ಚಿಕ್ಕಮಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ (Sringeri Assembly Constituency) ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರೇ ಗೆಲುವು ಸಾಧಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಮರುಮತ ಎಣಿಕೆಯಲ್ಲಿ 2 ಮತ ಹೆಚ್ಚಾಗಿದ್ದು, ರಾಜೇಗೌಡ ಅವರು ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರು ಎಣಿಕೆ ಕಾರ್ಯ ಇಂದು ಐಡಿಎಸ್‌ಜಿ ಕಾಲೇಜಿನಲ್ಲಿ ನಡೆಯಿತು. ಈ ಹಿಂದೆ ಸಾಮಾನ್ಯ ಮತ ಎಣಿಕೆ ಬಳಿಕ 201 ಮತಗಳಿಂದ ಗೆಲುವು ಸಾಧಿಸಿದ್ದ ರಾಜೇಗೌಡ ಅವರು, ಮರು ಮತ ಎಣಿಕೆ ಬಳಿಕ 203 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮರು ಎಣಿಕೆ ಪ್ರಕ್ರಿಯೆ ನಡೆದಿದ್ದು ಹೇಗೆ?
ಮೊದಲಿಗೆ 20 ಟ್ರಂಕ್‌ಗಳಲ್ಲಿ ಭದ್ರಗೊಳಿಸಿದ್ದ 1,822 ಅಂಚೆ ಮತಗಳ ಪೈಕಿ ಅಧಿಕಾರಿಗಳು ಬಂಡಲ್‌ನಂತೆ ಬೇರ್ಪಡಿಸಿದರು. ತಿರಸ್ಕೃತಗೊಂಡ 279 ಮತಗಳನ್ನ ಪ್ರತ್ಯೇಕವಾಗಿ ವಿಂಗಡಿಸಿ, ಉಳಿದ 1,540 ಮತಗಳನ್ನು 25 ಮತಪತ್ರಗಳನ್ನು ಒಂದು ಬಂಡಲ್‌ನಂತೆ ವಿಂಗಡಿಸಿದ್ರು. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆ ನಂಬಲ್ಲ, ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ: ಡಿಕೆಶಿ

ಈ ವೇಳೆ ಕೆಲವು ಟ್ರಂಕ್‌ಗಳು (Trunk) ಜಖಂಗೊಂಡಿರುವುದು ಕಂಡುಬಂದವು. ಸೀಲ್ ಇಲ್ಲದ ಟ್ರಂಕ್ ಕೂಡ ಪತ್ತೆಯಾದ ಹಿನ್ನೆಲೆ ಭಾರೀ ಹೈಡ್ರಾಮಾವೇ ನಡೆಯಿತು. ಕೊನೆಗೆ ಅಂಚೆಮತಗಳ ಟ್ರಂಕ್ ಸೇಫಾಗಿದೆ. ಯಾವುದೇ ಗೊಂದ ಇಲ್ಲವೆಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದ ಬಳಿಕ ಮತ ಎಣಿಕೆಗೆ ಅನುವು ಮಾಡಿಕೊಟ್ಟರು. ಬಳಿಕ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮರು ಎಣಿಕೆ ಪ್ರಕ್ರಿಯೆ ನಡೆಯಿತು. ಇದನ್ನೂ ಓದಿ: ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಎರಡು ಬಾರಿ ಬಂದಿದೆ: ಎಂ.ಬಿ ಪಾಟೀಲ್

ಏನಾಗಿತ್ತು?
2023 ರಲ್ಲಿ 12 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ಸಿನ ಟಿ.ಡಿ ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಕಂಡಿದ್ದರು. 2023ರಲ್ಲಿ ಮತ ಎಣಿಕೆಯ ಸಂದರ್ಭದಲ್ಲಿ ಇಬ್ಬರು ಅಭ್ಯರ್ಥಿಗಳು ಗೈರಾಗಿದ್ದರು. ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡರು ಎಣಿಕೆಯ ಕೇಂದ್ರಕ್ಕೆ ಆಗಮಿಸಿದ್ದರು.
2023 ಚುನಾವಣೆಯಲ್ಲಿ ರಾಜೇಗೌಡರಿಗೆ 201 ಮತಗಳ ಗೆಲುವು ಸಿಕ್ಕಿತ್ತು. 1822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕಾರಗೊಂಡಿದ್ದವು. ಮೊದಲು 279 ಮತಪತ್ರ ಎಣಿಕೆ ಕಾರ್ಯ, ನಂತರ 1540 ಮತಗಳ ಎಣಿಕೆ ಕಾರ್ಯ, 3 ನೋಟಾ ಮತಗಳು ಸೇರಿ ಒಟ್ಟು 1822 ಅಂಚೆ ಮತಗಳು ಬಿದ್ದಿದ್ದವು. ಇದನ್ನೂ ಓದಿ: ಮೇ 14 ರಿಂದ 16 ರ ನಡುವೆ ಭಾರತಕ್ಕೆ ಮುಂಗಾರು ಪ್ರವೇಶ – ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸಾಧ್ಯತೆ

