ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಕೈಚಳಕ – 15 ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಕೇಸ್ ದಾಖಲು

1 Min Read

ಬೆಂಗಳೂರು: 19ನೇ ಆವೃತ್ತಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ (Bengaluru) ಯಶಸ್ವಿಯಾಗಿ ನಡೆದಿದ್ದು, ಅಭಿಮಾನಿಗಳು ಸಂತಸಗೊಂಡಿದ್ದಾರೆ. ಆದ್ರೆ ಎಲ್ಲವೂ ಸುಸೂತ್ರವಾಗಿ ಜರುಗಿದೆ ಎನ್ನುವಾಗಲೇ ಚಿನ್ನಸ್ವಾಮಿ ಕ್ರೀಡಾಂಣಗದಲ್ಲಿ (Chinnaswamy Stadium) ಐಪಿಎಲ್ ಮ್ಯಾಚ್ ವೇಳೆ ಕಳ್ಳರ ಕೈ ಚಳಕ ತೋರಿದ್ದಾರೆ.

ಪಂದ್ಯ ಮುಗಿದ ಬಳಿಕ ಹೊರಗಡೆ ಬರುವಾಗ ಜನಸಂದಣಿಯಲ್ಲಿ ಮೊಬೈಲ್‌ಗಳನ್ನ ಕಳ್ಳತನ (Mobile Theft )ಮಾಡಿದ್ದಾರೆ. ಮೊಬೈಲ್‌ಗಳ ಜೊತೆಗೆ ಪಿಕ್ ಪಾಕೆಟರ್‌ಗಳ ಹಾವಳಿಯೂ ಕಂಡುಬಂದಿದೆ. ಇದನ್ನೂ ಓದಿ: ಡಫಿ ಮಾರಕ ಬೌಲಿಂಗ್‌ – ಪಡಿಕ್ಕಲ್‌, ಕೊಹ್ಲಿ ಬೆಂಕಿ ಬ್ಯಾಟಿಂಗ್‌ಗೆ ಹೈದರಾಬಾದ್‌ ಬರ್ನ್‌!

ಸುಮಾರು 15 ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಕೇಸ್ ಗಳು ದಾಖಲಾಗಿದೆ. ಮೊಬೈಲ್ ಕಳೆದುಕೊಂಡ ಕೆಲವರು ಖುದ್ದಾಗಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರೇ ಇನ್ನೂ ಕೆಲವರು ಇ ಲಾಸ್ಟ್ ಮೂಲಕ ದೂರು ಸಲ್ಲಿಕೆ ಮಾಡಿದ್ದಾರೆ.

ಗೇಟ್ ನಂ 3 ರಲ್ಲಿ ಅತಿ ಹೆಚ್ಚು ಕಳ್ಳತನವಾಗಿರೋ ಮಾಹಿತಿ ಇದೆ. ಸದ್ಯ ದೂರು ಪಡೆದ ಪೊಲೀಸರು ತನಿಖೆಗೆ ಮುಂದಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಬೌಂಡರಿ ಗೆರೆಯ ಬಳಿ ಪಲ್ಟಿಯಾಗಿ ಸಾಲ್ಟ್‌ ಕ್ಯಾಚ್‌ – ಸಿಟ್ಟಿನಿಂದ ಹೊರನಡೆದ ಕ್ಲಾಸೆನ್

Share This Article