ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌; ಉತ್ತರ ಕನ್ನಡದಲ್ಲಿ ಮತ್ತೆ ಪೆಟ್ರೋಲ್‌, ಡೀಸೆಲ್‌ ಕೊರತೆ

1 Min Read

ಕಾರವಾರ: ಮಧ್ಯಪ್ರಾಚ್ಯ ಸಂಘರ್ಷದ ಬಿಸಿ ಮತ್ತೆ ಉತ್ತರ ಕನ್ನಡ (Uttara Kannada) ಜಿಲ್ಲೆಗೂ ತಟ್ಟಿದ್ದು, ಬಂಕ್‌ಗಳಲ್ಲಿ ಪೆಟ್ರೋಲ್, ಡಿಸೇಲ್ ಕೊರತೆ ಎದುರಾಗಿದೆ.

ಪೆಟ್ರೋಲ್, ಡಿಸೇಲ್ ಇಲ್ಲದೇ ಇಂಡಿಯನ್ ಪೆಟ್ರೋಲ್ ಬಂಕ್‌ಗಳು ಒಂದೊಂದಾಗಿ ಬಂದ್ ಆಗುತ್ತಿವೆ. ಜಿಲ್ಲೆಯ ಸಿದ್ದಾಪುರ ನಗರದಲ್ಲಿರುವ ನಿಸರ್ಗ ಇಂಡಿಯನ್ ಪೆಟ್ರೋಲ್ ಬಂಕ್ ಸ್ಟಾಕ್ ಬರದೇ ಬಂದ್ ಆಗಿದೆ. ಕುಮಟಾ-ಸಿದ್ದಾಪುರ ರಾಜ್ಯ ಹೆದ್ದಾರಿ 50ರ ಮಾರ್ಗಕ್ಕೆ ಹೊಂದಿಕೊಂಡಿರುವ ಈ ಬಂಕ್‌ನಲ್ಲಿ ಪ್ರತಿದಿನ ಪೆಟ್ರೋಲ್ 2,000 ಲೀಟರ್‌ ಹಾಗೂ ಡಿಸೇಲ್ 3,000 ಲೀಟರ್‌ ಖರ್ಚಾಗುತ್ತಿತ್ತು. 40 ಸಾವಿರ ಇಂಧನ ಸಂಗ್ರಹಣ ಸಾಮರ್ಥ್ಯವಿದೆ. ಇದನ್ನೂ ಓದಿ: ಸಾರಿಗೆ ನೌಕರರು – ಸರ್ಕಾರದ ನಡುವೆ ತಿಕ್ಕಾಟ; ಮೇ 20ರಿಂದ ರೋಡಿಗಿಳಿಯಲ್ವಾ ಸರ್ಕಾರಿ ಬಸ್?

ಒಂದು ವಾರದಿಂದ ಮುಂಗಡ ಹಣ ಕಟ್ಟಿದ್ದರೂ ಹುಬ್ಬಳ್ಳಿಯಿಂದ ಬರಬೇಕಾದ ಇಂಧನ ಸರಬರಾಜಾಗುತ್ತಿಲ್ಲ. ಇದರಿಂದಾಗಿ ಇಂಡಿಯನ್ ಬಂಕ್‌ಗಳು ಒಂದೊಂದಾಗಿ ಬಂದ್ ಆಗುತ್ತಿವೆ. ಸಿದ್ದಾಪುರ, ಬನವಾಸಿ ಭಾಗದ ಬಂಕ್‌ಗಳು ಬಂದ್ ಆಗಿದ್ದು, ಗ್ರಾಹಕರು ಇಂಧನವಿಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ.

Share This Article