ಯಾರು ಗಾಬರಿಯಾಗೋದು ಬೇಡ, ಎಂದಿನಂತೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇದೆ – ಬಂಕ್ ಮಾಲೀಕರು ಸ್ಪಷ್ಟನೆ

1 Min Read

ಬೀದರ್: ಪೆಟ್ರೋಲ್, ಡಿಸೇಲ್‌ಗಾಗಿ ಜನ ಮುಗಿಬೀಳುತ್ತಿದ್ದನ್ನು ಕಂಡ ಬಂಕ್ ಮಾಲೀಕರು, ಯಾರು ಗಾಬರಿಯಾಗೋದು ಬೇಡ, ಎಂದಿನಂತೆ ಪೆಟ್ರೋಲ್, ಡಿಸೇಲ್ ಸ್ಟಾಕ್ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆ ದೇಶದಲ್ಲಿ ಇಂಧನ, ತೈಲ ಸೇರಿದಂತೆ ಹಲವು ವಸ್ತುಗಳ ಅಭಾವ ಎದುರಾಗಿದೆ. ಹೀಗಾಗಿ ಜನರ ಗಾಬರಿಯಿಂದ ಪೆಟ್ರೋಲ್, ಡಿಸೇಲ್ ಸಿಗಲ್ಲ ಅಂತ ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಇದರಿಂದ ರಶ್ ಆಗುವುದಲ್ಲದೇ ಕಿ.ಮೀಗಟ್ಟಲೇ ಕ್ಯೂ ನಿಲ್ಲುತ್ತಿದ್ದಾರೆ. ಇದನ್ನೂ ಓದಿ: ಅಕ್ಬರ್‌ ರಸ್ತೆಯಲ್ಲಿರೋ ಕಚೇರಿ ತೆರವುಗೊಳಿಸಿ: ಕಾಂಗ್ರೆಸ್‌ಗೆ ನೋಟಿಸ್‌‌

ಈ ಬಗ್ಗೆ ಪೆಟ್ರೋಲ್ ಬಂಕ್‌ನ ಮಾಲೀಕರೊಬ್ಬರು ಮಾಹಿತಿ ನೀಡಿದ್ದು, ಪೆಟ್ರೋಲ್, ಡಿಸೇಲ್ ಸಿಗಲ್ಲ ಅನ್ನೋದು ಸುಳ್ಳು ವದಂತಿ. ಇದನ್ನು ನಂಬಿ ಜನರು ಮಗಿಬೀಳಬೇಡಿ. ಏಕಾಏಕಿ ಇಷ್ಟೊಂದು ಜನರು ಬಂದರೆ ಕೆಲಸ ಮಾಡಲು ನಮ್ಮ ಸಿಬ್ಬಂದಿಗೂ ಮತ್ತು ನಮಗೂ ಸಮಸ್ಯೆಯಾಗುತ್ತಿದೆ. ಹೀಗಾಗಿ ಯಾರು ಸುಳ್ಳು ವಂದತಿಗಳನ್ನು ನಂಬಬೇಡಿ, ಎಲ್ಲರೂ ಆರಾಮಾಗಿ ಬನ್ನಿ, ಸಾಕಷ್ಟು ಪೆಟ್ರೋಲ್, ಡಿಸೇಲ್ ಸಂಗ್ರಹವಿದ್ದು, ಎಲ್ಲರಿಗೂ ಸಿಗುತ್ತೆ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article