ಬ್ರಹ್ಮಾಸ್ತ್ರದ ಬಗ್ಗೆ ಕನ್ನಡದಲ್ಲಿ ʻಡೈಲಾಗ್‌ʼ ಹೊಡೆದ ಆಲಿಯಾ ಭಟ್‌

Public TV
1 Min Read

ಬೆಂಗಳೂರು: ಬಾಲಿವುಡ್‌ ಜೋಡಿ ನಟ ರಣಬೀರ್‌ ಕಪೂರ್‌ ಮತ್ತು ನಟಿ ಆಲಿಯಾ ಭಟ್‌ ಅಭಿನಯದ ʻಬ್ರಹ್ಮಾಸ್ತ್ರ ಪಾರ್ಟ್‌ ಒನ್‌ʼ ಸಿನಿಮಾ 2022ರ ಸೆ.9 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ. ಅಷ್ಟೇ ಅಲ್ಲ ದಕ್ಷಿಣ ಭಾರತದ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಟಿ ಆಲಿಯಾ ಭಟ್‌ ಸಿನಿಮಾ ಬಗ್ಗೆ ಕನ್ನಡದಲ್ಲಿ ಟ್ವೀಟ್‌ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

09.09.2022 ಈ ದಿನಾಂಕದೊಂದಿಗೆ ಬ್ರಹ್ಮಾಸ್ತ್ರ ಪಾರ್ಟ್‌ ಒನ್‌: ಶಿವನನ್ನು ನೀವು ತಪ್ಪಿಸಿಕೊಳ್ಳುವಂತಿಲ್ಲ! ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ ಮಹಾಯೋಧನೊಬ್ಬನ ಉದಯವಾಗಲಿದೆ. ಶಿವನನ್ನು ಪರಿಚಯಿಸುತ್ತಿದ್ದೇವೆ ಎಂದು ಆಲಿಯಾ ಭಟ್‌ ಕನ್ನಡದಲ್ಲಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ನಮ್ಮಿಬ್ಬರ ಮದುವೆ ಯಾವಾಗ – ಆಲಿಯಾಗೆ ರಣಬೀರ್‌ ಪ್ರಶ್ನೆ

ಈ ಸಿನಿಮಾವನ್ನು ಅಯನ್‌ ಮುಖರ್ಜಿ ನಿರ್ದೇಶಿಸಿದ್ದಾರೆ. ಕರಣ್‌ ಜೋಹರ್‌ ನಿರ್ಮಾಣ ಮಾಡಿದ್ದಾರೆ. ಚಿತ್ರ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಆಲಿಯಾ ವಿರುದ್ಧ FIR ದಾಖಲಿಸಲು ಮುಂದಾದ ಮುಂಬೈ ಪಾಲಿಕೆ

ಚಿತ್ರದಲ್ಲಿ ಅಮಿತಾಬ್‌ ಬಚ್ಚನ್‌, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್‌ ಸೇರಿದಂತೆ ಹಲವರು ಖ್ಯಾತ ನಟರು ಅಭಿನಯಿಸಿದ್ದಾರೆ. ಬುಧವಾರ ಬ್ರಹ್ಮಾಸ್ತ್ರ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *