ಶಿವಮೊಗ್ಗ: ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಬಿಜೆಪಿ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿಯ ಹಿರೇಕೆರೂರ ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ನೇಣಿಗೆ ಶರಣಾದ ಮಹಿಳೆ. ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಕಳೆದ ಭಾನುವಾರ ನಡೆದ ಘಟನೆ.
ಮಂಜುಳಾ ಸಾವಿಗೆ ಪತಿಯ ಕಿರುಕುಳ ಕಾರಣ ಎಂದು ಆಕೆಯ ಕುಟುಂಬಸ್ಥರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡ ಹಾಗೂ ಸೊರಬ ಪುರಸಭೆ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾರ್ಡ್ವೇರ್ ಅಂಗಡಿ ಜೊತೆ ರಾಜಕೀಯದಲ್ಲಿ ಪ್ರಭು ಮೇಸ್ತ್ರಿ ಗುರುತಿಸಿಕೊಂಡಿದ್ದ.
2024ರಲ್ಲಿ ಮಂಜುಳಾರನ್ನ 2ನೇ ಮದ್ವೆಯಾಗಿದ್ದ. 2ನೇ ಮದುವೆ ನಂತರವೂ ಮತ್ತೊಂದು ಮಹಿಳೆ ಜೊತೆ ಒಡನಾಟ ಹೊಂದಿದ್ದ. ರಾಜೀ ಪಂಚಾಯತಿ ನಂತರವೂ ಒಡನಾಟ ಮುಂದುವರೆಸಿದ್ದ. ಇದಕ್ಕೆ ಪತ್ನಿ ಮಂಜುಳಾಗೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪತಿ ಪ್ರಭು ಮೇಸ್ತ್ರಿ ಕಿರುಕುಳ ತಾಳಲಾರದೇ ಮಂಜುಳಾ ಮೃತಪಟ್ಟಿದ್ದಾಳೆ. ಈ ಸಂಬಂಧ ಪ್ರಭು ಮೇಸ್ತ್ರಿ ವಿರುದ್ಧ ಮಂಜುಳಾ ತಾಯಿ ದೂರು ನೀಡಿದ್ದರು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಸ್ತುತ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ.

