ಸಿಕ್ಸ್‌ ಬದಲು ಬೌಂಡರಿ ನೀಡಿದ್ದರಿಂದ ಡೆಲ್ಲಿಗೆ ಸೋಲು – ಏನಿದು ವಿವಾದ?

2 Min Read

ನವದೆಹಲಿ: ಗುಜರಾತ್‌ ಟೈಟಾನ್ಸ್‌(Gujarat Titans) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ಸೋಲಲು ಅಂಪೈರ್‌ ಕಾರಣ ಎಂಬ ಚರ್ಚೆ ಆರಂಭವಾಗಿದೆ.

ಡೇವಿಡ್‌ ಮಿಲ್ಲರ್‌ (David Miller) ಸಿಡಿಸಿದ ಸಿಕ್ಸ್‌ (Six) ಅನ್ನು ಅಂಪೈರ್‌ ಬೌಂಡರಿ ನೀಡಿದ್ದರಿಂದ ಈ ವಿಚಾರ ಈಗ ಜೋರಾಗಿ ಚರ್ಚೆ ನಡೆಯುತ್ತಿದೆ.

ಏನಿದು ವಿವಾದ?
ಗುಜರಾತ್‌ ಪರ 19ನೇ ಓವರ್‌ ಎಸೆದಿದ್ದು ಸಿರಾಜ್‌. ಈ ಓವರಿನ ಮೊದಲ ಎಸೆತದಲ್ಲಿ ಮಿಲ್ಲರ್‌ (David Miller) ಸಿಕ್ಸ್‌ ಸಿಡಿಸಿದ್ದರು. ಎರಡನೇ ಎಸೆತವನ್ನು ಬಲವಾಗಿ ಹೊಡೆದಿದ್ದರು. ಚೆಂಡು ಬೌಂಡರಿ ಗೆರೆಯನ್ನು ತಾಗಿ ಹಿಂದಕ್ಕೆ ಬಂದಿದೆ. ಅಂಪೈರ್‌ 4 ರನ್‌ ನೀಡಿದರು. ವಿಡಿಯೋದಲ್ಲಿ ಬಾಲ್‌ ನೇರವಾಗಿ ಬೌಂಡರಿ ಬಳಿ ಹಾಕಲಾಗಿದ್ದ ಪಟ್ಟಿಗೆ ಬಡಿದು ಹಿಂದಕ್ಕೆ ಬರುವಂತೆ ಕಾಣುತ್ತಿದೆ.

ಈಗ ಕ್ರಿಕೆಟ್‌ ಅಭಿಮಾನಿಗಳು ಈ ವಿಡಿಯೋವನ್ನು ಹಂಚಿಕೊಂಡು ಅಂಪೈರ್‌ ರಿಪ್ಲೈ ನೋಡದೇ ಸರಿಯಾಗಿ ತೀರ್ಪು ನೀಡಿಲ್ಲ. ಒಂದು ವೇಳೆ 2 ರನ್‌ ಬಂದಿದ್ದರೆ ಮಿಲ್ಲರ್‌ ಮೇಲೆ ಕೊನೆಯ ಓವರ್‌ನಲ್ಲಿ ಒತ್ತಡ ಕಡಿಮೆ ಇರುತ್ತಿತ್ತು ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಗೆಲ್ಲುವ ಪಂದ್ಯ ಕೈಚೆಲ್ಲಿದ ಡೆಲ್ಲಿ – ಗುಜರಾತ್‌ಗೆ 1 ರನ್‌ ರೋಚಕ ಜಯ 


ಕೊನೆಯಲ್ಲಿ ಸೋಲು
211 ರನ್‌ಗಳನ್ನು ಬೆನ್ನಟ್ಟಿದ ಡೆಲ್ಲಿಗೆ ಕೊನೆಯ 18 ಎಸೆತಗಳಲ್ಲಿ 45 ರನ್‌ ಬೇಕಿತ್ತು. 18ನೇ ಓವರ್‌ನಲ್ಲಿ 9 ರನ್‌ ಬಂದರೆ ಸಿರಾಜ್‌ ಎಸೆದ 19ನೇ ಓವರ್‌ನಲ್ಲಿ 23 ರನ್‌ ಬಂದಿತ್ತು.

ಕೊನೆಯ 6 ಎಸೆತಗಳಲ್ಲಿ 13 ರನ್‌ ಬೇಕಿತ್ತು. ಪ್ರಸಿದ್ಧ್‌ ಕೃಷ್ಣ ಎಸೆದ ಮೊದಲ ಎಸೆತದಲ್ಲಿ ವಿಪ್ರಾಜ್‌ 4 ರನ್‌ ಹೊಡೆದರೆ ಎರಡನೇ ಎಸೆತದಲ್ಲಿ ಕ್ಯಾಚ್‌ ನೀಡಿ ಔಟಾದರು. ಕ್ರೀಸಿಗೆ ಬಂದ ಕುಲದೀಪ್‌ ಯಾದವ್‌ ಮೂರನೇ  ಎಸೆತದಲ್ಲಿ ಒಂದು ರನ್‌ ಓಡಿ ಮಿಲ್ಲರ್‌ಗೆ ಸ್ಟ್ರೈಕ್‌ ನೀಡಿದರು. ನಾಲ್ಕನೇ ಎಸೆತದಲ್ಲಿ ಮಿಲ್ಲರ್‌ ಸಿಕ್ಸ್‌ ಸಿಡಿಸಿದರು.

ಕೊನೆಯ ಎರಡು ಎಸೆತಗಳಲ್ಲಿ 2 ರನ್‌ ಬೇಕಿತ್ತು. ಐದನೇ ಎಸೆತವನ್ನು ಮಿಲ್ಲರ್‌ ಡೀಪ್‌ ಬ್ಯಾಕ್‌ವರ್ಡ್‌ ಸ್ಕ್ಯಾರ್‌ ಲೆಗ್‌ ಕಡೆ ಹೊಡೆದರು. ಕುಲದೀಪ್‌ ಯಾದವ್‌ ಸಿಂಗಲ್‌ ರನ್‌ಗಾಗಿ ಮುಕ್ಕಾಲು ಭಾಗ ಓಡಿದ್ದರು. ಆದರೆ ಮಿಲ್ಲರ್‌ ಒಂಟಿ ರನ್‌ ತೆಗೆದುಕೊಳ್ಳಲಿಲ್ಲ. ಕೊನೆಯ ಎಸೆತ ಬೌನ್ಸ್‌ ಆಗಿತ್ತು. ಬಾಲ್‌ ಬ್ಯಾಟ್‌ಗೆ ತಾಗದೇ ಕೀಪರ್‌ ಕೈ ಸೇರಿತು. ಹೀಗಿದ್ದರೂ ಒಂಟಿ ರನ್‌ ಓಡಿದರು. ಆದರೆ ಕುಲ್‌ದೀಪ್‌ ಯಾದವ್‌ ಕ್ರೀಸ್‌ ತಲುಪುವ ಮೊದಲೇ ಬಟ್ಲರ್‌ ವಿಕೆಟಿಗೆ ಥ್ರೋ ಮಾಡಿ ರನೌಟ್‌ ಮಾಡಿದರು.

Share This Article