ್ರಹಗಳಿಗೆ ಪೂಜೆ ನರೆವೇರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿ ದೆಹಲಿ ಮೂಲದ ರಾಖಿ ಸಿಂಗ್, ಲಕ್ಷ್ಮಿ ದೇವಿ, ಸೀತಾ ಸಾಹು ಮತ್ತು ಇತರರು 2021ರ ಏಪ್ರಿಲ್ 21ರಂದು ವಾರಣಾಸಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಲ್ಲಿ ಇರುವ ದೇವತಾ ವಿಗ್ರಹಗಳಿಗೆ ಯಾವುದೇ ಹಾನಿ ಉಂಟುಮಾಡದಂತೆ ಸೂಚಿಸಬೇಕು ಎಂದು ಕೋರಿದ್ದರು.

Share This Article
Leave a Comment

Leave a Reply

Your email address will not be published. Required fields are marked *