– ಹೊರ್ಮುಜ್‌ನಿಂದ ಭಾರತಕ್ಕೆ ತಲುಪಿದ 10ನೇ ಹಡಗು

ಮುಂಬೈ: ಅಮೆರಿಕ ಹಾಗೂ ಇರಾನ್ ಯುದ್ಧದ ನಡುವೆ ಹೊರ್ಮುಜ್ ದಾಟಿದ್ದ ಭಾರತೀಯ ಧ್ವಜವಿದ್ದ `ದೇಶ್ ಗರಿಮಾ’ (Desh Garima) ಇಂದು (ಏ.22) ಮುಂಬೈ (Mumbai) ತಲುಪಿದೆ.

ಅಮೆರಿಕ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿದ್ದ `ದೇಶ್ ಗರಿಮಾ’ ಹಡಗು ಇಂದು ಮುಂಬೈ ಕರಾವಳಿ ತಲುಪಿದೆ. ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದ ಬಳಿಕ ಭಾರತಕ್ಕೆ ಆಗಮಿಸುತ್ತಿರುವ 10ನೇ ಹಡಗು ಇದಾಗಿದ್ದು, ಕಚ್ಚಾ ತೈಲವನ್ನು ಹೊತ್ತು ತಂದಿದೆ. ಇದನ್ನೂ ಓದಿ: ಭಾರತಕ್ಕೆ ಬರುತ್ತಿದ್ದ ಹಡಗನ್ನು ವಶಕ್ಕೆ ಪಡೆದ ಐಆರ್‌ಜಿಸಿ


ಏ.18ರಂದು ಹೊರ್ಮುಜ್ ಜಲಸಂಧಿಯಿಂದ ನಿರ್ಗಮಿಸಿದ್ದ ಈ ದೇಶ್ ಗರಿಮಾ ಹಡಗು ಸುಮಾರು 97,000 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತು ತಂದಿದೆ. ಭಾರತದ ಧ್ವಜವಿರುವ ಈ ಟ್ಯಾಂಕರ್‌ನಲ್ಲಿ 31 ಭಾರತೀಯ ಸಿಬ್ಬಂದಿಯಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಅಮೆರಿಕ-ಇರಾನ್ ಮಧ್ಯೆ 2ನೇ ಸುತ್ತಿನ ಮಾತುಕತೆ ಮುಂದೂಡಲಾಗಿದೆ. ಇದರ ಮಧ್ಯೆ, ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಉದ್ವಿಗ್ನತೆ ತಲೆದೋರಿದೆ. ಮೂರು ಹಡಗುಗಳ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ದಾಳಿ ನಡೆಸಿದ್ದು, ಇದರಲ್ಲಿ ಎರಡು ಹಡಗುಗಳನ್ನು ಸೀಜ್ ಮಾಡಲಾಗಿದೆ. ಇದರಲ್ಲಿ ಭಾರತೀಯ ಹಡಗು ಕೂಡ ಸೇರಿದೆ ಎನ್ನಲಾಗಿದೆ. ಇರಾನ್ ಐಆರ್‌ಜಿಸಿ ನಡೆಸಿರೋ ದಾಳಿಯಲ್ಲಿ ಹಡಗಿಗೆ ಅಷ್ಟೇನೂ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.ಇದನ್ನೂ ಓದಿ: Ceasefire | ಪಾಕ್ ಮನವಿ ಮೇರೆಗೆ ಅಮೆರಿಕ - ಇರಾನ್ ಕದನ ವಿರಾಮ ವಿಸ್ತರಣೆ: ಟ್ರಂಪ್

