ನವದೆಹಲಿ: ಭಾರತ (India) ಮತ್ತು ಅನಿವಾಸಿ ಭಾರತೀಯರ (NRI) ಬಗ್ಗೆ ಬಾಯಿ ಬಂದಂತೆ ವಿವಾದಾತ್ಮಕ ಪೋಸ್ಟ್ ಒಂದನ್ನು ಡೊನಾಲ್ಡ್ ಟ್ರಂಪ್ (Donald Trump) ಹಂಚಿಕೊಂಡ ನಂತರ ಆಗಿರುವ ರಾಜತಾಂತ್ರಿಕ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ (USA) ಈಗ ಡ್ಯಾಮೇಜ್ ಕಂಟ್ರೋಲ್ಗೆ ಇಳಿದಿದೆ.

ಈ ಹೇಳಿಕೆಗೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಭಾರತವು ಅತ್ಯುತ್ತಮ ದೇಶ ಮತ್ತು ಅಲ್ಲಿ ನನ್ನ ಅತ್ಯಂತ ಆಪ್ತ ಸ್ನೇಹಿತ (ಪ್ರಧಾನಿ ಮೋದಿ) ಅಧಿಕಾರದಲ್ಲಿದ್ದಾರೆ ಎಂದು ಟ್ರಂಪ್ ಹೊಗಳಿದ್ದಾರೆ ಎಂದು ತಿಳಿಸಿದೆ.

ಟ್ರಂಪ್ ಅವರು ಪ್ರಧಾನಿ ಮೋದಿಯನ್ನು (Narenndra Modi) “ಗೆಟ್ಸ್ ಥಿಂಗ್ಸ್ ಡನ್” (ಕೆಲಸ ಮಾಡುವ ವ್ಯಕ್ತಿ) ಎಂದು ಹೊಗಳಿದ್ದಾರೆ ಮತ್ತು ಭಾರತ-ಅಮೆರಿಕ ಸಂಬಂಧವು ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ ಎಂದು ಹೇಳಿದೆ. ಇದನ್ನೂ ಓದಿ: ಭಾರತ, ಚೀನಾ ನರಕದ ಕೂಪಗಳು| ಲ್ಯಾಪ್ಟಾಪ್ ಹೊಂದಿರುವ ದರೋಡೆಕೋರರು: ಟ್ರಂಪ್ ಕೆಂಡಾಮಂಡಲ

Our response to media queries regarding a social media post ⬇️
🔗 https://t.co/m9qhUcH9XP pic.twitter.com/bJJHid8g3i
— Randhir Jaiswal (@MEAIndia) April 23, 2026

ರಾತ್ರಿ ವಿದೇಶಾಂಗ ಇಲಾಖೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, ನಾವು ಆ ಕಾಮೆಂಟ್ಗಳನ್ನು ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ಅಮೆರಿಕ ರಾಯಭಾರ ಕಚೇರಿ ನೀಡಿದ ಹೇಳಿಕೆಯನ್ನು ನೋಡಿದ್ದೇವೆ. ಈ ಹೇಳಿಕೆಗಳು ಸ್ಪಷ್ಟವಾಗಿ ಮಾಹಿತಿರಹಿತ, ಅನುಚಿತ ಮತ್ತು ಕಳಪೆ ಅಭಿರುಚಿಯಿಂದ ಕೂಡಿವೆ. ಅವು ಖಂಡಿತವಾಗಿಯೂ ಪರಸ್ಪರ ಗೌರವ ಮತ್ತು ಹಂಚಿಕೆಯ ಹಿತಾಸಕ್ತಿಗಳನ್ನು ಆಧರಿಸಿದ ಭಾರತ-ಅಮೆರಿಕ ಸಂಬಂಧದ ವಾಸ್ತವತೆಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: Kissing My Ass – ಸೌದಿ ರಾಜ ಎಂಬಿಎಸ್ಗೆ ಟ್ರಂಪ್ ವ್ಯಂಗ್ಯ
ಟ್ರಂಪ್ ಅವರ ಹೆಸರನ್ನು ನೇರವಾಗಿ ಉಲ್ಲೇಖಿಸದೇ ಅಥವಾ ಅವರ ಹೇಳಿಕೆಯನ್ನು ಟೀಕಿಸದೆ ಭಾರತವು ಈ ವಿವಾದದಿಂದ ದೂರವಿರಲು ಪ್ರಯತ್ನಿಸಿದೆ.
ಡೊನಾಲ್ಡ್ ಟ್ರಂಪ್ ಪ್ರತಿ ಎರಡು ಗಂಟೆಗೊಮ್ಮೆ ಏನನ್ನಾದರೂ ಪೋಸ್ಟ್ ಮಾಡುತ್ತಿರುತ್ತಾರೆ. ನಾವು ಪ್ರತಿಯೊಂದಕ್ಕೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ ಮಾಧ್ಯಮವೊಂದು ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತದ ಮೇಲೆ ಟ್ರಂಪ್ಗೆ ಸಿಟ್ಯಾಕೆ?
ಡೊನಾಲ್ಡ್ ಟ್ರಂಪ್ ಈ ಹಿಂದೆ ಭಾರತದ ಆರ್ಥಿಕತೆಯನ್ನು ಡೆಡ್ ಎಕಾನಮಿ ಎಂದು ಕರೆದಿದ್ದರು. ಟ್ರಂಪ್ ಬೇರೆ ದೇಶಗಳನ್ನು ನಾಯಕರ ಬಗ್ಗೆ ಬಹಿರಂಗವಾಗಿಯೇ ಕೇವಲವಾಗಿ ಮಾತನಾಡುತ್ತಾರೆ. ಈ ಹಿಂದೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಟ್ರಂಪ್ ಶ್ವೇತ ಭವನದಲ್ಲೇ ಅವಮಾನ ಮಾಡಿ ಕಳುಹಿಸಿದ್ದರು.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಈ ವಿಷಯದಲ್ಲಿ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿವೆ ಮತ್ತು ಇದು 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ ಎಂದು ಟೀಕಿಸಿವೆ.

