ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ

Public TV
2 Min Read

– ಅಧಿಕಾರಿಗಳದ್ದು ಜಾಣ ಕುರುಡು

ಬೀದರ್: ಗಡಿ ಜಿಲ್ಲೆ ಬೀದರ್ ನಲ್ಲಿ ಬ್ರೀಮ್ಸ್ ಗೆ ಬರುವ ಬಡ ರೋಗಿಗಳಿಂದ ಖಾಸಗಿ ಅಂಬುಲೆನ್ಸ್ ಗಳ ವಸೂಲಿ ದಂಧೆ ಜೋರಾಗಿದೆ. ತುರ್ತು ಸೇವೆಯನ್ನೆ ಬಂಡವಾಳ ಮಾಡಿಕೊಂಡ ಖಾಸಗಿ ಅಂಬುಲೆನ್ಸ್ ಗಳು ದಪ್ಪಟ್ಟು ಹಣವನ್ನು ರೋಗಿಗಳಿಂದ ವಸೂಲಿ ಮಾಡುತ್ತಿದ್ದಾರೆ.

ಬೀದರ್‍ನ ಬ್ರಿಮ್ಸ್ ಆಸ್ಪತ್ರೆ ಬಳಿ ಖಾಸಗಿ ಅಂಬುಲೆನ್ಸ್ ಗಳ ದರ್ಬಾರ್ ಜೋರಾಗಿದೆ. ತಾವು ಆಡಿದ್ದೇ ಆಟ. ಹೇಳೋರಿಲ್ಲ, ಕೇಳೋರಿಲ್ಲ ಅಂತ ಖಾಸಗಿ ಅಂಬುಲೆನ್ಸ್‍ಗಳು ವರ್ತಿಸುತ್ತಿವೆ. ಬ್ರಿಮ್ಸ್ ನಲ್ಲಿ 6 ಸರ್ಕಾರಿ ಅಂಬುಲೆನ್ಸ್ ಗಳು ಇದ್ದರೂ ಜನರ ಸೇವೆಗೆ ಸಿಗ್ತಿಲ್ಲ. ಇದರ ಹಿಂದೆ ಬ್ರಿಮ್ಸ್-ಖಾಸಗಿ ಅಂಬುಲೆನ್ಸ್ ಗಳ ಕರಾಮತ್ತು ಆರೋಪ ಕೇಳಿ ಬಂದಿದೆ. ಖಾಸಗಿ ಅಂಬುಲೆನ್ಸ್ ಚಾಲಕರು ಇದನ್ನೆ ಬಂಡವಾಳ ಮಾಡಿಕೊಂಡಿದ್ದಾರೆ. ರೋಗಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡಿ ದಂಧೆಗೆ ಇಳಿದಿದ್ದಾರೆ. ಖಾಸಗಿಯವರ ಧನದಾಹದ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ನಡೆಸ್ತು. ಈ ವೇಳೆ ಎಲ್ಲವೂ ಬಹಿರಂಗವಾಗಿದೆ.

ಖಾಸಗಿ ಅಂಬುಲೆನ್ಸ್ ಗಳ ಧನದಾಹ..!
ಪಬ್ಲಿಕ್ ಟಿವಿ: ಬ್ರಿಮ್ಸ್‍ನಿಂದ ರೋಗಿಯನ್ನು ಅಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಬೇಕು.. ಎಷ್ಟಾಗುತ್ತೆ..?
ಅಂಬುಲೆನ್ಸ್ ಡ್ರೈವರ್: ಪೆಟ್ರೋಲ್ ರೇಟ್ ಜಾಸ್ತಿಯಾಗಿದೆ.. ರೇಟ್ ಜಾಸ್ತಿಯಾಗುತ್ತೆ
ಪಬ್ಲಿಕ್ ಟಿವಿ: ಎಷ್ಟಾಗುತ್ತೆ..?
ಡ್ರೈವರ್: ಸಣ್ಣ ಅಂಬುಲೆನ್ಸ್ ಗೆ ವಿತ್ ಆಕ್ಸಿಜನ್ 5,300 ಆಗುತ್ತೆ
ಡ್ರೈವರ್: ದೊಡ್ಡ ಅಂಬುಲೆನ್ಸ್ ವಿತ್ ವೆಂಟಿಲೇಟರ್ ಗೆ 12,000 ವರೆಗೆ ಆಗುತ್ತೆ

ಹೀಗೆ ಅಂಬುಲೆನ್ಸ್ ಸೇವೆಯ ಹೆಸರಿನಲ್ಲಿ ಬಡರೋಗಿಗಳಿಂದ ಸಾವಿರಾರು ರೂ. ವಸೂಲಿ ಮಾಡುತ್ತಿರುವ ಖಾಸಗಿ ಅಂಬುಲೆನ್ಸ್ ಚಾಲಕರ ನಿಜ ಬಣ್ಣ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ವೇಳೆ ಎಲ್ಲವೂ ಬಯಲಾಗಿದೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

ಬ್ರಿಮ್ಸ್ ಜಾಣಕುರುಡು..!
ಬ್ರಿಮ್ಸ್ ಆಸ್ಪತ್ರೆ ಬಳಿಯೇ ಈ ಖಾಸಗಿ ಅಂಬುಲೆನ್ಸ್ ಗಳ ದಂಧೆ ನಡೀತಿದ್ದು, ಈ ಬಗ್ಗೆ ಬ್ರಿಮ್ಸ್ ಅಧೀಕ್ಷಕರನ್ನು ಕೇಳಿದ್ರೆ ನನಗೇನೂ ಗೊತ್ತಿಲ್ಲ. ನಿಮ್ಮ ವಾಹಿನಿಯಿಂದ ವಿಷಯ ತಿಳಿದಿದೆ. ಎಸ್‍ಪಿ ಹಾಗೂ ಡಿಸಿಗೆ ಈ ಬಗ್ಗೆ ವರದಿ ನೀಡ್ತೇನೆ ಅಂತ ಜಾರಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಎಷ್ಟು ಅಂಬುಲೆನ್ಸ್ ಇದೆ ಅಂತ ಕೇಳಿದ್ರೆ 6 ಇದೆ ಅಂತಾರೆ. ಆದರೆ ಪಬ್ಲಿಕ್ ರಿಯಾಲಿಟಿ ಚೆಕ್ ನಡೆಸಿದಾಗ ಕೇವಲ 2-3 ಅಂಬುಲೆನ್ಸ್ ಗಳು ಮಾತ್ರ ಕಂಡು ಬಂದ್ವು.

ಗಡಿ ಜಿಲ್ಲೆ ಬೀದರ್‍ನಲ್ಲಿ ಬ್ರೀಮ್ಸ್‍ಗೆ ಬರುವ ಬಡರೋಗಿಗಳಿಂದ ಖಾಸಗಿ ಅಂಬುಲೆನ್ಸ್ ಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಮಾತ್ರ ವಿಪರ್ಯಾಸದ ಸಂಗತಿ. ಇನ್ನಾದರೂ ಸರ್ಕಾರ ಎಚ್ಚೆತ್ತು ಅಂಬುಲೆನ್ಸ್ ಚಾಲಕರ ದಂಧೆಗೆ ಬ್ರೇಕ್ ಹಾಕಬೇಕಾಗಿದೆ. ಇದನ್ನೂ ಓದಿ: ಡಿಕೆಶಿಗಾಗಿ ಒಕ್ಕಲಿಗ ಕಾಂಗ್ರೆಸ್ ನಾಯಕರ ಸಭೆ – ಶಿವಕುಮಾರ್ ಟ್ರೆಂಡ್ ಕ್ರಿಯೇಟ್‍ಗೆ ರಣತಂತ್ರ

Share This Article
Leave a Comment

Leave a Reply

Your email address will not be published. Required fields are marked *