ಜನವರಿ ವೇಳೆಗೆ ಮಕ್ಕಳ ಲಸಿಕೆ ಲಭ್ಯವಾಗಬಹುದು: ಆದಾರ್ ಪೂನಾವಾಲಾ

Public TV
1 Min Read

ನವದೆಹಲಿ: ಮಕ್ಕಳ ಮೇಲೆ ನಡೆಯುತ್ತಿರುವ ಕೊವೊವ್ಯಾಕ್ಸ್ ಲಸಿಕೆ ಪ್ರಯೋಗ ಸುಗಮವಾಗಿದ್ದು, ಅಂದುಕೊಂಡಂತೆ ಆದರೆ ಜನವರಿ ಅಥಾವ ಫೆಬ್ರವರಿಯಲ್ಲಿ ಬಳಕೆಗೆ ಮುಕ್ತವಾಗಬಹುದು ಎಂದು ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ತಿಳಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ವ್ಯಾಕ್ಸಿನ್ ಪ್ರಯೋಗ ಹಂತದಲ್ಲಿದ್ದು, ಬಹಳಷ್ಟು ಸ್ವಯಂ ಸೇವಕರಿಗೆ ನೀಡಲಾಗಿದೆ. ಅದನ್ನು ವಿಮರ್ಶೆ ಮಾಡಲಾಗುತ್ತಿದೆ. ಡಿಸೆಂಬರ್ ವೇಳೆಗೆ ವ್ಯಾಕ್ಸಿನ್ ಪರಿಣಾಮಗಳ ಬಗ್ಗೆ ನಡೆಯುತ್ತಿರುವ ಪರಾಮರ್ಶೆ ಅಂತ್ಯವಾಗಲಿದ್ದು, ಬಳಿಕ ಸಾರ್ವಜನಿಕ ಬಳಕೆಗೆ ಮುಕ್ತ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ಶಿಕ್ಷಣ ನೀತಿಯಲ್ಲಿ ಕಾಂಬಿನೇಶನ್‍ನಿಂದ ಕೋರ್ಸ್, ಸಬ್ಜೆಕ್ಟ್‌ಗೆ ಬದಲಾಯಿಸಲಾಗಿದೆ: ಅಶ್ವಥ್ ನಾರಾಯಣ್

3-4 ತಿಂಗಳ ಅವಧಿಯಲ್ಲಿ ವ್ಯಾಕ್ಸಿನ್ ಪ್ರತಿಕ್ರಿಯೆಯನ್ನು ಅಧ್ಯಯನ ಮಾಡಲಾಗುತ್ತಿದೆ. ವ್ಯಾಕ್ಸಿನ್ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅಧ್ಯಯನ ನಡೆದಿದ್ದು, ಹಂತ ಹಂತವಾಗಿ ಈ ಬಗ್ಗೆ ವರದಿಗಳು ಬರಲಿದೆ ಎಂದು ಪೂನಾವಾಲಾ ಹೇಳಿದರು.

ಅಮೇರಿಕದ ಲಸಿಕೆ ತಯಾರಕ ಸಂಸ್ಥೆ ನೊವೊವಾಕ್ಸ್ ಇಂಕ್ ಮಕ್ಕಳಿಗಾಗಿ ಓಗಿಘಿ-ಅoಗಿ2373 ಹೆಸರಿನ ಲಸಿಕೆ ಅಭಿವೃದ್ಧಿ ಪಡಿಸಿದೆ. ಇದು ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿರುವ ಸೀರಂ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಜೊತೆಗೆ ಒಪ್ಪಂದ ಮಾಡಿಕೊಂಡಿದೆ, ಪ್ರಯೋಗಗಳನ್ನು ನಡೆಸಲಾಗುತ್ತಿದೆ. 2 ರಿಂದ 17 ವರ್ಷದ ಮಕ್ಕಳ ಮೇಲೆ ಪ್ರಯೋಗ ನಡೆಯುತ್ತಿದ್ದು, ದೇಶದ ಹತ್ತು ಪ್ರದೇಶಗಳಲ್ಲಿ 910 ಸ್ವಯಂ ಸೇವಕರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *