ಬರ್ತ್‌ಡೇ ದಿನ ಕ್ಲಾಸಿ ಕುರ್ತಾದಲ್ಲಿ ತ್ರಿಷಾ ಮಿಂಚು – ನಟಿ ಧರಿಸಿದ್ದ ಐವರಿ ಸೆಟ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರ!

1 Min Read

ದಕ್ಷಿಣ ಭಾರತದ ಫೇಮಸ್ ನಟಿ ತ್ರಿಷಾ ಕೃಷ್ಣನ್ (Trisha Krishnan) ನಿನ್ನೆ ತಮ್ಮ 43ನೇ ಹುಟ್ಟುಹಬ್ಬವನ್ನು ತಿರುಪತಿ ದೇವಸ್ಥಾನದಲ್ಲಿ ತಿಮ್ಮಪ್ಪನ ದರ್ಶನ ಪಡೆಯುವ ಮೂಲಕ ವಿಶೇಷವಾಗಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅವರು ಧರಿಸಿದ್ದ ಸರಳ ಹಾಗೂ ಸುಂದರವಾದ ಬಿಳಿ ಬಣ್ಣದ ಕುರ್ತಾ ಸೆಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.

12,000 ರೂ. ಐವರಿ ಕುರ್ತಾದ ವಿಶೇಷತೆ ಏನು?
ತಿಮ್ಮಪ್ಪ ದೇವಸ್ಥಾನಕ್ಕೆ (Tirupati Temple) ಭೇಟಿ ನೀಡಿದ ಸಂದರ್ಭದಲ್ಲಿ ತ್ರಿಷಾ ಅವರು ಅಜಾ ಫ್ಯಾಷನ್ಸ್ ಬ್ರ‍್ಯಾಂಡ್‌ನ ಐವರಿ (ದಂತದ ಬಣ್ಣ) ಬಣ್ಣದ ಕುರ್ತಾ (Ivory Suit) ಧರಿಸಿದ್ದರು. ಸುಮಾರು 12,000 ರೂ. ಬೆಲೆಯ ಈ ಉಡುಗೆಯು ಬೇಸಿಗೆಯ ಬಿಸಿಲಿಗೆ ಹೇಳಿ ಮಾಡಿಸಿದಂತಿದೆ.

ಸಂಪೂರ್ಣವಾಗಿ ಕಾಟನ್ ಬಟ್ಟೆಯಿಂದ ತಯಾರಿಸಲಾದ ಈ ಕುರ್ತಾ ವಿ-ನೆಕ್ ವಿನ್ಯಾಸ ಹೊಂದಿದೆ. ಐವರಿ ಬಣ್ಣಕ್ಕೆ ಹೊಂದುವAತೆ ಲೈಟ್ ಕಲರ್‌ಗಳಲ್ಲಿ ಮಾಡಿದ್ದ ಹೂವಿನ ವಿನ್ಯಾಸ ಈ ಬಟ್ಟೆಗೆ ಮತ್ತಷ್ಟು ಮೆರಗು ನೀಡಿತ್ತು. ಈ ಕುರ್ತಾ ಸೆಟ್‌ನಲ್ಲಿದ್ದ ಸ್ಟ್ರೈಟ್ ಪ್ಯಾಂಟ್ ಮತ್ತು ದುಪ್ಪಟ್ಟಾ ಬಟ್ಟೆಗೆ ಪರಿಪೂರ್ಣ ಲುಕ್ ನೀಡಿತ್ತು.

ದರ್ಶನ ಮುಗಿಸಿ ಬರುವಾಗ ತ್ರಿಷಾ ಅವರು ಭುಜದ ಮೇಲೆ ಪವಿತ್ರವಾದ ಕೆಂಪು ವಸ್ತ್ರ ಧರಿಸಿ ದೇವಸ್ಥಾನದ ಆವರಣದಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಅಭಿಮಾನಿಗಳು ಅವರ ಸುತ್ತ ಜಮಾಯಿಸಿದರು. ಭಾನುವಾರ ತಡರಾತ್ರಿಯೇ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದ್ದ ವಿಡಿಯೋವನ್ನು ನಟಿ ಹಂಚಿಕೊಂಡಿದ್ದರು. ಅವರ ಈ ‘ಟೆಂಪಲ್ ಲುಕ್’ ಫೋಟೋಗಳು ಈಗ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

Share This Article