ಸಿದ್ದರಾಮಯ್ಯ ಸೇತುವೆ ಬಳಿ ಈಜಲು ತೆರಳಿದ್ದ ಮೂವರಲ್ಲಿ ಓರ್ವ ನಾಪತ್ತೆ – ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ

1 Min Read

ಚಿಕ್ಕಮಗಳೂರು: ಎನ್‌ಆರ್‌ ಪುರದ (NR Pura) ಸಿದ್ದರಾಮಯ್ಯ ಸೇತುವೆ (Siddaramaiah Bridge) ಬಳಿ ಈಜಲು ತೆರಳಿದ್ದ ಮೂವರಲ್ಲಿ ಓರ್ವ ನಾಪತ್ತೆಯಾಗಿದ್ದು, ನೀರಿನಲ್ಲಿ ಮುಳುಗಿ ಸಾವನಪ್ಪಿದ ಶಂಕೆ ವ್ಯಕ್ತವಾಗಿದೆ.

- Advertisement -

ಸಿದ್ದರಾಮಯ್ಯ ಸೇತುವೆ ಕೆಳಭಾಗದ ಭದ್ರಾ ನದಿಯ ಹಿನ್ನೀರಿನಲ್ಲಿ ಎನ್.ಆರ್.ಪುರದ ಸಿಗುವಾನಿ ಗ್ರಾಮದ ಮೂವರು ಯುವಕರು ಈಜಲು ತೆರಳಿದ್ದರು. ಇಬ್ಬರು ಮೇಲೆ ಬಂದರೂ ಮತ್ತೋರ್ವ ಮಾತ್ರ ನಾಪತ್ತೆಯಾಗಿದ್ದು, ಆತನ ಸುಳಿವು ಸಿಕ್ಕಿಲ್ಲ. ಆತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರು ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ತಂಡಗಳು ಶವಕ್ಕಾಗಿ ಹುಡುಕಾಟ ನಡೆಸುತ್ತಿವೆ. ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯರು ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಡುಕೋಣ ದಾಳಿಗೆ ಯುವಕ ಬಲಿ – ಮುಗಿಲುಮುಟ್ಟಿದ ತಾಯಿಯ ಆಕ್ರಂದನ

- Advertisement -

- Advertisement -

ಭದ್ರಾ ನದಿಗೆ ಅಡ್ಡಲಾಗಿ ಸಿದ್ದರಾಮಯ್ಯ ಸೇತುವೆ ಕಟ್ಟಲಾಗಿದೆ. ಕಳೆದ ಭಾನುವಾರವಷ್ಟೆ ಸಿಎಂ ಸಿದ್ದರಾಮಯ್ಯ ಅವರು ಈ ಸೇತುವೆ ಉದ್ಘಾಟಿಸಿದ್ದರು. ಇದನ್ನೂ ಓದಿ: ಜೋಕಾಲಿ ಹಾಕಿದ್ದ ಸೀರೆ ಕೊರಳಿಗೆ ಸುತ್ತಿಕೊಂಡು 10 ವರ್ಷದ ಬಾಲಕಿ ಸಾವು

- Advertisement -

Share This Article