ಯೋಗೀಶ್ ಗೌಡ ಕೊಲೆ ಕೇಸ್; 10 ವರ್ಷಗಳ ಬಳಿಕ ಬುಧವಾರ ಕೋರ್ಟ್ ತೀರ್ಪು – ವಿನಯ್ ಕುಲಕರ್ಣಿಗೆ ಟೆನ್ಷನ್

1 Min Read

ಬೆಂಗಳೂರು: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ (Vinay Kulkarni) ಬುಧವಾರ ಬಿಗ್‌ಡೇ. ಧಾರವಾಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ (Yogesh Gowda Murder Case) ಸಂಬಂಧ ನಾಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟ ಮಾಡಲಿದೆ.

ಸತತ 10 ವರ್ಷಗಳ ನಂತರ ವಿಚಾರಣೆ ಬಳಿಕ ನಾಳೆ ಕೊಲೆ ಕೇಸ್‌ನ ತೀರ್ಪು ಪ್ರಕಟವಾಗಲಿದೆ. ಹೀಗಾಗಿ, ಕುಲಕರ್ಣಿಗೆ ಶಿಕ್ಷೆಯೋ? ಖುಲಾಸೆಯೋ? ಎಂಬ ಆತಂಕ ಹೆಚ್ಚಾಗಿದೆ. ಧಾರವಾಡದಲ್ಲಿ 2016 ಜೂನ್‌ನಲ್ಲಿ ಯೋಗಿಶ್ ಗೌಡ ಕೊಲೆಯಾಗಿತ್ತು. ಶಾಸಕ ವಿನಯ್ ಕುಲಕರ್ಣಿ ಮೇಲೆ ಕೊಲೆಗೆ ಒಳಸಂಚು ಆರೋಪ ಕೇಳಿಬಂದಿತ್ತು. ತನಿಖೆ ನಡೆಸಿದ ಪೊಲೀಸರ ಮುಂದೆ ಆರು ಜನ ಆರೋಪಿಗಳು ಶರಣಾಗಿದ್ದರು. ಯೋಗಿಶ್ ಗೌಡ ಕುಟುಂಬಸ್ಥರ ಮನವಿ ಮೇರೆಗೆ ಸಿಬಿಐಗೆ ನೀಡಲಾಗಿತ್ತು. 2019ರಲ್ಲಿ ಸಿಬಿಐ ಗೆ ನೀಡಿ ರಾಜ್ಯ ಸರ್ಕಾರ ಆದೇಶ ನೀಡಿತ್ತು. ತನಿಖೆ ನಡಸಿದ್ದ ಸಿಬಿಐ ಅಧಿಕಾರಿಗಳು ಶಾಸಕ ವಿನಯ್ ಕುಲಕರ್ಣಿಯನ್ನು ಬಂಧಿಸಿದ್ದರು. ಇದನ್ನೂ ಓದಿ: ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ ರಾಜ್ಯದ 10 ಕಾಂಗ್ರೆಸ್‌ ಶಾಸಕರು

ಸದ್ಯ ವಿನಯ್ ಕುಲಕರ್ಣಿ, ಇಬ್ಬರು ಪೊಲೀಸರು ಸೇರಿದಂತೆ 21 ಜನ ಆರೋಪಿಗಳಿದ್ದಾರೆ. ಆರೋಪಿಗಳ ವಕೀಲರು ಮತ್ತು ಸರ್ಕಾರಿ ವಕೀಲರು ಸಲ್ಲಿಸಿದ್ದ ಲಿಖಿತ ರೂಪದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದ ಕಾರಣ ಏಪ್ರಿಲ್ 9ರಂದು ಕೋರ್ಟ್ ತನ್ನ ಆದೇಶವನ್ನು ಏಪ್ರಿಲ್ 15ಕ್ಕೆ ಮುಂದೂಡಿತ್ತು. ಇದನ್ನೂ ಓದಿ: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ

Share This Article