ಮಹಿಳಾ ಸಬಲೀಕರಣ ಅಲ್ಲ, ಭಾರತದ ಚುನಾವಣಾ ನಕ್ಷೆ ಬದಲಿಸುವ ಬಿಲ್: ರಾಹುಲ್ ಗಾಂಧಿ ಆರೋಪ

2 Min Read

– ಓಬಿಸಿಗಳ ಹಕ್ಕು ಕಸಿಯಲು ಕೇಂದ್ರ ಸರ್ಕಾರದ ಯತ್ನ

ನವದೆಹಲಿ: ಮೊದಲ ಸತ್ಯವೆಂದರೆ ಇದು ಮಹಿಳಾ ಮೀಸಲಾತಿ ಮಸೂದೆಯಲ್ಲ. ಇದಕ್ಕೂ ಮಹಿಳಾ ಸಬಲೀಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದು ಭಾರತದ ಚುನಾವಣಾ ನಕ್ಷೆಯನ್ನ (Electoral Map) ಬದಲಾಯಿಸುವ ಪ್ರಯತ್ನವಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಗುಡುಗಿದರು.

ಲೋಕಸಭೆಯಲ್ಲಿಂದು ಮಹಿಳಾ ಮೀಸಲಾತಿ ಮಸೂದೆ ಕುರಿತ ಚರ್ಚೆ ವೇಳೆ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಮಸೂದೆ ಜಾರಿಗೆ ತರುತ್ತಿಲ್ಲ ಎಂಬ ರಾಹುಲ್‌ ಗಾಂಧಿ ಆರೋಪ ಲೋಕಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು. ಇದನ್ನೂ ಓದಿ: ರಾಜ್ಯಸಭೆಯ ಉಪಾಧ್ಯಕ್ಷರಾಗಿ ಹರಿವಂಶ್ ಸತತ 3ನೇ ಬಾರಿಗೆ ಅವಿರೋಧ ಪುನರಾಯ್ಕೆ

ಮಹಿಳಾ ಮೀಸಲಾತಿ ಬಿಲ್‌ಗೆ (Women’s Quota Bill) ತೀವ್ರ ವಿರೋಧ ವ್ಯಕ್ತಪಡಿಸಿದ ರಾಗಾ, ಸತ್ಯ ಎನ್ನುವುದು ಕತ್ತಲಲ್ಲಿ ಇರುತ್ತದೆ. ಕತ್ತಲಲ್ಲಿ ಹೋಗುವ ಧೈರ್ಯ ತೋರದಿದ್ದರೆ ಸತ್ಯ ಅರ್ಥವಾಗುವುದಿಲ್ಲ. ಸತ್ಯದ ಪರವಾಗಿ ಹೋರಾಟ ಮಾಡಲು ಸಾಧ್ಯವಿಲ್ಲ, ನಾವು ಆ ಕತ್ತಲಲ್ಲಿ ಹೋಗುವ ಧೈರ್ಯ ಮಾಡಬೇಕು, ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಸತ್ಯ ಕೆಲವೊಮ್ಮೆ ನೋವಿಂದ ಕೂಡಿರುತ್ತದೆ ಅದಕ್ಕೆ ಹೆದರಿಕೊಳ್ಳಬಾರದು. ಲೋಕಸಭೆಯಲ್ಲಿ ಮಂಡಿಸುರುವ ಬಿಲ್ ಕೂಡ ಹಾಗೇ. ಇದು ಮಹಿಳೆಯರ ಪರವಾದ ಬಿಲ್ ಅಲ್ಲ. ೨೦೨೩ ರಲ್ಲೇ ಮಹಿಳಾ ಮೀಸಲಾತಿ ಬಿಲ್ ಪಾಸಾಗಿದೆ. ಇದು ಭಾರತದ ಚುನಾವಣಾ ನಕ್ಷೆಯನ್ನ ಬದಲಾಯಿಸುವ ಪ್ರಯತ್ನವಾಗಿದೆ. ನೀವು ಉಳಿದ ಬಿಲ್‌ ವಾಪಸ್‌ ಪಡೆದು ಮಹಿಳಾ ಮೀಸಲಾತಿ ಬಿಲ್‌ ಮಾತ್ರವೇ ಮಂಡಿಸಿದ್ರೆ ವಿಪಕ್ಷಗಳಾಗಿ ನಾವು ಒಂದು ಕ್ಷಣವೂ ಯೋಚಿಸದೇ ಬೆಂಬಲ ನೀಡುತ್ತೇವೆ ಎಂದು ಅಬ್ಬರಿಸಿದರು.

ಓಬಿಸಿಗಳ ಹಕ್ಕು ಕಸಿಯುವ ಪ್ರಯತ್ನ
ಈಗ ಮಂಡಿಸಿರುವ ಮಹಿಳಾ ಮೀಸಲಾತಿ ಬಿಲ್‌, ಓಬಿಸಿ, ದಲಿತ, ಅಲ್ಪ ಸಂಖ್ಯಾತರು ಹಾಗೂ ಮಹಿಳೆಯರನ್ನು ಮಗಿಸುವ ಪ್ರಯತ್ನವಾಗಿದೆ. ದಲಿತರು ಓಬಿಸಿಯಿಂದ ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನವಾಗಿದೆ. ಅಮಿತ್‌ ಶಾ ಜನಗಣತಿ ಶುರುವಾಗಿದೆ, ಮನೆಗಳಿಗೆ ಜಾತಿಯಿಲ್ಲ ಅಂತ ಹೇಳಿದ್ರು. ಜಾತಿ ಜನಗಣತಿಯಿಂದ ಮುಂದಿನ 10-15 ವರ್ಷ ಏನು ಮಾಡಲು ಸಾಧ್ಯವಾಗದಂತೆ ಮಾಡುವುದು ಇದರ ಉದ್ದೇಶವಾಗಿದೆ. ಅಸ್ಸಾಂ ಕಾಶ್ಮೀರದಲ್ಲಿ ಈಗಾಗಲೇ ರಾಜಕೀಯ ನಕ್ಷೆ ಬದಲಿಸುವ ಕೆಲಸ ಆಗಿದೆ. ಈಗ ದೇಶಾದ್ಯಂತ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾನು ತುಂಬು ಗರ್ಭಿಣಿ: ಜಾಮೀನಿಗೆ ಕೋರ್ಟ್‌ ಮೊರೆ ಹೋದ ಟಿಸಿಎಸ್‌ ‘ಮತಾಂತರ’ ಆರೋಪಿ ನಿದಾ ಖಾನ್‌

ಭಾರತದ ನಕ್ಷೆ ಬದಲಿಸಲು ನಾವು ಬಿಡುವುದಿಲ್ಲ. ಓಬಿಸಿ ದಲಿತರ ಹಕ್ಕು ಕಿತ್ತುಕೊಳ್ಳಲು ಬಿಡುವುದಿಲ್ಲ. ಭಾರತೀಯ ಆರ್ಥಿಕತೆಯಲ್ಲಿ ದಲಿತರು, ಓಬಿಸಿ, ಆದಿವಾಸಿಗಳು ಎಲ್ಲಿದ್ದಾರೆ? ಕಾರ್ಯಾಂಗ, ನ್ಯಾಯಾಂಗ, ಖಾಸಗಿ ವಲಯದಲ್ಲಿ ಇವರ ಪ್ರತಿನಿಧಿತ್ವ ಎಲ್ಲಿದೆ? ಓಬಿಸಿ, ದಲಿತರು, ಹಿಂದು ಎನ್ನುತ್ತಾರೆ, ಆದರೆ ಅಧಿಕಾರದಲ್ಲಿ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ರು.

ಈ ವೇಳೆ ರಾಹುಲ್‌ ಗಾಂಧಿ ಭಾಷಣಕ್ಕೆ ಸಚಿವ ಕಿರಣ್ ರಿಜುಜು ಆಕ್ಷೇಪ ಎತ್ತಿದ್ರು. ಓಬಿಸಿ ಮೀಸಲಾತಿಗೆ ರಾಜೀವ್ ಗಾಂಧಿ ವಿರೋಧಿಸಿದ್ದರು, ಅದಕ್ಕೆ ರಾಹುಲ್ ಗಾಂಧಿ ಉತ್ತರಿಸಬೇಕು ಎಂದಿ ಕುಟುಕಿದರು. ಇದನ್ನೂ ಓದಿ: ʻಚಾಣಕ್ಯʼನನ್ನು ಉಲ್ಲೇಖಿಸಿ ಅಮಿತ್‌ ಶಾಗೆ ನಗುನಗುತ್ತಲೇ ತಿವಿದ ಪ್ರಿಯಾಂಕಾ- ಗೊಳ್ಳೆಂದು ನಕ್ಕ ಗೃಹಮಂತ್ರಿ

Share This Article