ಬೆಂಗಳೂರು: ಸಿಎಂ-ಡಿಸಿಎಂ ಕುರ್ಚಿ ಕಿತ್ತಾಟದ ನಡುವೆ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (D.K.Shivakumar) ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ.
ಇಂದು ಇಬ್ಬರು ಒಂದೇ ಕಾರ್ನಲ್ಲಿ ವಿಧಾನಸೌಧಕ್ಕೆ ಆಗಮಿಸುವ ಮೂಲಕ ಅಚ್ಚರಿ ನಡೆ ಅನುಸರಿಸಿದರು. ಇದನ್ನೂ ಓದಿ: ಮೇ 15ಕ್ಕೆ ಡಿಕೆಶಿ ಸಿಎಂ ಆಗೋದು ಫಿಕ್ಸ್, ಇದೇ ನನ್ನ ಅಂತಿಮ ದಿನಾಂಕ: ಇಕ್ಬಾಲ್ ಹುಸೇನ್
ಲೋಕಭವನ ಕಾರ್ಯಕ್ರಮದಲ್ಲಿ ಸಿಎಂ-ಡಿಸಿಎಂ ತೆರಳಿದ್ರು. ಕಾರ್ಯಕ್ರಮ ಮುಗಿದ ಕೂಡಲೇ ಸಿಎಂ ಸಿದ್ದರಾಮಯ್ಯ ಕಾರ್ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧಕ್ಕೆ ಆಗಮಿಸಿದರು. ಅಷ್ಟೇ ಅಲ್ಲ, ಕೆಲ ಕಾಲ ಸಿಎಂ ಕಚೇರಿಯಲ್ಲಿ ಕೂತು ಚರ್ಚೆ ನಡೆಸಿದರು. ಸಿಎಂ-ಡಿಸಿಎಂ ಈ ನಡೆ ಅಚ್ಚರಿಗೆ ಕಾರಣವಾಯ್ತು.

