ಪ್ಲಾಸ್ಟಿಕ್ ಬಾಟಲ್ ತಂದ್ರೆ ನೋ ಪೆಟ್ರೋಲ್

1 Min Read

ಚಿಕ್ಕಬಳ್ಳಾಪುರ: ರಾಜ್ಯದ ಹಲವು ಕಡೆ ಪೆಟ್ರೋಲ್, ಡೀಸೆಲ್ (Petrol, Diesel) ಸಿಗಲ್ಲ ಎಂಬ ವದಂತಿಯಿಂದ ಜನ ಪ್ಲಾಸ್ಟಿಕ್ ಬಾಟಲಿ ಹಾಗೂ ಕ್ಯಾನ್ ಹಿಡಿದು ಪೆಟ್ರೋಲ್‌ಗಾಗಿ ಮುಗಿಬೀಳುತ್ತಿದ್ದಾರೆ.

ಇದರಿಂದ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು (Oil Marketing Company) ಯಾವುದೆ ಕಾರಣಕ್ಕೂ ಪೆಟ್ರೋಲ್, ಡೀಸೆಲ್ ಬಾಟಲ್‌ಗಳಿಗೆ ಹಾಕದಂತೆ ಖಡಕ್ ಸೂಚನೆ ಕೊಟ್ಟಿವೆ. ಹಾಗಾಗಿ ಚಿಕ್ಕಬಳ್ಳಾಪುರ ನಗರದ (Chikkaballapura) ಬಸವೇಶ್ವರ ಫ್ಯೂಲ್ಸ್ ಮಾಲೀಕ ಭಾಸ್ಕರ್ ತಮ್ಮ ಇಂಡಿಯನ್ ಆಯಿಲ್ ಬಂಕ್ ನಲ್ಲಿ ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಡೀಸೆಲ್ ಹಾಕೋದನ್ನ ನಿಲ್ಲಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ ಗ್ಯಾಸ್ ಬುಕ್ಕಿಂಗ್‌ಗೆ ಹೊಸ ನಿಯಮ – ಗಡುವು ಮುಗಿಯೋ ಮೊದಲೇ ಬುಕ್ ಮಾಡಿದ್ರೆ ಅಕೌಂಟ್ ಬ್ಲಾಕ್

ಇನ್ನೂ ಕೆಲ ರೈತರು (Farmers) ಮದ್ದು ಹೊಡೆಯುವ ಮಷೀನ್‌ಗೆ ಪೆಟ್ರೋಲ್ ಬೇಕು ಅಂತ ಬಂಕ್‌ಗೆ ಬಾಟಲಿ ಹಿಡಿದು ಬರ್ತಿದ್ದು ಅವರಿಗೂ ಪೆಟ್ರೋಲ್ ಹಾಕ್ತಾ ಇಲ್ಲ. ಇದರಿಂದ ರೈತರು ಗಾಡಿಗಳಿಗೆ ಪೆಟ್ರೋಲ್ ತುಂಬಿಸಿಕೊಂಡು ಹೋಗ್ತಿದ್ದಾರೆ. ಇದನ್ನೂ ಓದಿ: LPG ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ – ಕೇಂದ್ರ ಸ್ಪಷ್ಟನೆ

Share This Article