ಕಾಂಗ್ರೆಸ್‍ನವರ ಹೋರಾಟಕ್ಕೆ ನಾನು ಜಗ್ಗಲ್ಲ, ಬಗ್ಗಲ್ಲ, ಹಿಗ್ಗಲ್ಲ: ಈಶ್ವರಪ್ಪ

Public TV
2 Min Read

ಶಿವಮೊಗ್ಗ: ರಾಷ್ಟ್ರ ಧ್ವಜ ಅಂದರೆ ನನಗೆ ತಾಯಿ ಸಮಾನ. ಅದರ ಬಗ್ಗೆ ಯಾರೇ ಟೀಕೆ ಮಾಡಿದರೂ, ಅಪಮಾನ ಮಾಡಿದರೇ ಅವನು ರಾಷ್ಟ್ರದ್ರೋಹಿ ಆಗುತ್ತಾನೆ. ದೇಶದ ಹಿತದೃಷ್ಟಿಯಿಂದ ನಾನು ಏನು ಹೇಳಬೇಕಿತ್ತೋ, ಅದನ್ನು ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ಕೆಲಸ ಮುಗಿಯಿತು. ಇನ್ನು ಇದರ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಜೊತೆಗೆ ಕಾಂಗ್ರೆಸ್‍ನವರ ಇಂತಹ ಹೋರಾಟಗಳಿಗೆ ನಾನು ಹಿಗ್ಗಲ್ಲ, ಜಗ್ಗಲ್ಲ, ಬಗ್ಗಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ಸಿಂಧೂರ ರಾಜಕಾರಣ – ಸಂಸ್ಕೃತಿ ತಂಟೆಗೆ ಬರ್ಬೇಡಿ ಎಂದು ಸರ್ಕಾರದ ಎಚ್ಚರಿಕೆ

ನಾವು ಸಹ ವಿಪಕ್ಷದಲ್ಲಿದ್ದಾಗ ರೈತರ ಪರವಾಗಿ, ಸಾಮಾನ್ಯ ಜನರ ಪರವಾಗಿ ವಿಧಾನಸೌಧದ ಒಳಗೆ ಹಾಗೂ ಹೊರಗೆ ಹಗಲು ರಾತ್ರಿ ಸಾಕಷ್ಟು ಧರಣಿ ಮಾಡಿದ್ದೇವೆ. ಆ ಮೂಲಕವೇ ಅಧಿಕಾರಕ್ಕು ಬಂದಿದ್ದೇವೆ. ಆದರೆ ಕಾಂಗ್ರೆಸ್‍ನವರು ಒಂದೇ ವಿಷಯ ಇಟ್ಟುಕೊಂಡು ಧರಣಿ ಮಾಡುತ್ತಿದ್ದಾರೆ. ಅವರು ಧರಣಿ ಮಾಡಲಿ, ಸಂತೋಷ. ಆದರೆ ಸರ್ಕಾರ ನಡೆಸಿರುವವರು ಈ ರೀತಿ ಹಠ ಮಾಡಿಕೊಂಡು ಮುಂದುವರಿದರೆ ನಾನೇನು ಮಾಡಲು ಬರುವುದಿಲ್ಲ ಎಂದರು. ಇದನ್ನೂ ಓದಿ:  ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಆ ಬಗ್ಗೆ ಚರ್ಚೆ ಮಾಡೋಣ ಬನ್ನಿ ಅಂತಾ ಪ್ರೀತಿಯಿಂದ ನಾನು ಸಹ ಕರೆಯುತ್ತೇನೆ. ಇದರಲ್ಲಿ ಆಗಿದ್ದು ಆಗಿ ಹೋಗಿದೆ. ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಾ. ಉಳಿದಿದ್ದನ್ನು ರಾಜ್ಯದ ಜನ ತೀರ್ಮಾನ ಮಾಡುತ್ತಾರೆ. ರಾಷ್ಟ್ರಧ್ವಜ ವಿಷಯದ ಬಗ್ಗೆ ನಾವು, ನೀವು ಇಬ್ಬರು ಜನರ ಮಧ್ಯೆ ಹೋಗೋಣ. ವಿಧಾನಸಭೆ ಇರುವುದು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸಲುವಾಗಿ. ಈಗಾಗಲೇ ಧರಣಿ ಮಾಡುವುದರಿಂದ ಒಂದು ವಾರ ಕಳೆದು ಹೋಗಿದೆ. ಉಳಿದಿರುವ ದಿನದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ಅಧಿವೇಶನ ನಡೆಸಲು ಪ್ರತಿದಿನ 80 ಲಕ್ಷದಿಂದ ಒಂದೂವರೆ ಕೋಟಿ ಖರ್ಚು ಆಗುತ್ತದೆ ಅಂತಿದ್ದಾರೆ. ಈ ರೀತಿ ಹಗಲು ರಾತ್ರಿ ಧರಣಿ ಮಾಡಿ ಜನರ ದುಡ್ಡನ್ನು ಈ ರೀತಿ ಖರ್ಚು ಮಾಡೋದು ಬೇಡ. ಜನರ ಸಮಸ್ಯೆ ಬಗ್ಗೆ ಚರ್ಚಿಸಲು ವಿಧಾನಸಭೆ, ವಿಧಾನ ಪರಿಷತ್‍ಗೆ ಬನ್ನಿ ಅಂತಾ ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 6 ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲೇ ಸೊಸೆ ಕರೆ ತಂದ ಮಾವ

Share This Article
Leave a Comment

Leave a Reply

Your email address will not be published. Required fields are marked *