ಅಧಿವೇಶನಕ್ಕೆ ಹಾಜರಾಗುವವರಿಗೆ ಎರಡು ಡೋಸ್ ಲಸಿಕೆ, ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ದಾಯ: ವೆಂಕಟೇಶ್ ಕುಮಾರ್

Public TV
1 Min Read

ಬೆಳಗಾವಿ: ಡಿಸೆಂಬರ್ 13 ರಿಂದ ಆರಂಭವಾಗಲಿರುವ ಚಳಿಗಾಲ ಅಧಿವೇಶಕ್ಕೆ ಆಗಮಿಸುವ ಶಾಸಕರು, ಅಧಿಕಾರಿಗಳು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಗೂ 72 ಗಂಟೆಯೊಳಗಿನ ಆರ್​ಟಿಪಿಸಿಆರ್ ನೆಗೆಟಿವ್ ರಿಪೋರ್ಟ್‌ನ್ನು ತೋರಿಸಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆಯಲ್ಲಿ ಇದೀಗ ಎರಡು ಹೊಸ ನಿರ್ದೇಶನಗಳು ಬಂದಿವೆ. ಎರಡು ಡೋಸ್ ಲಸಿಕೆ ಮತ್ತು 72 ಗಂಟೆಯೊಳಗಿನ ಆರ್‍ಟಿಪಿಸಿಆರ್ ನೆಗೆಟಿವ್ ರಿಪೋರ್ಟ್‌ನ್ನು ಕಡ್ಡಾಯವಾಗಿ ತೋರಿಸಬೇಕು. ನಾವು ಕೂಡ ಅಲ್ಲಿ ಎರಡು ಸ್ವ್ಯಾಬ್ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಿದ್ದೇವೆ. ಈಗಾಗಲೇ ಡಿಪಿಆರ್‌ಗೆ ಪತ್ರ ಬರೆದಿದ್ದೇವೆ, ಎಲ್ಲಾ ಕಾರ್ಯದರ್ಶಿ ಮಟ್ಟದ ಸಿಬ್ಬಂದಿಗಳು, ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಎರಡು ಡೋಸ್ ಲಸಿಕೆ ತೆಗೆದುಕೊಂಡ ಬರಬೇಕು. ಊಟ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದೇ ರೀತಿ ಎಲ್ಲಾ ಕೊಠಡಿಗಳಲ್ಲಿ ಇ-ಆಫೀಸ್ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ಫೈಲ್‍ಗಳು ಇ-ಆಫೀಸ್‍ನಿಂದ ಮುಂದಕ್ಕೆ ಹೋಗುತ್ತವೆ ಎಂದರು. ಇದನ್ನೂ ಓದಿ: ಯಾವುದೇ ಅವಸರದ ನಿರ್ಧಾರವನ್ನು ನಾವು ತೆಗೆದುಕೊಳ್ಳುವುದಿಲ್ಲ: ಸಿಎಂ

ತಾತ್ಕಾಲಿಕವಾಗಿ ತಾರಿಹಾಳದ ಹತ್ತಿರ ಟೌನ್‍ಶೀಪ್ ಮಾಡುತ್ತಿದ್ದೇವೆ. ಹೊರಗಡೆಯಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಿದ್ದಾರೆ. ಪೊಲೀಸ್ ಕಮಿಷನರ್ ಅವರು ಊಟ, ವಸತಿ ಸೇರಿದಂತೆ ಇನ್ನಿತರ ಜವಾಬ್ದಾರಿಯನ್ನು ನೀಡಲಾಗಿದೆ. ಅಧಿವೇಶನ ವೇಳೆ ಪ್ರತಿಭಟನೆ ಮಾಡುವವರು ಸರ್ಕಾರದ ಮಾರ್ಗಸೂಚಿ ಪ್ರಕಾರ 500ಕ್ಕೂ ಹೆಚ್ಚು ಜನರು ಇರಬಾರದು. ಯಾವುದೇ ಕಾರಣಕ್ಕೂ ಹೆಚ್ಚಿಗೆ ಜನ ಸೇರಬಾರದು. ಕೋವಿಡ್ ನಿಯಮಗಳನ್ನು ಯಾರೂ ಕೂಡ ಉಲ್ಲಂಘಿಸದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಕಮಿಷನರ್‌ಗೆ ಸೂಚನೆ ಕೊಟ್ಟಿದ್ದೇನೆ. ಕೊಂಡಸಕೊಪ್ಪ ಹಾಗೂ ಸುವರ್ಣಗಾರ್ಡ್‍ನಲ್ಲಿ ಪ್ರತಿಭಟನೆಗೆ, ಹೋರಾಟಗಾರರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್

Share This Article
Leave a Comment

Leave a Reply

Your email address will not be published. Required fields are marked *