ಹಾಡಹಗಲಲ್ಲೇ ಸರ್ಕಾರಿ ಕಚೇರಿಗೆ ನುಗ್ಗಿ ಮೂವರು ಮಹಿಳೆಯರಿಗೆ ಕತ್ತಿಯಿಂದ ಕಡಿದ ದುಷ್ಕರ್ಮಿ

Public TV
2 Min Read

– ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಮಂಗಳೂರು: ನಗರದ ಕರಂಗಲಪಾಡಿಯಲ್ಲಿನ ಡಯಟ್ ಸಂಸ್ಥೆಯಲ್ಲಿ ದುಷ್ಕರ್ಮಿಯೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಶಿಕ್ಷಕಿಗೆ ಗಿಫ್ಟ್ ಕೊಡುವ ನೆಪದಲ್ಲಿ ಬಂದಿದ್ದ ದುಷ್ಕರ್ಮಿ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ತಲವಾರು ಅಟ್ಯಾಕ್ ಮಾಡಿದ್ದಾನೆ.

ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ತಲವಾರು ದಾಳಿ ನಡೆಸಿದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಕುಂದಾಪುರ ಮೂಲದ 31 ವರ್ಷದ ನವೀನ್ ಎಂದು ಗುರುತಿಸಲಾಗಿದೆ. ನವೀನ್‍ನನ್ನು ಪೊಲೀಸರು ಬಂಧಿಸಿದ್ದು, ಈತ ಇಲ್ಲಿನ ಹಳೆ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಶಿಕ್ಷಕಿಯೊಬ್ಬರ ಮೇಲೆ ದ್ವೇಷ ಸಾಧನೆಗಾಗಿ ಈ ಕೃತ್ಯ ಎಸಗಿರುವ ಮಾಹಿತಿಯಿದೆ. ಘಟನೆಯಲ್ಲಿ ಇಲ್ಲಿನ ಸಿಬ್ಬಂದಿ ನಿರ್ಮಲಾ, ರೀನಾ ರಾಯ್, ಗುಣವತಿ ಎಂಬವರಿಗೆ ಗಾಯವಾಗಿದ್ದು, ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದೆ. ಗಾಯಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ:  ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

ಪ್ರಾರಂಭದಲ್ಲಿ ಸಂಸ್ಥೆಯ ಒಳಗೆ ಬಂದಿದ್ದ ಈ ನವೀನ್ ಶಿಕ್ಷಕರೊಬ್ಬರನ್ನು ಕೇಳಿದ್ದಾನೆ. ಅವರಿಗೆ ಗಿಫ್ಟ್ ಒಂದನ್ನು ನೀಡೊದಕ್ಕೆ ಬಂದಿರೋದಾಗಿ ಹೇಳಿದ್ದಾನೆ. ಆದರೆ ಆ ಸಂದರ್ಭ ಆತ ಕೇಳಿಕೊಂಡು ಬಂದ ಶಿಕ್ಷಕ ಇರಲಿಲ್ಲ. ಇದರಿಂದ ಸಿಟ್ಟಿಗೆದ್ದ ಆತ ತಕ್ಷಣ ತನ್ನ ಬ್ಯಾಗ್ ಒಳಗಿಂದ ತಲವಾರು ತೆಗೆದು ಅಲ್ಲಿಂದ ಇತರ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದಾನೆ.

ಘಟನೆ ಸಂದರ್ಭ ಇಬ್ಬರು ಸಿಬ್ಬಂದಿ ಓಡಿ ಬಂದು ಪಕ್ಕದಲ್ಲೇ ಇದ್ದ ಜೈಲು ಸಿಬ್ಬಂದಿ ಬಳಿ ವಿಷಯ ಹೇಳಿದ್ದಾರೆ. ತಕ್ಷಣ ಸ್ಥಳೀಯರು ಮತ್ತು ಜೈಲು ಸಿಬ್ಬಂದಿ ಆತನನ್ನು ಹಿಡಿದು ಬರ್ಕೆ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡವರಲ್ಲಿ ಒಬ್ಬರಿಗೆ ತಲೆ, ಮತ್ತಿಬ್ಬರ ಕೈಗೆ ಗಾಯವಾಗಿದೆ. ಪೆÇಲೀಸರು ಬಂಧಿತ ನವೀನ್‍ನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೊತೆ ರಾಜನಾಥ್ ಮಾತುಕತೆ

ನವೀನ್ ಕುಂದಾಪುರದಲ್ಲಿ ಜವಾನ ಕೆಲಸ ಮಾಡ್ತಿದ್ದ ಎಂದು ತಿಳಿದುಬಂದಿದೆ. ಆದ್ರೆ ಈತನಿಗೆ ಶಿಕ್ಷಕಿಯೊಬ್ಬರ ಮೇಲೆ ಇದ್ದ ದ್ವೇಷ ಏನು ಎಂಬ ಬಗ್ಗೆಯು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಘಟನೆಯಿಂದ ಸಂಸ್ಥೆಯಲ್ಲಿದ್ದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದು, ಒಂದು ಕ್ಷಣದಲ್ಲಿ ಏನಾಯ್ತು ಎಂಬುದೇ ತಿಳಿಯದಂತಾಗಿದ್ದಾರೆ. ಒಟ್ಟಿನಲ್ಲಿ ತಲವಾರು ದಾಳಿ ನಡೆಸಿದ ಆಗಂತುಕ ಇದೀಗ ಬಂಧಿಸಿದ್ದು, ಹೆಚ್ಚಿನ ತನಿಖೆ ಇನ್ನಷ್ಟು ನಡೆಯಲಿದೆ. ಇದನ್ನೂ ಓದಿ: ಹುಣಸೋಡು ಸ್ಫೋಟ ಪ್ರಕರಣ – ಆರನೇ ವ್ಯಕ್ತಿ ಮೃತದೇಹ ಡಿಎನ್‍ಎ ವರದಿಯಿಂದ ಪತ್ತೆ

Share This Article
Leave a Comment

Leave a Reply

Your email address will not be published. Required fields are marked *