ಜಿಬಿಎ ವ್ಯಾಪ್ತಿಯಲ್ಲಿ ಇಂದಿನಿಂದ ಜನಗಣತಿ – ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮುನೀಶ್ ಮೌದ್ಗಿಲ್ ಸೂಚನೆ

1 Min Read

ಬೆಂಗಳೂರು: ಜಿಬಿಎ (GBA) ವ್ಯಾಪ್ತಿಯಲ್ಲಿ ಇಂದಿನಿಂದ ಜನಗಣತಿ (Census) ಆರಂಭಗೊಂಡಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಇದರಲ್ಲಿ ಪಾಲ್ಗೊಳ್ಳುವಂತೆ ಜಿಬಿಎ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ (Munish Moudgil) ಸೂಚನೆ ನೀಡಿದ್ದಾರೆ.

ಜನಗಣತಿ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ.1ರಿಂದ ಏ.15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಲಾಗಿತ್ತು. ಈಗ ಏ.16ರಿಂದ ಮೇ 15ರವರಗೆ ಗಣತಿ ನಡೆಯಲಿದೆ. ಸಾರ್ವಜನಿಕರು ಎಲ್ಲರೂ ಈ ಗಣತಿಯಲ್ಲಿ ಪಾಲ್ಗೊಳ್ಳಬೇಕು ಎಂದರು. ಇದನ್ನೂ ಓದಿ: ಮಹಿಳಾ ಮೀಸಲಾತಿಯಲ್ಲಿ ಮುಸ್ಲಿಮ್‌ ಮಹಿಳೆಯರಿಗೆ ಮೀಸಲಾತಿ ನೀಡಿ: ಎಸ್‌ಪಿ ಆಗ್ರಹ

23, 705 ಗಣತಿದಾರರು ಇದ್ದಾರೆ. ಮೇಲ್ವಿಚಾರಕರು 2,912 ಜನ ಇದ್ದಾರೆ. 2027ರಲ್ಲಿ ಫೇಸ್ -2 ಗಣತಿ ಆರಂಭವಾಗಲಿದೆ. ಕಡ್ಡಾಯವಾಗಿ ಜನ ಪಾಲ್ಗೊಳ್ಳಬೇಕು. ಮನೆಯ ಮಾಹಿತಿ, ಕುಟುಂಬದ ಬಗ್ಗೆ ಮೂಲಭೂತ ಮಾಹಿತಿ, ಮನೆಯಲ್ಲಿರುವ ಸೌಲಭ್ಯ, ಜೊತೆಗೆ ಟಿವಿ, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಮೊಬೈಲ್ ವಾಹನದ ಬಗ್ಗೆ ವಿವರ ಕೇಳುತ್ತಾರೆ. ಜೊತೆಗೆ ಬಳಸುವ ಮುಖ್ಯ ಧಾನ್ಯದ ಬಗ್ಗೆ ಮಾಹಿತಿ ಕೇಳುತ್ತಾರೆ. ಜನಗಣತಿಯಲ್ಲಿ ಪಾಲ್ಗೊಳ್ಳೋದು ಶಾಸನಬದ್ಧ ಜವಾಬ್ದಾರಿ. ಉದ್ದೇಶಪೂರ್ವಕವಾಗಿ ಕೊಡದೇ ಇದ್ರೇ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಆ ಹಂತ ಹೋಗಲಾರದು ಅಂತಾ ಅನ್ಸುತ್ತೆ. ಜನರಿಗೆ ಜವಾಬ್ದಾರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ, ಸಂಪುಟ ಪುನರ್ ರಚನೆ ಆಗಲಿ: ದಿನೇಶ್ ಗುಂಡೂರಾವ್

ಮನೆಯ ಮುಂದೆ ಸ್ಟಿಕರ್ ಅಂಟಿಸುತ್ತೇವೆ. ಮನೆಯಲ್ಲಿ ಇರದೇ ಇದ್ದವರು ಆಮೇಲೆ ಅದರಲ್ಲಿ ಸಂಪರ್ಕ ಮಾಡಬಹುದು. ನೈಟ್ ರೌಂಡ್ಸ್ ಕೂಡ ಪ್ಲ್ಯಾನ್‌ನಲ್ಲಿದೆ. ವಿಕಲಚೇತನರಿಗೆ ನಡೆಯೋಕೆ ಸಾಧ್ಯವಿಲ್ಲದೇ ಇದ್ದರೆ ಅಂತವರಿಗೆ ಗಣತಿಯಿಂದ ವಿನಾಯಿತಿ ಕೊಡಲಾಗುತ್ತದೆ. ಈಗ ಮನೆಗಣತಿ ನಡೆಯುತ್ತಿರೋದು. ಪ್ರಶ್ನೆಯಲ್ಲಿ ಜಾತಿಯ ಬಗ್ಗೆ ಪ್ರಶ್ನೆ ಇದೆ. ಆದರೆ ಇದು ಮುಂದಿನ ಫೆಬ್ರವರಿಯಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ

Share This Article