ಹವಾಮಾನ ವೈಪರಿತ್ಯ – ಆಕಾಶದಲ್ಲೇ 40 ನಿಮಿಷ ಗಿರಕಿ ಹೊಡೆದ Fly 91 ವಿಮಾನ

1 Min Read

ಹುಬ್ಬಳ್ಳಿ: ಪ್ಲೈ 91 (Fly 91) ವಿಮಾನಕ್ಕೆ ಮತ್ತೆ ಹುಬ್ಬಳ್ಳಿಯಲ್ಲಿ (Hubballi) ಲ್ಯಾಂಡಿಂಗ್ ಸಮಸ್ಯೆ ಎದುರಾಗಿದೆ. ಹವಾಮಾನ ವೈಪರಿತ್ಯ ಹಿನ್ನೆಲೆಯಲ್ಲಿ ಆಗಸದಲ್ಲಿಯೇ ಹಲವು ಸುತ್ತು ಹೊಡೆದು 40 ನಿಮಿಷ ತಡವಾಗಿ ವಿಮಾನ ಲ್ಯಾಂಡ್‌ ಆಗಿದೆ.

ಶನಿವಾರ (ಏ.25) ಹೈದ್ರಾಬಾದ್‌ನಿಂದ (Hyderabad) ಹುಬ್ಬಳ್ಳಿಗೆ ಆಗಮಿಸಿದ್ದ ಪ್ಲೈ 91 ಸಂಸ್ಥೆಯ ಐಸಿ 3401 ವಿಮಾನಕ್ಕೆ ಲ್ಯಾಂಡಿಂಗ್ ಸಮಸ್ಯೆ ಎದುರಾಗಿತ್ತು. ಮಧ್ಯಾಹ್ನ 3:13ಕ್ಕೆ ಹೈದರಾಬಾದ್‌ ಬಿಟ್ಟಿದ್ದ ವಿಮಾನ ಸಂಜೆ 4:30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಆಕಾಶದಲ್ಲಿ ಹಲವು ಸುತ್ತು ಗಿರಕಿ ಹೊಡೆದು 5:09 ಗಂಟೆಗೆ ಲ್ಯಾಂಡ್ ಆಗಿದೆ. ಇದನ್ನೂ ಓದಿ: ಬೆಂಗಳೂರಿಂದ ಹುಬ್ಬಳ್ಳಿಗೆ ಬಂದ ಫ್ಲೈ-91 ವಿಮಾನದಲ್ಲಿ ಮತ್ತೆ ಲ್ಯಾಂಡಿಂಗ್ ಸಮಸ್ಯೆ; 2 ಗಂಟೆ ಆಗಸದಲ್ಲೇ ಸುತ್ತಾಟ!

ಬೆಳಗಾವಿ, ಬೈಲಹೊಂಗಲ ಸೇರಿದಂತೆ ಅನೇಕ ಕಡೆ ಆಗಸದಲ್ಲಿ ವಿಮಾನ ಸುತ್ತು ಹೊಡೆದಿದೆ. ಕಳೆದ ವಾರ ಕೂಡಾ Fly 91 ವಿಮಾನ ಎರಡು ಬಾರಿ ಲ್ಯಾಂಡಿಂಗ್ ಸಮಸ್ಯೆ ಎದುರಿಸಿತ್ತು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ತಪ್ಪಿತು ದುರಂತ – 4 ಗಂಟೆ ಆಗಸದಲ್ಲೇ ಫ್ಲೈಟ್‌ ಸುತ್ತಾಟ – ಆತಂಕದಲ್ಲಿ ಪ್ರಯಾಣಿಕರ ಕಣ್ಣೀರು

Share This Article