ಲಕ್ನೋ ಫ್ರಾಂಚೈಸ್ ನೀಡಿದ ಆಫರ್‌ನಿಂದ ರಾಹುಲ್, ರಶೀದ್ ಖಾನ್‍ಗೆ ಐಪಿಎಲ್ ಬ್ಯಾನ್ ಭೀತಿ?

Public TV
2 Min Read

ಮುಂಬೈ: 15ನೇ ಆವೃತ್ತಿ ಐಪಿಎಲ್‍ಗಾಗಿ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದೆ. ಜನವರಿ ತಿಂಗಳಲ್ಲಿ ನಡೆಯುವ ಮೆಗಾ ಹರಾಜಿಗೂ ಮುನ್ನ ಹೊಸ ಫ್ರಾಂಚೈಸ್ ಲಕ್ನೋ ತಮ್ಮ ತಂಡಕ್ಕಾಗಿ ಆಡಬೇಕೆಂದು ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ರಶೀದ್ ಖಾನ್‍ಗೆ ನೀಡಿದ ಬಿಗ್ ಆಫರ್ ಇದೀಗ ಈ ಇಬ್ಬರು ಕ್ರಿಕೆಟಿಗರ ಐಪಿಎಲ್ ಕೆರಿಯರ್‌ಗೆ ಕಂಟಕವಾಗಿದೆ.

ಈಗಾಗಲೇ ಐಪಿಎಲ್‍ನ 8 ತಂಡಗಳೊಂದಿಗೆ ಇನ್ನೆರಡು ಹೊಸ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಸೇರಿಕೊಂಡಿದೆ. ಈಗ ತಂಡಗಳ ಸಂಖ್ಯೆ 10ಕ್ಕೆ ಏರಿಕೆ ಕಂಡಿದೆ. ಇದೀಗ ಹೊಸ ತಂಡಗಳು ತಮ್ಮ ತಂಡವನ್ನು ಬಲಿಷ್ಠವಾಗಿಸಲು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದೆ. ಅದರಂತೆ ಪಂಜಾಬ್ ತಂಡದ ನಾಯಕರಾಗಿದ್ದ ಕೆ.ಎಲ್ ರಾಹುಲ್‍ಗೆ 20 ಕೋಟಿ ಮತ್ತು ಹೈದರಾಬಾದ್ ತಂಡದ ರಶೀದ್ ಕಾನ್‍ಗೆ 16 ಕೋಟಿ ರೂಪಾಯಿಯ ಆಫರ್ ಒಂದನ್ನು ಲಕ್ನೋ ತಂಡ ನೀಡಿದೆ ಇದನ್ನು ಇವರಿಬ್ಬರು ಒಪ್ಪಿಕೊಂಡಿದ್ದಾರೆ ಎಂಬ ಕುರಿತು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: IPL 2022 Retentions: ಧೋನಿಗಿಂತಲೂ ಜಡೇಜಾ ದುಬಾರಿ – ಯಾರಿಗೆ ಎಷ್ಟು ಕೋಟಿ?

ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಸನ್‍ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡ ಬಿಸಿಸಿಐಗೆ ಈ ಬಗ್ಗೆ ದೂರು ನೀಡಿದೆ. ಈ ದೂರಿನಲ್ಲಿ ಲಕ್ನೋ ಫ್ರಾಂಚೈಸ್ ಆಟಗಾರರಿಗೆ ಆಮಿಷ ಒಡ್ಡುತ್ತಿದೆ ಎಂದು ಆರೋಪಿಸಿ, ಕೆಎಲ್ ರಾಹುಲ್ ಮತ್ತು ರಶೀದ್ ಖಾನ್ ಈ ಫ್ರಾಂಚೈಸ್ ಜೊತೆ ಸಂಪರ್ಕಿಸಿರುವುದರ ಬಗ್ಗೆ ಪ್ರಶ್ನೆ ಮಾಡಿದೆ. ಇದು ಈ ಇಬ್ಬರು ಆಟಗಾರಿಗೆ ಮುಳ್ಳಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಶ್ರೇಯಸ್ ಅಯ್ಯರ್ ನಮಗೆ ಬೇಕು – ಟೊಂಕಕಟ್ಟಿ ನಿಂತಿದೆ ಮುಂಬೈ ಇಂಡಿಯನ್ಸ್!

ಬಿಸಿಸಿಐ ನಿಯಮದ ಪ್ರಕಾರ ಒಂದು ಫ್ರಾಂಚೈಸ್‍ನ ಒಪ್ಪಂದ ಅಂತ್ಯವಾಗುವ ಮುನ್ನ ಇನ್ನೊಂದು ಫ್ರಾಂಚೈಸ್ ಆಟಗಾರರನ್ನು ಸಂಪರ್ಕಿಸಬಾರದು ಇದು ತಪ್ಪು. ಇದೀಗ ಈ ತಪ್ಪನ್ನು ರಾಹುಲ್ ಮತ್ತು ರಶೀದ್ ಮಾಡಿದ್ದರೆ ಶಿಕ್ಷೆ ಕೂಡ ಆಗಬೇಕೆಂದು ಪಂಜಾಬ್ ಮತ್ತು ಹೈದರಾಬಾದ್ ಮನವಿ ಸಲ್ಲಿಸಿದೆ. ಇದರಿಂದ ರಾಹುಲ್ ಮತ್ತು ರಶೀದ್ ಖಾನ್ ಐಪಿಎಲ್‍ನಿಂದ ಬ್ಯಾನ್ ಆಗುವ ಭೀತಿ ಎದುರಿಸುತ್ತಿದ್ದಾರೆ. ಈ ಹಿಂದೆ 2010ರಲ್ಲಿ ಇಂತಹದ್ದೇ ಘಟನೆಯೊಂದು ನಡೆದಿತ್ತು. ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ರವೀಂದ್ರ ಜಡೇಜಾರನ್ನು ಮುಂಬೈ ಫ್ರಾಂಚೈಸ್ ಸಂಪರ್ಕಿಸಿದ ಕಾರಣ ಜಡೇಜಾಗೆ ಒಂದು ವರ್ಷ ಐಪಿಎಲ್‍ನಿಂದ ನಿಷೇಧ ಹೇರಲಾಗಿತ್ತು. ಹಾಗಾಗಿ ಇದೀಗ ರಾಹುಲ್ ಮತ್ತು ರಶೀದ್ ಖಾನ್‍ಗೂ ಬ್ಯಾನ್ ಭಯ ಶುರುವಾಗಿದೆ. ಇದೀಗ ಚೆಂಡು ಬಿಸಿಸಿಐ ಅಂಗಳದಲ್ಲಿದ್ದು, ಮುಂದೆ ಯಾವರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ಅಹಮದಾಬಾದ್ ತಂಡ 15ನೇ ಆವೃತ್ತಿ ಐಪಿಎಲ್ ಆಡುವುದು ಡೌಟ್?

Share This Article
Leave a Comment

Leave a Reply

Your email address will not be published. Required fields are marked *