ದಾವಣಗೆರೆ: `ಮಸಾಜ್ ಪ್ರಿಯ’ ವಚನಾನಂದ ಶ್ರೀಗಳಿಗೆ ಇದೀಗ ಸಂಕಷ್ಟ ಹೆಚ್ಚಾಗಿದ್ದು, ಹಾಸ್ಟೆಲ್ ವಿದ್ಯಾರ್ಥಿಗಳೇ ವಚನಾನಂದ ಶ್ರೀ (Vachananad Shri) ವಿರುದ್ಧ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ.
ದಿನದಿಂದ ದಿನಕ್ಕೆ ಪಂಚಮಸಾಲಿ ಗುರುಪೀಠದಲ್ಲಿ ಹೊಸ ಹೊಸ ಬೆಳವಣಿಗೆಯಾಗುತ್ತಿದ್ದು, ಇದೀಗ ಹಾಸ್ಟೆಲ್‌ನ ಮೂವರು ಮಕ್ಕಳು ಸೇರಿ ಮಕ್ಕಳ ಹಕ್ಕು ಕಲ್ಯಾಣ ಮಂಡಳಿಗೆ ಸ್ವಾಮೀಜಿ ವಿರುದ್ಧ ದೂರು ನೀಡಿದ್ದಾರೆ. ವಚನಾನಂದ ಸ್ವಾಮೀಜಿ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರು ಹಿನ್ನೆಲೆ ಮಕ್ಕಳ ಕಲ್ಯಾಣ ಸಮಿತಿ, ಮೂವರು ಮಹಿಳಾ ಸಿಬ್ಬಂದಿ ಸೇರಿದಂತೆ ಮೂವರು ಪುರುಷರು ಹಾಗೂ ಪೊಲೀಸರು ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ಆಪ್ತರು ಸೇರಿದಂತೆ ಇತರರನ್ನು ವಿಚಾರಣೆ ಮಾಡುತ್ತಿದ್ದಾರೆ.

