ಕೆಂಗೇರಿ ಮೆಟ್ರೋ ವೇದಿಕೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕನ್ನಡ ಮಾಯ

Public TV
1 Min Read

ಬೆಂಗಳೂರು: ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ನಿರ್ಮಾಣವಾಗಿರುವ ಮೆಟ್ರೋ ನೇರಳೆ ಮಾರ್ಗ ಇಂದು ಉದ್ಘಾಟನೆಯಾಗಿದೆ. ಈ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಸಂಪೂರ್ಣ ಇಂಗ್ಲಿಷ್ ಪದಗಳ ಬಳಕೆಮಾಡಿ ಕನ್ನಡ ಮಾಯಾವಾಗುವಂತೆ ಮಾಡಿದ್ದಾರೆ.

ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ಬಳಿಕ ಕೆಂಗೇರಿ ಮೆಟ್ರೋ ನಿಲ್ದಾಣದ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ ಸಂಪೂರ್ಣ ಇಂಗ್ಲಿಷ್ ಪದಗಳ ಬಳಕೆ ಮಾಡಲಾಗಿತ್ತು. ಇದನ್ನೂ ಓದಿ: ಮೈಸೂರು ರಸ್ತೆ To ಕೆಂಗೇರಿ – ಮೆಟ್ರೋ ಮಾರ್ಗ ಉದ್ಘಾಟನೆ

ವೇದಿಕೆಯ ಹಿಂಭಾಗದಲ್ಲಿದ್ದ ಬ್ಯಾನರ್‌ನಲ್ಲಿ ಒಂದೇ ಒಂದು ಕನ್ನಡ ಪದ ಬಳಕೆ ಮಾಡದೆ ಬಿಎಂಆರ್​ಸಿಎಲ್ ಕಾರ್ಯಕ್ರಮ ಆಯೋಜಿಸಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರದ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ, ಸಿಎಂ ಬಸವರಾಜ ಬೊಮ್ಮಾಯಿ, ಸಂಸದರಾದ ಪಿಸಿ ಮೋಹನ್, ತೇಜಸ್ವಿ ಸೂರ್ಯ, ಸಚಿವರಾದ ವಿ ಸೋಮಣ್ಣ, ಆರ್. ಅಶೋಕ್, ಮುನಿರತ್ನ, ಎಸ್ ಟಿ ಸೋಮಶೇಖರ್, ಗೋಪಾಲಯ್ಯ ಉಪಸ್ಥಿತರಿದ್ದರು.

ನಾಯಂಡಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಬಂದ ಮೊದಲ ಟ್ರೈನ್ ಉದ್ಘಾಟನೆ ಬಳಿಕ ಸಂಚಾರ ಆರಂಭಿಸಿತು. ಮಹಿಳಾ ಲೋಕೋಪೈಲೆಟ್ ನಿಂದ ಮೊದಲ ರೈಲಿನ ಸಂಚಾರ ಆರಂಭಗೊಂಡಿತು. ಉದ್ಘಾಟನೆ ಬಳಿಕ ನಾಯಂಡಹಳ್ಳಿ ನಿಲ್ದಾಣದಿಂದ ಕೆಂಗೇರಿವರೆಗೂ ಮೆಟ್ರೋ ಸಂಚಾರಿಸಿತು. ಮೊದಲ ಮೆಟ್ರೋದಲ್ಲಿ ಬಿಎಂಆರ್‍ಸಿಎಲ್ ಸಿಬ್ಬಂದಿ ಸಂಚಾರ ಮಾಡಿದರು. ಇದನ್ನೂ ಓದಿ: ದೇಶದ ವಿವಿಧ ರಾಜ್ಯಗಳ ಮಂಗಳಸೂತ್ರ ವಿನ್ಯಾಸದ ಮಾಹಿತಿ

Share This Article
Leave a Comment

Leave a Reply

Your email address will not be published. Required fields are marked *