60 ದಿನಕ್ಕೆ ಬೇಕಾಗುವಷ್ಟು ಕಚ್ಚಾತೈಲ ಭಾರತದ ಬಳಿಯಿದೆ – ತೈಲದ ಅಭಾವವಿಲ್ಲ, ಇಂಧನ ಪೂರೈಕೆ ಸ್ಥಿರ: ಮತ್ತೆ ಕೇಂದ್ರ ಸ್ಪಷ್ಟನೆ

2 Min Read

ನವದೆಹಲಿ: ದೇಶದಲ್ಲಿ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಪೂರೈಕೆ ಸಂಪೂರ್ಣವಾಗಿ ಸುರಕ್ಷಿತ ಮತ್ತು ನಿಯಂತ್ರಣದಲ್ಲಿದೆ. 60 ದಿನಕ್ಕೆ ಬೇಕಾಗುವಷ್ಟು ಕಚ್ಚಾತೈಲ ಭಾರತದ ಬಳಿಯಿದೆ ಎಂದು ಮತ್ತೆ ಕೇಂದ್ರ ಸರ್ಕಾರ (Central Govt) ಸ್ಪಷ್ಟಪಡಿಸಿದೆ. ಅನಗತ್ಯ ಭೀತಿಯನ್ನು ಸೃಷ್ಟಿಸುವ, ದಾರಿತಪ್ಪಿಸುವ ಮತ್ತು ತಪ್ಪು ಮಾಹಿತಿ ಕಡೆಗೆ ಗಮನ ಕೊಡಬೇಡಿ ಎಂದು ಸರ್ಕಾರ ಮನವಿ ಮಾಡಿದೆ.

ಪೆಟ್ರೋಲಿಯಂ ಸಚಿವಾಲಯದ ಪ್ರಕಾರ, ಭಾರತವು ಒಟ್ಟು 74 ದಿನಗಳ ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಅದರಲ್ಲಿ ಸರಿಸುಮಾರು 60 ದಿನಗಳ ಸ್ಟಾಕ್ ಪ್ರಸ್ತುತ ಲಭ್ಯವಿದೆ. ಇದರಲ್ಲಿ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಎಲ್ಲದರ ಸಂಗ್ರಹವಿದೆ. 27 ದಿನಗಳಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿದ್ದರೂ ಕೂಡ ದೇಶದಲ್ಲಿ ಎಲ್ಲಿಯೂ ಪೆಟ್ರೋಲ್, ಡೀಸೆಲ್ ಅಥವಾ ಎಲ್‌ಪಿಜಿ ಕೊರತೆಯಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ. ಇದನ್ನೂ ಓದಿ:ದಾವಣಗೆರೆಯಲ್ಲಿ ಕಾಂಗ್ರೆಸ್‌ ಬಂಡಾಯ ತಾರಕಕ್ಕೆ – ಸಂಧಾನಕ್ಕೂ ಬಗ್ಗದೇ ಪೈಲ್ವಾನ್‌ ಸೆಡ್ಡು

ಜಾಗತಿಕ ಪರಿಸ್ಥಿತಿ ಏನೇ ಇರಲಿ, ಪ್ರತಿಯೊಬ್ಬ ಭಾರತೀಯರಿಗೂ ಸರಿಸುಮಾರು ಎರಡು ತಿಂಗಳ ನಿರಂತರ ಪೂರೈಕೆ ಲಭ್ಯವಿದೆ ಎಂದು ಸರ್ಕಾರ ಹೇಳಿದೆ. ಮುಂದಿನ ಎರಡು ತಿಂಗಳು ಕಚ್ಚಾ ತೈಲ ಸಂಗ್ರಹಣೆಯನ್ನು ಸಹ ಪೂರ್ವ-ಭದ್ರತೆ ಮಾಡಲಾಗಿದೆ. ಕೆಲವು ದೇಶಗಳು ಇಂಧನ ಬೆಲೆಗಳಲ್ಲಿ ತೀವ್ರ ಏರಿಕೆ, ಪಡಿತರ, ಬೆಸ-ಸಮ ನಿಯಮಗಳು ಮತ್ತು ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುತ್ತಿವೆ. ಭಾರತದಲ್ಲಿ ಅಂತಹ ಯಾವುದೇ ತುರ್ತು ಕ್ರಮಗಳ ಅಗತ್ಯವಿಲ್ಲ ಎಂದು ತಿಳಿಸಿದೆ.

ಪೆಟ್ರೋಲ್ ಪಂಪ್ ಮಾಲೀಕರಿಗೆ ಪರಿಹಾರ:
ಕೆಲವು ಪ್ರದೇಶಗಳಲ್ಲಿ ಜನರು ಗಾಬರಿಯಿಂದ ಬಂದು ಪೆಟ್ರೋಲ್, ಡಿಸೇಲ್ ಖರೀದಿಸುತ್ತಿರುವುದು ವರದಿಯಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ, ತಪ್ಪುದಾರಿ ಗೆಳೆಯುವ ವಿಡಿಯೋಗಳು ಇದಕ್ಕೆ ಕಾರಣ ಎಂದಿದೆ. ಎಲ್ಲಾ ಗ್ರಾಹಕರಿಗೆ ಇಂಧನ ಲಭ್ಯವಾಗುವಂತೆ ಮಾಡಲಾಗಿದೆ. ತೈಲ ಕಂಪನಿಗಳು ಸರಬರಾಜು ಹೆಚ್ಚಿಸಲು ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿವೆ. ಯಾವುದೇ ಪಂಪ್ ಇಂಧನ ಕೊರತೆಯನ್ನು ಎದುರಿಸದಂತೆ ನೋಡಿಕೊಳ್ಳುವ ಮೂಲಕ ಸರ್ಕಾರವು ಪೆಟ್ರೋಲ್ ಪಂಪ್ ಮಾಲೀಕರಿಗೆ ಪೆಟ್ರೋಲ್ ಅಥವಾ ಡಿಸೇಲ್‌ನ ಹಣ ನೀಡಲು ಒಂದು ದಿನದಿಂದ ಮೂರು ದಿನಗಳಿಗೆ ಅವಕಾಶ ನೀಡಿದೆ.

ಸರ್ಕಾರವು ಎಲ್‌ಪಿಜಿ ಕೊರತೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಸಚಿವಾಲಯದ ಪ್ರಕಾರ, ದೇಶೀಯ ಉತ್ಪಾದನೆಯನ್ನು 40% ರಷ್ಟು ಹೆಚ್ಚಿಸಲಾಗಿದೆ. ಇದು ದಿನಕ್ಕೆ 50,000 ಮೆಟ್ರಿಕ್ ಟನ್ ತಲುಪಿದೆ. ಸರಿಸುಮಾರು ಒಂದು ತಿಂಗಳ LPG ಪೂರೈಕೆ ಮಾಡುವಷ್ಟು ಸ್ಟಾಕ್ ಇದೆ. ಆದರೆ ಹೆಚ್ಚುವರಿ ಖರೀದಿ ನಡೆಯುತ್ತಿದೆ. ತೈಲ ಕಂಪನಿಗಳು ಪ್ರತಿದಿನ 5 ಮಿಲಿಯನ್‌ಗಿಂತಲೂ ಹೆಚ್ಚು ಸಿಲಿಂಡರ್‌ಗಳನ್ನು ಪೂರೈಸುತ್ತಿವೆ. ಕಾಳಸಂತೆ ಮತ್ತು ಸಂಗ್ರಹಣೆ ತಡೆಗಟ್ಟಲು ವಾಣಿಜ್ಯ ಸಿಲಿಂಡರ್‌ಗಳ ಹಂಚಿಕೆ 50% ಹೆಚ್ಚಿಸಲಾಗಿದೆ.

ಪೈಪ್ಡ್ ನೈಸರ್ಗಿಕ ಅನಿಲ ಅಗ್ಗ, ಸುರಕ್ಷಿತ ಮತ್ತು ಪರಿಸರಕ್ಕೆ ಉತ್ತಮವಾದ್ದರಿಂದ ಸರ್ಕಾರವು ಅದನ್ನು ಉತ್ತೇಜಿಸುತ್ತಿದೆ. ಭಾರತವು ತಿಂಗಳಿಗೆ 92 ಮಿಲಿಯನ್ ಕ್ಯೂಬಿಕ್ ಮೀಟರ್ ಅನಿಲವನ್ನು ಉತ್ಪಾದಿಸುತ್ತದೆ. ಆದರೆ ಒಟ್ಟು ಅವಶ್ಯಕತೆ ತಿಂಗಳಿಗೆ 191 ಮಿಲಿಯನ್ ಕ್ಯೂಬಿಕ್ ಮೀಟರ್ ಆಗಿದ್ದು, ಭಾರತವು LPGಗಿಂತ ಅನಿಲ ಆಮದಿನ ಮೇಲೆ ಕಡಿಮೆ ಅವಲಂಬಿತವಾಗಿದೆ.ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ಕೊಟ್ಟ ಮೊಸರಿನಲ್ಲಿ ಹುಳು ಪತ್ತೆ – IRCTCಗೆ 10 ಲಕ್ಷ ರೂ. ದಂಡ

Share This Article