ಇಬ್ಬರು ಸೂಪರ್ ಸ್ಟಾರ್‌ಗಳ ಚಿತ್ರಕ್ಕೆ `ಏಕ್ ಲವ್ ಯಾ’ ನಟಿ ಫೈನಲ್!

Public TV
1 Min Read

ಸಿನಿರಸಿಕರ ಸದ್ಯದ ಅಡಿಕ್ಷನ್ ಈ ಅನಿತಾ, ಗಂಡ್ ಹೈಕ್ಳ ಪಾಲಿನ ಮುದ್ದು ದೇವತೆ. `ಏಕ್ ಲವ್ ಯಾ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ರೀಷ್ಮಾ ನಾಣಯ್ಯ, ಒಂದು ಕಡೆ ಫೋಟೋಶೂಟ್‌ನಿಂದ ಗಂಡ್ ಹೈಕ್ಳ ನಿದ್ದೆಗೆಡಿಸುತ್ತಿದ್ದರೆ, ಇನ್ನೊಂದ್ ಕಡೆ ಸೂಪರ್ ಸ್ಟಾರ್ ಚಿತ್ರಗಳಿಗೆ ನಾಯಕಿಯಾಗುವ ಮೂಲಕ ಸದ್ದು ಮಾಡ್ತಿದ್ದಾರೆ.

ಡೈರೆಕ್ಟರ್ ಪ್ರೇಮ್ ನಿರ್ದೇಶನದ `ಏಕ್ ಲವ್ ಯಾ’ ಚಿತ್ರದಲ್ಲಿ ರಾಣಾಗೆ ನಾಯಕಿಯಾಗಿ ನಟಿಸಿದ್ದ ಕೊಡಗಿನ ಬೆಡಗಿ ರೀಷ್ಮಾ, ನಟಿಸಿದ ಮೊದಲ ಚಿತ್ರದಲ್ಲೇ ಮನೋಜ್ಞವಾಗಿ ನಟಿಸಿ ಸೈ ಎನಿಸಿಕೊಂಡಿದ್ರು. `ರಾಣಾ’ ಮತ್ತು `ಮಾರ್ಗ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಗ್ಯಾಪಲ್ಲೊಂದು ರೀಷ್ಮಾ ಮಾಡಿಸಿರುವ ಫೋಟೋಶೂಟ್ ನೋಡುರನ್ನ ಇಂಪ್ರೇಸ್ ಮಾಡ್ತಿದೆ.

ನಟಿ ರೀಷ್ಮಾ ವೆಸ್ಟರ್ನ್ ಲುಕ್ಕಿನಲ್ಲಿ ಚೇರ್ ಮೇಲೆ ಕುಳಿತು ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಕಣ್ಣು ಕುಕ್ಕುವ ಅವತಾರದಲ್ಲಿ ಕಾಣಿಸಿಕೊಂಡಿರುವ ಅನಿತಾ ಕ್ಯೂಟ್ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ರೀಷ್ಮಾ ಹೊಸ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನೂ ಓದಿ: 2ನೇ ಚಿತ್ರ ರಿಲೀಸೇ ಆಗಿಲ್ಲ. 3, 4 ಮತ್ತು 5ನೇ ಸಿನಿಮಾ ಒಪ್ಪಿಕೊಂಡ ಯಂಗ್ ರೆಬೆಲ್ ಸ್ಟಾರ್

`ಏಕ್ ಲವ್ ಯಾ’ ಚಿತ್ರದ ನಂತರ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರೋ ಈ ಕೊಡಗಿನ ಕುವರಿ ಸದ್ಯ ಸ್ಯಾಂಡಲ್‌ವುಡ್‌ನ ಇಬ್ಬರು ಸೂಪರ್ ಸ್ಟಾರ್‌ಗಳ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಕುರಿತು ರಿವೀಲ್ ಮಾಡಲಿದೆ ಚಿತ್ರತಂಡ. ಒಟ್ನಲ್ಲಿ ನಟಿಸಿರೋ ಒಂದೇ ಚಿತ್ರಕ್ಕೆ, ನೆಚ್ಚಿನ ನಟಿಗೆ ಸಾಕಷ್ಟು ಚಿತ್ರಗಳ ಆಫರ್ ಬರುತ್ತಿರೋದನ್ನ ಕೇಳಿ ರೀಷ್ಮಾ ಫ್ಯಾನ್ಸ್ ದಿಲ್‌ಖುಷ್ ಆಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *