ಪತ್ರಕರ್ತರಿಗೆ ರಾಜ್ಯ ಬಜೆಟ್ ನಲ್ಲಿ ಸಿಕ್ಕಿದ್ದು ಏನು?

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯ ಬಜೆಟ್ ಮಂಡನೆಯಲ್ಲಿ ಪತ್ರಕರ್ತರಿಗೆ ವಿಶೇಷ ಸೌಲಭ್ಯಗಳನ್ನು ಪ್ರಕಟಿಸಿದ್ದಾರೆ.

ಪತ್ರಕರ್ತರು ವೃತ್ತಿ ನಿತರ ಕೆಲಸಗಳ ವೇಳೆ ಅಪಘಾತಕ್ಕೆ ಒಳಗಾದರೆ ಇಲ್ಲವೆ ಇನ್ನಿತರ ಅವಘಡಗಳಿಗೆ ತುತ್ತಾಗಿ ಆಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಅವರುಗಳ ಕುಟುಂಬದವರಿಗೆ 5 ಲಕ್ಷ ರೂ. ವರೆಗಿನ ಜೀವ ವಿಮೆ ಖಾತರಿ ನೀಡಲು “ಮಾಧ್ಯಮ ಸಂಜೀವಿನಿ” ಎಂದು ಸಮೂಹ ಜೀವವಿಮೆ ಸೌಲಭ್ಯವನ್ನು ಪತ್ರಕರ್ತರಿಗೆ ಕಲ್ಪಿಸಲಾಗಿದೆ.

ಪತ್ರಕರ್ತರಿಗೆ ನೀಡುತ್ತಿರುವ ರಾಜೀವ್ ಆರೋಗ್ಯ ಯೋಜನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಮೂಲಕ ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸಲಾಗುವುದು.

ಪತ್ರಿಕೆಗಳನ್ನು ಮನೆಮನೆಗೆ ಹಂಚುತ್ತಾ ಅನಿಶ್ಚಿತ ಬದುಕು ಸಾಗಿಸುವ ಪತ್ರಿಕೆ ಹಂಚುವವರ ಕ್ಷೇಮಾಭಿವೈದ್ಧಿಗೆ 2 ಕೋಟಿ ರೂ.ಗಳ “ಕ್ಷೇಮ ನಿಧಿ” ಸ್ಥಾಪಿಸಲಾಗುವುದು. ಬೆಂಗಳೂರಿನಲ್ಲಿ 5 ಕೋಟಿ ರೂ.ಗಳ ವೆಚ್ಚದಲ್ಲಿ ಪತ್ರಕರ್ತರ ಭವನವನ್ನು ನಿರ್ಮಿಸಲಾಗುವುದು.

2018-19ನೇ ಸಾಲಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಒಟ್ಟಾರೆಯಾಗಿ 239 ಕೋಟಿ ರೂ.ಗಳನ್ನು ಒದಗಿಸಲಾಗುವುದು. ಇದನ್ನು ಓದಿ: ಕರ್ನಾಟಕ ಬಜೆಟ್ ಮುಖ್ಯಾಂಶಗಳು: ರೈತರ ಸಾಲ ಮನ್ನಾ

Share This Article
Leave a Comment

Leave a Reply

Your email address will not be published. Required fields are marked *