ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು

1 Min Read

ಬೆಂಗಳೂರು: ವರನಟ ಡಾಕ್ಟರ್ ರಾಜ್‌ಕುಮಾರ್ (Dr.Rajkumar) ಸಮಾಧಿ ಸ್ಥಳದ ಬಗ್ಗೆ ಚಕಾರ ಎತ್ತಿದ್ದ ನಟ ಚೇತನ್ (Chetan Kumar Ahimsa) ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ‌. ಡಾಕ್ಟರ್ ರಾಜ್‌ಕುಮಾರ್ ಸೇನೆಯಿಂದ ದೂರು ನೀಡಲಾಗಿದೆ.

- Advertisement -

ಡಾಕ್ಟರ್ ರಾಜ್‌ಕುಮಾರ್ ಹುಟ್ಟಿದ ದಿನದಂದು ಅವರ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿನಾ? 21ನೇ ಶತಮಾನದಲ್ಲಿ ಪ್ರಮುಖ ಹೋರಾಟವೇ ಭೂಮಿಯಾಗಿದೆ. ಸರ್ಕಾರವೂ ಅದನ್ನ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಉಪಯೋಗಕ್ಕೆ ಹಂಚಬೇಕು. ಮತಗಳ ಲಾಭದ ಉದ್ದೇಶದಿಂದ ಹಂಚಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್

- Advertisement -

- Advertisement -

ನಟ ಚೇತನ್ ನಡೆಯ ವಿರುದ್ಧ ಕೇರಳದ ರಾಜ್‌ಕುಮಾರ್ ಅಭಿಮಾನಿಗಳು ರಾಜಕುಮಾರ್ ಸೇನೆಯಿಂದ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಟ ಚೇತನ್ ಅಹಿಂಸಾ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ್ದಾರೆ. ರಾಜ್‌ಕುಮಾರ್ ಅಭಿಮಾನಿಗಳಿಗೆ ಅವಮಾನ ಮಾಡಿದ್ದಾರೆ. ನಮಗೆ ನೋವಾಗಿದ್ದು, ನಟನಿಂದ ಸಾರ್ವಜನಿಕವಾಗಿ ಕ್ಷಮೆ ಕೇಳಿಸುವಂತೆ ಆಗ್ರಹಿಸಿದ್ದಾರೆ‌.

- Advertisement -

Share This Article