ಮುಂಬೈ: ಚೆನ್ನೈನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಭರ್ಜರಿ ಜಯಗಳಿಸಿ ಚೆನ್ನೈ ಸೂಪರ್ ಕಿಂಗ್ಸ್ (ChChennai Super Kings) ತಂಡವು ಐಪಿಎಲ್ನಲ್ಲಿ (IPL 2026) ಇತಿಹಾಸ ನಿರ್ಮಿಸಿದೆ. ಮುಂಬೈ ವಿರುದ್ಧ 20 ಐಪಿಎಲ್ ಪಂದ್ಯಗಳನ್ನು ಜಯಸಿದ ಮೊದಲ ಫ್ರಾಂಚೈಸಿಯಾಗಿ ಸಿಎಸ್ಪಿ ಹೊರಹೊಮ್ಮಿದೆ.
ಐದು ಬಾರಿ ಚಾಂಪಿಯನ್ ಆಗಿರುವ ಎರಡೂ ಫ್ರಾಂಚೈಸಿಗಳು ಈ ದಾಖಲೆಯನ್ನು ಸಮಾನವಾಗಿ ಹಂಚಿಕೊಂಡಿವೆ. ಮುಂಬೈ 21 ಹಾಗೂ ಸಿಎಸ್ಕೆ 20 ಗೆಲುವುಗಳನ್ನು ಸಾಧಿಸಿವೆ. ನಿನ್ನೆ ನಡೆದ ಪಂದ್ಯದಲ್ಲಿ CSK ಇನ್ನಿಂಗ್ಸ್ನಲ್ಲಿ 11 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿ ಪಾಂಡ್ಯ ಪಡೆ ವಿರುದ್ಧ ಜಯ ಸಾಧಿಸಿತು. ಇದನ್ನೂ ಓದಿ: ಚೆನ್ನೈಗೆ 8 ವಿಕೆಟ್ಗಳ ಭರ್ಜರಿ ಜಯ – ಮುಂಬೈಗೆ ಪ್ಲೇ ಆಫ್ ಹಾದಿ ಬಹುತೇಕ ಬಂದ್!
ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಸಿಎಸ್ಕೆ 11 ಎಸೆತ ಬಾಕಿ ಇರುವಾಗಲೇ ಗುರಿ ತಲುಪಿ ಗೆಲುವು ದಾಖಲಿಸಿತು. ನಾಯಕ ಗಾಯಕ್ವಾಡ್ ಮತ್ತು ಕಾರ್ತಿಕ್ ಶರ್ಮಾ ಅಜೇಯ 98 ರನ್ಗಳ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಹಿಂದಿನ ಪಂದ್ಯದಲ್ಲಿ ಎದುರಾದ ದೊಡ್ಡ ಸೋಲಿನಿಂದ ತಂಡ ಚೇತರಿಸಿಕೊಂಡಿತು.
ಮುಂಬೈ ವಿರುದ್ಧದ ಗೆಲುವಿನೊಂದಿಗೆ ಸಿಎಸ್ಕೆ ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರಿದೆ. ಸೋಲುಗಳಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ ಪಡೆಗೆ ಐಪಿಎಲ್ ಪ್ಲೇ ಆಫ್ ಬಹುತೇಕ ಬಂದ್ ಆಗಿದೆ. ಇದನ್ನೂ ಓದಿ: ಧೋನಿಯಂತೆ 5 ಐಪಿಎಲ್ ಟ್ರೋಫಿ ಗೆಲ್ಲುವುದು ನನ್ನ ಗುರಿ: ಕೆಎಲ್ ರಾಹುಲ್

