ಕಾಡಿದ ಕೀವಿಸ್ ಬೌಲರ್‌ಗಳು – ಪ್ರಥಮ ಟೆಸ್ಟ್ ಡ್ರಾನಲ್ಲಿ ಅಂತ್ಯ

Public TV
2 Min Read

ಲಕ್ನೋ: ತೀವ್ರ ಕುತೂಹಲ ಮೂಡಿಸಿದ್ದ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದೆ. ಐದನೇ ದಿನ ಉಭಯ ತಂಡಗಳು ತಂಡಗಳು ಜಯಕ್ಕಾಗಿ ಹೋರಾಟ ನಡೆಸಿದರೂ ಕೂಡ ಕಡೆಯಲ್ಲಿ ಡ್ರಾಗೆ ತೃಪ್ತಿಪಡಬೇಕಾಯಿತು.

69.1 ಓವರ್‌ನಲ್ಲಿ 128 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡಾಗ ಭಾರತ ಜಯಗಳಿಸುವ ಸಾಧ್ಯತೆ ಜಾಸ್ತಿ ಇತ್ತು. ಆದರೆ ಮುಂದಿನ 29 ಓವರ್​​ಗಳಲ್ಲಿ ನ್ಯೂಜಿಲೆಂಡಿನ ಮೂರು ವಿಕೆಟ್ ಉದರಿಸಿಲು ಮಾತ್ರ ಭಾರತೀಯ ಬೌಲರ್‌ಗಳು ಯಶಸ್ವಿಯಾದರು. ಆದರೆ ಕಡೆಯಲ್ಲಿ ನ್ಯೂಜಿಲೆಂಡ್‌ ಬೌಲರ್‌ಗಳು ಬ್ಯಾಟ್ಸ್‌ಮ್ಯಾನ್‌ಗಳ ರೀತಿ ಆಡಿ ನ್ಯೂಜಿಲೆಂಡ್‌ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದರು.

ಭಾರತ ತಂಡ ನೀಡಿದ್ದ 284 ರನ್‍ಗಳ ಟಾರ್ಗೆಟ್ ಬೆನ್ನುಹತ್ತಿದ ನ್ಯೂಜಿಲೆಂಡ್ ತಂಡ 4ನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 4 ರನ್‍ಗಳಿಸಿತ್ತು. 5ನೇ ದಿನ ಬ್ಯಾಟಿಂಗ್ ಆಗಮಿಸಿದ ಟ್ಯಾಮ್ ಲ್ಯಾಥಮ್ ಮತ್ತು ವಿಲಿಯಂ ಸೊಮರ್ವಿಲ್ಲೆ 2ನೇ ವಿಕೆಟ್‍ಗೆ 76 ರನ್(194) ಜೊತೆಯಾಟವಾಡಿ ಭಾರತಕ್ಕೆ ಕಾಡಿದರು. ಈ ಜೋಡಿಯನ್ನು ಬೇರ್ಪಡಿಸಲು ಉಮೇಶ್ ಯಾದವ್ ಬೌಲಿಂಗ್‍ಗೆ ಬರಬೇಕಾಯಿತು. ವಿಲಿಯಂ ಸೊಮರ್ವಿಲ್ಲೆ 36 ರನ್ (110 ಎಸೆತ 5 ಬೌಂಡರಿ) ಸಿಡಿಸಿ ಉಮೇಶ್ ಯಾದವ್ ಬೌಲಿಂಗ್‍ನಲ್ಲಿ ಶುಭಮನ್ ಗಿಲ್ ಹಿಡಿದ ಅದ್ಭುತ ಕ್ಯಾಚ್‍ಗೆ ಬಳಿಯಾದರು. ನಂತರ ಬಂದ ನಾಯಕ ಕೇನ್ ವಿಲಿಯಮ್ಸನ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಈ ವೇಳೆ ಟ್ಯಾಮ್ ಲ್ಯಾಥಮ್ 52 ರನ್ (146 ಎಸೆತ, 3 ಬೌಂಡರಿ) ಸಿಡಿಸಿ ಔಟ್ ಅದರು. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

ನಂತರ ನ್ಯೂಜಿಲೆಂಡ್ ತಂಡದ ಕುಸಿತ ಆರಂಭಗೊಂಡಿತು. ರಾಸ್ ಟೇಲರ್ 2 ರನ್ ಮತ್ತು ಹೆನ್ರಿ ನಿಕೋಲ್ಸ್ 1 ರನ್‍ಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ವಿಕೆಟ್ ಬೀಳುತ್ತಿದ್ದನ್ನು ಗಮನಿಸಿ ಕೇನ್ ವಿಲಿಯಮ್ಸನ್ ಕೂಡ 24 ರನ್ (112 ಎಸೆತ, 3 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ಬಂದ ಟಾಮ್ ಬ್ಲಂಡೆಲ್ 2 ರನ್, ಕೈಲ್ ಜೇಮಿಸನ್ 5 ರನ್, ಟೀಮ್ ಸೌಥಿ 4 ರನ್ ಮಾಡಿ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕೈಚಳಕಕ್ಕೆ ವಿಕೆಟ್ ಕೊಟ್ಟು ಹೊರನಡೆದರು.

ನ್ಯೂಜಿಲೆಂಡ್ ಸೋಲಿನಿಂದ ಪಾರು ಮಾಡಲು ಕಡೆಯವರೆಗೆ ಹೋರಾಡಿದ ಮೂಲತಃ ಭಾರತೀಯರಾದ ಭಾರತೀಯರಾದ ರಚಿನ್ ರವೀಂದ್ರ 18 ರನ್ (ಎಸೆತ 81 ಎಸೆತ, 2 ಬೌಂಡರಿ) ಮತ್ತು ಏಜಾಜ್ ಪಟೇಲ್ 2 ರನ್ (23 ಎಸೆತ) ಬಾರಿಸಿ ಅಜೇಯರಾಗಿ ಉಳಿದು ನ್ಯೂಜಿಲೆಂಡ್ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಭಾರತಪರ ಭರ್ಜರಿ ಬೌಲಿಂಗ್ ದಾಳಿ ನಡೆಸಿದ ರವೀಂದ್ರ ಜಡೇಜಾ 4 ವಿಕೆಟ್ ಕಿತ್ತು ಮಿಂಚಿದರೆ, ಅಶ್ವಿನ್ 3 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *