ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ – ತ್ರಿಶೂಲ ಹಿಡಿದು ಡಮರು ನುಡಿಸಿದ ಮೋದಿ

1 Min Read

ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಎರಡು ದಿನಗಳ ಭೇಟಿ ಕೈಗೊಂಡಿದ್ದು ಇಂದು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯ ಕೈಗೊಂಡು ಬಳಿಕ ತ್ರಿಶೂಲ ಹಿಡಿದು ಡಮರು ನುಡಿಸಿದರು.

ಇದಕ್ಕೂ ಮೊದಲು ಅವರು ರೋಡ್‌ಶೋ (Varanasi Road show) ನಡೆಸಿದರು. ಲೋಕೋಮೋಟಿವ್ ವರ್ಕ್ಸ್‌ ನಿಂದ ಆರಂಭಗೊಂಡು ರೋಡ್‌ ಶೋ ಲಹರ್ತಾರಾ, ಕಚಹರಿ, ಅಂಬೇಡ್ಕರ್ ಚೌರಾಹಾ, ಚೌಕಾಘಾಟ್, ತೆಲಿಯಾಬಾಗ್, ಲಹುರಾಬೀರ್ ಮತ್ತು ಮೈದಾಗಿನ್ ಮೂಲಕ ಸಾಗುತ್ತಾ ಅಂತಿಮವಾಗಿ ಕಾಶಿ ವಿಶ್ವನಾಥ ದೇಗುಲದಲ್ಲಿ (Kashi Vishwanath Temple) ಕೊನೆಗೊಂಡಿತು. ಇದನ್ನೂ ಓದಿ: ಗಂಗಾ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಭೇಟಿಯ ಸಂದರ್ಭದಲ್ಲಿ ವಾರಾಣಸಿ ಕ್ಷೇತ್ರದ ನಿವಾಸಿಗಳು ಮತ್ತು ಪಕ್ಷದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಪ್ರಧಾನಮಂತ್ರಿಯನ್ನ ಸ್ವಾಗತಿಸಿದರು. ಹರ ಹರ ಮಹಾದೇವ್ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ, ಮೋದಿ ಅವರಿಗೆ ನಮಸ್ಕರಿಸುತ್ತಾ ಸ್ವಾಗತಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಮತ್ತೆ ಶುರುವಾಯ್ತು ಸಚಿವ ಸ್ಥಾನದ ಸಮರ – ಮೇ 6ಕ್ಕೆ ದೆಹಲಿಗೆ ಶಾಸಕರ ದಂಡು!

ಸುಮಾರು 14 ಕಿಮೀ ಮಾರ್ಗದಲ್ಲಿ ಹಲವು ಸ್ವಾಗತ ಕೇಂದ್ರಗಳನ್ನ ನಿರ್ಮಿಸಲಾಗಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರು ಗುಲಾಬಿ ಹೂವುಗಳ ಮಳೆಯೊಂದಿಗೆ, ಡೊಳ್ಳು-ನಾದ ಮತ್ತು ಶಂಖನಾದಗಳೊಂದಿಗೆ ಸ್ವಾಗತಿಸಿದರು. ಈ ರೋಡ್‌ಶೋ ನಗರದಲ್ಲಿ ನಡೆದ ಅತಿ ದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ನಾಯಕರು ಹೇಳಿದರು. ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಅವರಿಗೆ ಡಮರು ನುಡಿಸುವ ಮೂಲಕ ಸ್ವಾಗತ ದೊರೆಯಿತು.

\

Share This Article