ಜೋಗ್‌ ಫಾಲ್ಸ್‌ನಲ್ಲಿ ಕುಸಿದು ಬಿದ್ದ ಬಂಡೆ – ಬೆಚ್ಚಿಬಿದ್ದ ಪ್ರವಾಸಿಗರು

1 Min Read

ಶಿವಮೊಗ್ಗ: ವಿಶ್ವ ವಿಖ್ಯಾತ ಜೋಗ್‌ ಫಾಲ್ಸ್‌ನಲ್ಲಿ (Jog Falls) ಬಂಡೆಯೊಂದು ಕುಸಿದು ಬಿದ್ದಿದ್ದು ಭಾರೀ ಶಬ್ದಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ರಾಕೆಟ್ ಫಾಲ್ಸ್ ಭಾಗದಲ್ಲಿ ಬಂಡೆಯ ಒಂದು ಪದರ ಕಳಚಿ ಬಿದ್ದಿದೆ.

ಸುಮಾರು ನೂರು ಅಡಿ ಎತ್ತರದಿಂದ ಬಂಡೆಯ ಪದರ ಕಳಚಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಉಂಟಾದ ಶಬ್ದಕ್ಕೆ ಪ್ರವಾಸಿಗರು ಹಾಗೂ ಸ್ಥಳಿಯರು ಬೆಚ್ಚಿಬಿದ್ದಿದ್ದಾರೆ. ಬಂಡೆ ಪದರ ಬಿದ್ದ ರಭಸಕ್ಕೆ ಕೆಳಗಿರುವ ನೀರು ಕಲಕಿ ಹೋಗಿದೆ. ಇದನ್ನೂ ಓದಿ: NSUI ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ – ಕುವೆಂಪು ವಿವಿ ಕುಲಪತಿ ಕಚೇರಿ ಪೀಠೋಪಕರಣ ಧ್ವಂಸ

ಬೇಸಿಗೆ ಅವಧಿಯಲ್ಲಿ ನದಿಯ ನೀರಿನ ಹರಿವು ಕಡಿಮೆಯಾಗಿದೆ. ಈ ಹಿನ್ನೆಲೆ ಬಿಸಿಲಿನ ತಾಪಕ್ಕೆ ಕಾದು, ಬಂಡೆಯ ಪದರ ಕುಸಿದು ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೂ ಈ ರೀತಿ ಆಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೇ ಜಲಪಾತದ ಬಂಡೆ ಕುಸಿತದ ಬಗ್ಗೆ ತಜ್ಞರು ಭೇಟಿ ನೀಡಿ ಪರಿಶೀಲನೆಗೆ ಒತ್ತಾಯಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ – ಬೆಂಗಳೂರು ನಡುವಿನ ಹಾರಾಟ ನಿಲ್ಲಿಸಿದ ಇಂಡಿಗೋ ವಿಮಾನ

Share This Article