ಲೇಡಿ ರೌಡಿಯನ್ನ ಮಂಚಕ್ಕೆ ಕರೆದ ಪೊಲೀಸ್ ಇನ್‌ಸ್ಪೆಕ್ಟರ್ – ಅಶ್ಲೀಲ ಆಡಿಯೊ, ಮೆಸೇಜ್ ಸಮೇತ ಕಮಿಷನರ್‌ಗೆ ದೂರು

1 Min Read

ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಲೇಡಿ ರೌಡಿ ಮೇಲೆ ಲವ್ ಆಗಿ ಚಿನ್ನು, ಮುದ್ದು ಅಂತಾ ಮಂಚಕ್ಕೆ ಕರೆದು ಪೇಚಿಗೆ ಸಿಲುಕಿದ್ದಾನೆ. ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ಧ ಲೇಡಿ ರೌಡಿ ಕಮಿಷನರ್‌ಗೆ ದೂರು ನೀಡಿದ್ದಾರೆ.

ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ, ನಟೋರಿಯಸ್ ಮಹಿಳಾ ರೌಡಿಶೀಟರ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಇಬ್ಬರ ನಡುವಿನ ಸಂಭಾಷಣೆ ಹಾಗೂ ಅಶ್ಲೀಲ ಚಾಟ್ ಸಮೇತ ಮಹಿಳಾ ರೌಡಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ಪಾಪಣ್ಣ, ಲೇಡಿ ರೌಡಿಶೀಟರ್‌ಳನ್ನು ‘ಚಿನ್ನು’, ‘ಮುದ್ದು’, ‘ಬಂಗಾರಿ’ ಎಂದು ಸಂಬೋಧಿಸಿದ್ದು, ಆಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬರುವಂತೆ ಕರೆಯುತ್ತಿದ್ದರು ಎಂದು ದೂರಲಾಗಿದೆ. ‘ಮುದ್ದು ಬಂಗಾರಿ’ ಎಂದು ಕರೆದು ಲೈಂಗಿಕ ಪ್ರಚೋದನೆ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಾಟ್ಸಪ್ ಸಂದೇಶಗಳ ಮೂಲಕವೂ ಮಂಚಕ್ಕೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

Share This Article