26 ರನ್‌ಗಳಿಗೆ 4 ವಿಕೆಟ್‌ ಉರುಳಿದ್ರೂ 119 ರನ್‌ ಜೊತೆಯಾಟ – ಡೆಲ್ಲಿಗೆ ಭರ್ಜರಿ ಜಯ

2 Min Read

– 20 ಇತರೇ ರನ್‌ ಬಿಟ್ಟುಕೊಟ್ಟ ಲಕ್ನೋ

ಲಕ್ನೋ: 26 ರನ್‌ಗಳಿಗೆ 4 ವಿಕೆಟ್‌ ಪತನಗೊಂಡಿದ್ದರೂ ಸಮೀರ್‌ ರಿಜ್ವಿ(Sameer Rizvi ) ಮತ್ತು ಟ್ರಿಸ್ಟನ್ ಸ್ಟಬ್ಸ್‌ (Tristan Stubbs) ಅಜೇಯ ಆಟದ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌(Lucknow Super Giants) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಕ್ನೋ 18.4 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್‌ ಆಯ್ತು ಸುಲಭದ ಸವಾಲನ್ನು ಬೆನ್ನಟ್ಟಿದ ಲಕ್ನೋ 17.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 145 ರನ್‌ ಹೊಡೆದು ಜಯ ಸಾಧಿಸಿತು.

ಹಾಗೆ ನೋಡಿದರೆ ಡೆಲ್ಲಿಯ ಆರಂಭ ಉತ್ತಮವಾಗಿರಲಿಲ್ಲ. ಕೆಎಲ್‌ ರಾಹುಲ್‌ ಮೊದಲ ಎಸೆತದಲ್ಲೇ ಕ್ಯಾಚ್‌ ನೀಡಿ ಔಟಾದರು. ನಿತೀಶ್‌ ರಾಣಾ 15 ರನ್‌, ನಿಸಾಂಕ 1 ರನ್‌, ನಾಯಕ ಅಕ್ಷರ್‌ ಪಟೇಲ್‌ ಶೂನ್ಯಕ್ಕೆ ಔಟಾದಾಗ ಪಂದ್ಯ ಲಕ್ನೋ ಕಡೆ ವಾಲಿತ್ತು. 4.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 26 ರನ್‌ಗಳಿಸಿ ಸಂಕಷ್ಟದಲ್ಲಿದ್ದಾಗ ಇಂಪ್ಯಾಕ್ಟ್‌ ಪ್ಲೇಯರ್‌ ಸಮೀರ್‌ ರಿಜ್ವಿ ಮತ್ತು ಸ್ಟಬ್ಸ್‌ ನಿಧಾನವಾಗಿ ಆಡಿ ಇನ್ನಿಂಗ್ಸ್‌ ಕಟ್ಟತೊಡಗಿದರು. ಇದನ್ನೂ ಓದಿ: ನಿಯಮ ಉಲ್ಲಂಘಿಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ತೆವಾಟಿಯಾ!

ಇಬ್ಬರು ಮುರಿಯದ 5ನೇ ವಿಕೆಟಿಗೆ 76 ಎಸೆತಗಳಲ್ಲಿ 119 ರನ್‌ ಜೊತೆಯಾಟವಾಡಿದರು. ರಿಜ್ವಿ ಅಜೇಯ 70 ರನ್‌(47 ಎಸೆತ, 5 ಬೌಂಡರಿ, 4 ಸಿಕ್ಸ್‌), ಸ್ಟಬ್ಸ್‌ ಅಜೇಯ 39 ರನ್‌(32 ಎಸೆತ, 3 ಬೌಂಡರಿ, 1 ಸಿಕ್ಸ್)‌ ಹೊಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.

ಆರಂಭದಲ್ಲಿ ಬೌಲಿಂಗ್‌ ಉತ್ತಮವಾಗಿದ್ದರೂ ನಂತರ ಲಕ್ನೋ ಇತರೇ ರನ್‌ಗಳನ್ನು ಬಿಟ್ಟುಕೊಟ್ಟಿತ್ತು. ಒಟ್ಟು 20 ಇತರೇ(ಲೆಗ್‌ಬೈ 4, ವೈಡ್‌ 16 ರನ್‌) ಬಿಟ್ಟುಕೊಟ್ಟಿದ್ದು ಸೋಲಿಗೆ ಒಂದು ಕಾರಣ.


ಲಕ್ನೋ ಪರ ಆರಂಭಿಕ ಆಟಗಾರ ಮಿಚೆಲ್‌ ಮಾರ್ಷ್‌ 35 ರನ್‌(28 ಎಸೆತ, 2 ಬೌಂಡರಿ, 3 ಸಿಕ್ಸ್‌), ಅಬ್ದುಲ್‌ ಸಮಾದ್‌ 36 ರನ್‌(25ಎಸೆತ, 3 ಬೌಂಡರಿ, 1 ಸಿಕ್ಸ್‌) ಹೊಡೆದು ತಂಡದ ಮೊತ್ತವನ್ನು ಹಿಗ್ಗಿಸಿದರು. ಇದನ್ನೂ ಓದಿ: 8 ರನ್‌ ಅಂತರದಲ್ಲಿ4 ವಿಕೆಟ್‌ ಬಿದ್ದರೂ ಕೊನೋಲಿ ಏಕಾಂಗಿ ಆಟ – ಪಂಜಾಬ್‌ಗೆ ರೋಚಕ ಜಯ

ಡೆಲ್ಲಿ ಪರ ಲುಂಗಿ ಎನ್‌ಗಿಡಿ ಮತ್ತು ನಟರಾಜನ್‌ ತಲಾ 3 ವಿಕೆಟ್‌, ಕುಲದೀಪ್‌ ಯಾದವ್‌ 2 ವಿಕೆಟ್‌, ಅಕ್ಷರ್‌ ಪಟೇಲ್‌ 1 ವಿಕೆಟ್‌ ಪಡೆದರು.
Share This Article