ಕಾರವಾರ: ಪತ್ನಿಯ (Wife) ಕಿರುಕುಳಕ್ಕೆ ಬೇಸತ್ತು ಪತಿ (Husband) ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ದಾಂಡೇಲಿ (Dandeli) ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕಿಯನ್ನು ರಾಘವೇಂದ್ರ ವಾಡಕರ್ ಎಂದು ಗುರುತಿಸಲಾಗಿದೆ. ಸಾವಿಗೂ ಮುನ್ನ ಆತ ಡೆತ್ ನೋಟ್ ಬರೆದಿಟ್ಟಿದಿಟ್ಟಿದ್ದಾನೆ. ಅದರಲ್ಲಿ ಸಾವಿಗೆ ಪತ್ನಿಯ ಕಿರುಕುಳ ಕಾರಣ ಎಂದು ಉಲ್ಲೇಖಿಸಿದ್ದಾನೆ.
ಕಳೆದ ಮೂರು ವರ್ಷಗಳಿಂದ ಮಲೇಷಿಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದೆ ದಾಂಡೇಲಿಗೆ ಮರಳಿದ್ದ. ಈತ ದಾಂಡೆಲಿಗೆ ಬರುತ್ತಿದ್ದಂತೆ ಇಬ್ಬರು ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದ ಪತ್ನಿ, ನಿನ್ನಜೊತೆ ಸಂಸಾರ ಮಾಡೋಕೆ ಆಗಲ್ಲ ಎಂದು ತಕರಾರು ತೆಗೆದಿದ್ದಳು. ಮಕ್ಕಳಿಗಾಗಿ ಒಟ್ಟಿಗೆ ಸಂಸಾರ ಮಾಡೋಣ ಬಾ ಎಂದು ಕರೆದ್ರೂ ಪತ್ನಿ ಒಪ್ಪಿರಲಿಲ್ಲ. ಇದನ್ನೂ ಓದಿ: ಪತ್ನಿಗೆ ಹಲವರ ಜೊತೆ ಅನೈತಿಕ ಸಂಬಂಧ, ವಿಡಿಯೋ ವೈರಲ್ – 19 ಪುಟ ಡೆತ್ನೋಟ್ ಬರೆದಿಟ್ಟು ಟೆಕ್ಕಿ ಆತ್ಮಹತ್ಯೆ
ಬದಲಿಗೆ ಪತಿಗೆ ಬೇರೆ ಯುವಕರ ಜೊತೆ ಇರುವ ಫೋಟೋಗಳನ್ನ ಕಳಿಸುವುದು, ಮೊಬೈಲ್ ವಾಟ್ಸಾಪ್ನಲ್ಲಿ ಸ್ಟೇಟಸ್ ಹಾಕಿ ಮಾನಸಿಕ ಕಿರುಕುಳ ನೀಡುವುದು ಮಾಡುತ್ತಿದ್ದಳು. ಅಲ್ಲದೇ ನಿನ್ನ ಜೊತೆ ಸಂಸಾರ ಮಾಡಲು ಇಷ್ಟ ಇಲ್ಲ, ಸತ್ತ ಹೋಗು ಎಂದು ಹೇಳಿದ್ದಳು. ಅನೈತಿಕ ಸಂಬಂಧದ ಬಗ್ಗೆಯೂ ಗಂಡನ ಬಳಿ ಓಪನ್ ಆಗಿ ಹೇಳಿಕೊಳ್ಳುತಿದ್ದಳು.
ಅನೈತಿಕ ಸಂಬಂಧ ಬಿಡುವಂತೆ ಪತ್ನಿಗೆ ಬುದ್ದಿವಾದ ಹೇಳಿದ್ದ ರಾಘವೇಂದ್ರ, ಕೈ ಕೊಯ್ದುಕೊಂಡು ಪತ್ನಿಗೆ ವಾಟ್ಸ್ ಅಪ್ ಮಾಡಿದ್ದ. ನೀನು ಸಾಯೋದಾದ್ರೆ ಸಾಯಿ ನನಗೇನೂ ತೊಂದರೆ ಇಲ್ಲ ಎಂದು ಈ ವೇಳೆ ಪತ್ನಿ ಹೇಳಿದ್ದಳಂತೆ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಅರ್ಚಕ

