ಅಮೆರಿಕದ ಪಾಸ್‌ಪೋರ್ಟ್‌ಗಳಲ್ಲಿ ಡೊನಾಲ್ಡ್ ಟ್ರಂಪ್ ಚಿತ್ರ

2 Min Read

-ಸೀಮಿತ ಸಂಖ್ಯೆಯಲ್ಲಿ ಮಾತ್ರ ವಿಶೇಷ ಪಾಸ್‌ಪೋರ್ಟ್‌ಗಳು ಲಭ್ಯ

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವಾತಂತ್ರ‍್ಯ ಘೋಷಣೆಯಾಗಿ 250ನೇ ವಾರ್ಷಿಕೋತ್ಸವವನ್ನು ಜುಲೈನಲ್ಲಿ ಆಚರಿಸಲಿದೆ. ಈ ಹಿನ್ನಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಚಿತ್ರವನ್ನು ವಿಶೇಷ ಆವೃತ್ತಿಯ ಅಮೆರಿಕದ ಪಾಸ್‌ಪೋರ್ಟ್‌ಗಳಲ್ಲಿ (America Passport) ಸೇರಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ವಿದೇಶಾಂಗ ಇಲಾಖೆ ಈ ಮಾಹಿತಿಯನ್ನು ದೃಢಪಡಿಸಿದೆ. ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗಾಟ್ ಅವರು ಮಾಹಿತಿ ನೀಡಿದ್ದು, ಜುಲೈನಲ್ಲಿ 250 ವರ್ಷಗಳ ಸ್ವಾತಂತ್ರ‍್ಯೋತ್ಸವವನ್ನು ಆಚರಿಸುವ ಸಂದರ್ಭದಲ್ಲಿ ಸೀಮಿತ ಸಂಖ್ಯೆಯಲ್ಲಿ ವಿಶೇಷ ವಿನ್ಯಾಸದ ಪಾಸ್‌ಪೋರ್ಟ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ – ತ್ರಿಶೂಲ ಹಿಡಿದು ಡಮರು ನುಡಿಸಿದ ಮೋದಿ

ಈ ವಿಶೇಷ ಪಾಸ್‌ಪೋರ್ಟ್‌ಗಳಲ್ಲಿ ಟ್ರಂಪ್ ಅವರ ಅಧಿಕೃತ ಭಾವಚಿತ್ರವನ್ನು ಸ್ವಾತಂತ್ರ‍್ಯ ಘೋಷಣೆ ಪತ್ರದ ಮೇಲೆ ಹಾಕಲಾಗುವುದು. ಅದರ ಕೆಳಗೆ ಅವರ ಸಹಿಯನ್ನು ಚಿನ್ನದ ಬಣ್ಣದಲ್ಲಿ ಮುದ್ರಿಸಲಾಗುವುದು. ಇನ್ನೊಂದು ಪುಟದಲ್ಲಿ ಅಮೆರಿಕದ ಸಂಸ್ಥಾಪಕ ಪಿತಾಮಹರ ಐತಿಹಾಸಿಕ ಚಿತ್ರವನ್ನು ಸಹ ಸೇರಿಸಲಾಗುವುದು ಎಂದಿದ್ದಾರೆ,

ಈ ವಿಶೇಷ ಪಾಸ್‌ಪೋರ್ಟ್‌ಗಳು ಕೇವಲ ವಾಷಿಂಗ್ಟನ್‌ನಲ್ಲಿ ಮಾತ್ರ ಲಭ್ಯವಿರುತ್ತವೆ. ಸೀಮಿತ ಸಂಖ್ಯೆಯಲ್ಲಿ ಮಾತ್ರ ಬಿಡುಗಡೆಯಾಗುವುದರಿಂದ, ಸ್ಟಾಕ್ ಇರುವವರೆಗೆ ಮಾತ್ರ ದೊರೆಯುತ್ತವೆ. ಇದಕ್ಕಾಗಿ ಹೆಚ್ಚುವರಿ ಶುಲ್ಕ ಇರುವುದಿಲ್ಲ, ಸಾಮಾನ್ಯ ಅರ್ಜಿದಾರರು ಈ ವಿಶೇಷ ಆವೃತ್ತಿಯನ್ನು ನಿರಾಕರಿಸಬಹುದೇ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಪ್ರಸ್ತುತ ಅಮೆರಿಕದ ಪಾಸ್‌ಪೋರ್ಟ್ಗಳಲ್ಲಿ ಚಂದ್ರನ ಮೇಲಿನ ಇಳಿಯುವಿಕೆ, ಸ್ವಾತಂತ್ರ‍್ಯ ಪ್ರತಿಮೆಯಂತಹ ಐತಿಹಾಸಿಕ ದೃಶ್ಯಗಳು ಇವೆ. ಆದರೆ ಇದೇ ಮೊದಲ ಬಾರಿಗೆ ಅಧ್ಯಕ್ಷರ ಚಿತ್ರವನ್ನು ಪಾಸ್‌ಪೋರ್ಟ್ನಲ್ಲಿ ಸೇರಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ. ಟ್ರಂಪ್ ಕಳೆದ ವರ್ಷ ಅಧಿಕಾರಕ್ಕೆ ಮರಳಿದ ನಂತರ ಸರ್ಕಾರಿ ಸಂಸ್ಥೆಗಳಲ್ಲಿ ತಮ್ಮ ಹೆಸರು ಮತ್ತು ಚಿತ್ರವನ್ನು ಸೇರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕೆನ್ನೆಡಿ ಸೆಂಟರ್, ಅಮೆರಿಕದ ಶಾಂತಿ ಸಂಸ್ಥೆಯ ಹೆಸರು ಬದಲಾವಣೆ, ಸರ್ಕಾರಿ ಕಟ್ಟಡಗಳಲ್ಲಿ ಬ್ಯಾನರ್‌ಗಳು ಮತ್ತು ಡಾಲರ್ ನೋಟುಗಳಲ್ಲಿ ತಮ್ಮ ಸಹಿಯನ್ನು ಸಹ ಸೇರಿಸಿದ್ದಾರೆ.ಇದನ್ನೂ ಓದಿ: ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Share This Article