ಪಕ್ಷವು ಎಲ್ಲಾ ಹಂತಗಳಲ್ಲೂ ಏಕತೆ ಸಾಧಿಸಲಿ: ಸೋನಿಯಾ ಗಾಂಧಿ

By
1 Min Read

ನವದೆಹಲಿ: ಪಕ್ಷವು ಎಲ್ಲಾ ಹಂತಗಳಲ್ಲೂ ಏಕತೆಯನ್ನು ಹೊಂದಿರಬೇಕು ಎಂದು ಕೈ ನಾಯಕರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮನವಿ ಮಾಡಿದರು.

ಸಂಸದರ ಸಾಪ್ತಾಹಿಕ ಸಭೆಯಲ್ಲಿ ಮಾತನಾಡಿ, ಭಿನ್ನಮತೀಯರ ಗುಂಪಿಗೆ ಸಂದೇಶವನ್ನು ಕಳುಹಿಸಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ಸೋಲಿನ ನಂತರ ಪಕ್ಷವನ್ನು ಬಲಪಡಿಸುವುದು ಹೇಗೆ ಎನ್ನುವುದರ ಕುರಿತು ಅನೇಕ ಸಲಹೆಯನ್ನು ಸ್ವೀಕರಿಸಿದ್ದೇನೆ. ಆ ಎಲ್ಲಾ ಸಲಹೆಯನ್ನು ಸ್ವೀಕರಿಸಿ ಕೆಲಸವನ್ನು ನಿರ್ವಹಿಸುತ್ತೇನೆ ಎಂದು ಹೇಳಿದರು.

ಇತ್ತೀಚಿಗೆ ನಡೆದ ಚುನಾವಣೆಯ ಸೋಲಿನಿಂದ ಎಲ್ಲರಿಗೂ ನಿರಾಶೆಯುಂಟಾಗಿದೆ. ಆದರೆ ನಮ್ಮ ವಿಶಾಲ ಸಂಘಟನೆಯು ಎಲ್ಲಾ ಹಂತಗಳಲ್ಲಿ ಏಕತೆಯನ್ನು ಹೊಂದಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು. ಇದನ್ನೂ ಓದಿ: ಸೌಹಾರ್ದತೆ ಕೆಡಿಸುವ ಕೆಲಸ ಬಿಜೆಪಿಗೆ ತಿರುಗುಬಾಣ ಆಗುತ್ತೆ: ಸಿದ್ದರಾಮಯ್ಯ

ಇದೇ ವೇಳೆ ಕಳೆದ ತಿಂಗಳು ಐದು ರಾಜ್ಯಗಳ ಚುನಾವಣೆಯ ಫಲಿತಾಂಶದ ನಂತರ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನು ಉಲ್ಲೇಖಿಸಿದರು. ನಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಸಭೆ ಸೇರಿದ್ದೇವೆ. ನಾನು ಇತರ ಸಹೋದ್ಯೋಗಿಗಳನ್ನು ಭೇಟಿ ಮಾಡಿದ್ದೇನೆ. ನಮ್ಮ ಸಂಸ್ಥೆಯನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ನಾನು ಅನೇಕ ಸಲಹೆಗಳನ್ನು ಸ್ವೀಕರಿಸಿದ್ದೇನೆ ಎಂದು ಹೇಳಿದರು.

ಮುಂದಿನ ಹಾದಿಯನ್ನು ಹಿಂದೆಗಿಂತಲೂ ಹೆಚ್ಚು ಸವಾಲಿನಿಂದ ಕೂಡಿದೆ. ನಮ್ಮ ಪುನರುಜ್ಜೀವನವು ನಮಗೆ ಮಾತ್ರ ಪ್ರಾಮುಖ್ಯತೆಯ ವಿಷಯವಲ್ಲ. ಇದು ವಾಸ್ತವವಾಗಿ, ನಮ್ಮ ಪ್ರಜಾಪ್ರಭುತ್ವಕ್ಕೆ ಮತ್ತು ನಮ್ಮ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಸುಕಿನಲ್ಲಿ ಸುಪ್ರಭಾತ, ಅಲ್ಲಾಹ್ ಕೂಗುವ ಪರಿಪಾಠ ನಿನ್ನೆ, ಇಂದಿನದಲ್ಲ: ಕುಮಾರಸ್ವಾಮಿ

Share This Article
Leave a Comment

Leave a Reply

Your email address will not be published. Required fields are marked *